ಚಿಕ್ಕಮಗಳೂರು: ಕಾಡಿನಿಂದ ನಾಡಿಗೆ ನೀರು ಕುಡಿಯಲು ಬಂದಿದ್ದ ಜಿಂಕೆಯನ್ನು ಬೀದಿ ನಾಯಿಗಳು ಬೇಟೆಯಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಕಾರಗದ್ದೆ ಗ್ರಾಮಕ್ಕೆ ನೀರು ಕುಡಿಯಲು ಬಂದಿದ್ದ ಜಿಂಕೆಯ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಬಳಿಕ ಗ್ರಾಮಸ್ಥರು ಜಿಂಕೆಯ ಪ್ರಾಣ ಉಳಿಸಲು ಪ್ರಯತ್ನಿಸಿದರೂ ಸಹ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿದ್ದಾರೆ.
ಆದರೆ ಅದಾಗಲೇ ಜಿಂಕೆ ಸಾವನ್ನಪ್ಪಿದೆ. ಜಿಂಕೆಯ ಅಂತ್ಯ ಸಂಸ್ಕಾರವನ್ನು ಸ್ಥಳೀಯ ಅರಣ್ಯ ಪ್ರದೇಶದಲ್ಲಿ ಸಿಬ್ಬಂದಿ ನೆರವೇರಿಸಿದ್ದಾರೆ.