ಚಿಕ್ಕಮಗಳೂರು: ಅಪರೂಪ ಎನಿಸುವ ಸೀಳು ತುಟಿಯ ಹೆಣ್ಣು ಕರು ಜನಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪ ಬಿನ್ನಡಿ ಗ್ರಾಮದಲ್ಲಿ ನಡೆದಿದೆ.
ಸುರೇಶ್ ಎಂಬುವವರು ಸಾಕಿರುವ ಹಸು ಹೆಣ್ಣು ಕರುವಿಗೆ ಜನ್ಮ ನೀಡಿದ್ದು, ಈ ಕರು ನಾಲಿಗೆಯನ್ನು ಹೊರ ಹಾಕಿಕೊಂಡು ಸೀಳು ತುಟಿಯನ್ನು ಹೊಂದಿದೆ. ಈ ಸ್ಥಿತಿಯಲ್ಲಿ ಹುಟ್ಟಿರುವ ಕರುವನ್ನು ನೋಡಿ ಮಾಲೀಕ ಸುರೇಶ್ ದುಃಖಿತರಾಗಿದ್ದು, ಕರು ಎದ್ದು ನಿಲ್ಲಲು ಆಗದಂತಹ ಪರಿಸ್ಥಿತಿಯಲ್ಲಿದೆ.
ಇನ್ನು ತನ್ನ ತಾಯಿಯ ಬಳಿ ಹೋಗಿ ಹಾಲು ಕುಡಿಯುವ ಶಕ್ತಿಯನ್ನು ಕರು ಕಳೆದುಕೊಂಡಿದ್ದು, ಸ್ಥಳಕ್ಕೆ ಪಶು ವೈದ್ಯರು ಭೇಟಿ ನೀಡಿ ಚಿಕಿತ್ಸೆ ನೀಡುತ್ತಿದ್ದಾರೆ.