ಚಿಕ್ಕಮಗಳೂರು: ಮಗು ಮಾರಾಟ ಆರೋಪ ಹೊತ್ತಿದ್ದ ಕೊಪ್ಪ ಸರ್ಕಾರಿ ಆಸ್ಪತ್ರೆಯ ಪ್ರಸೂತಿ ವೈದ್ಯ ಬಾಲಕೃಷ್ಣ ಪೊಲೀಸರ ಮುಂದೆ ಶರಣಾಗಿದ್ದಾರೆ.
ಅವಿವಾಹಿತ ಯುವತಿಗೆ ಜನಿಸಿದ ಮಗುವೊಂದನ್ನು ವೈದ್ಯ ಬಾಲಕೃಷ್ಣ ಹಾಗೂ ದಾದಿಯರು ಸೇರಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ವೈದ್ಯರು ಹಾಗೂ ದಾದಿಯರು ನಾಪತ್ತೆಯಾಗಿದ್ದರು.
ಇದನ್ನೂ ಓದಿ...ಕೌಟುಂಬಿಕ ಕಲಹ: ದೊಣ್ಣೆಯಿಂದ ಹೊಡೆದು ಅಣ್ಣನನ್ನು ಕೊಂದ ತಮ್ಮ
ಹುಬ್ಬಳ್ಳಿಯಲ್ಲಿ ಬಾಲಕೃಷ್ಣ ಅವರು ತಂಗಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸ್ ತಂಡವೊಂದು ದಾಳಿ ನಡೆಸಿತು. ಆದರೆ, ಇದರ ಬೆನ್ನಲ್ಲೇ ಅವರೇ ಪೊಲೀಸರ ಮುಂದೆ ನನ್ನನ್ನು ಬಂಧಿಸಿ ಎಂದು ಮುಂದೆ ಬಂದಿದ್ದಾರೆ ಎನ್ನಲಾಗಿದೆ.