ETV Bharat / state

ದತ್ತಪೀಠ : ಫೆ.7ರಂದು ಸಚಿವ ಸಂಪುಟ ಉಪ ಸಮಿತಿಯಿಂದ ಸಾರ್ವಜನಿಕರ ಅಹವಾಲು ಸ್ವೀಕಾರ

ಲಿಖಿತ ದಾಖಲಾತಿ ಸಲ್ಲಿಸುವ ಮೊದಲು ಮುಜರಾಯಿ ಇಲಾಖೆಯಲ್ಲಿ ಟೋಕನ್ ಪಡೆದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಟೋಕನ್ ಸಂಖ್ಯೆಯ ಪ್ರಕಾರ ಅಹವಾಲು ಸಲ್ಲಿಕೆಗೆ ಜಿಲ್ಲಾಡಳಿತ ಅವಕಾಶ ಮಾಡಿಕೊಡುತ್ತಿದೆ..

ದತ್ತಪೀಠ
ದತ್ತಪೀಠ
author img

By

Published : Feb 5, 2022, 3:56 PM IST

ಚಿಕ್ಕಮಗಳೂರು : ದತ್ತಪೀಠ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟದ ಉಪ ಸಮಿತಿ ಫೆಬ್ರವರಿ 7ರಂದು ನಗರಕ್ಕೆ ಆಗಮಿಸಿ ಸಾರ್ವಜನಿಕರಿಂದ ಲಿಖಿತವಾಗಿ ಅಹವಾಲು ಸ್ವೀಕರಿಸುತ್ತಿದೆ. ಅದಕ್ಕಾಗಿ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಹೇಳಿದ್ದಾರೆ.

ಜಿಲ್ಲಾಧಿಕಾರಿ ಕೆ ಎನ್ ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠ ಎಂ ಹೆಚ್ ಅಕ್ಷಯ್, ಅಪರ ಜಿಲ್ಲಾಧಿಕಾರಿ ರೂಪ ಜಿಲ್ಲಾಧಿಕಾರಿ ಆವರಣವನ್ನು ಪರಿಶೀಲಿಸಿ ಸಿದ್ಧತೆ ಕುರಿತು ಸಭೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲಿ ಸಾರ್ವಜನಿಕರು ಕುಳಿತುಕೊಳ್ಳಲು ಶಾಮಿಯಾನ, ಕುರ್ಚಿಯನ್ನು ಹಾಕುತ್ತಿದ್ದು, ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಿದೆ.

ಧ್ವನಿವರ್ಧಕದ ಮೂಲಕ ಟೋಕನ್ ನಂಬರ್ ಹೇಳುತ್ತಿದ್ದಂತೆ ಸಂಬಂಧಿಸಿದವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣಕ್ಕೆ ತೆರಳಿ ಲಿಖಿತ ಅಹವಾಲು ಸಲ್ಲಿಸಬಹುದಾಗಿದೆ.

ಸಂಪುಟ ಉಪ ಸಮಿತಿಯಿಂದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ.. ಈ ಬಗ್ಗೆ ಡಿಸಿ ಮಾಹಿತಿ ನೀಡಿರುವುದು..

ದತ್ತಪೀಠ ವಿಷಯಕ್ಕೆ ಸಂಬಂಧಿಸಿದಂತೆ ಅಗತ್ಯ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ನ್ಯಾಯಾಲಯ ಸರ್ಕಾರಕ್ಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಕಾನೂನು ಸಚಿವ ಮಾಧುಸ್ವಾಮಿ, ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ಅವರನ್ನೊಳಗೊಂಡ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಿದೆ.

ಈ ಸಮಿತಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಫೆಬ್ರವರಿ 7ರಂದು ಬೆಳಗ್ಗೆ 10.30ಕ್ಕೆ ಅಗತ್ಯ ದಾಖಲೆಗಳನ್ನೊಳಗೊಂಡ ಲಿಖಿತ ಅಹವಾಲುಗಳನ್ನು ಸ್ವೀಕರಿಸುತ್ತಿದ್ದು, ಸಾರ್ವಜನಿಕರಾಗಲಿ, ವಿವಿಧ ಸಂಘ-ಸಂಸ್ಥೆಗಳಾಗಲಿ ಐದು ಜನರು ಮೀರದಂತೆ ತೆರಳಿ ಉಪಸಮಿತಿಗೆ ಮಾಹಿತಿ ನೀಡಬಹುದಾಗಿದೆ.

ಲಿಖಿತ ದಾಖಲಾತಿ ಸಲ್ಲಿಸುವ ಮೊದಲು ಮುಜರಾಯಿ ಇಲಾಖೆಯಲ್ಲಿ ಟೋಕನ್ ಪಡೆದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಟೋಕನ್ ಸಂಖ್ಯೆಯ ಪ್ರಕಾರ ಅಹವಾಲು ಸಲ್ಲಿಕೆಗೆ ಜಿಲ್ಲಾಡಳಿತ ಅವಕಾಶ ಮಾಡಿಕೊಡುತ್ತಿದೆ.

ಸಚಿವ ಸಂಪುಟದ ಉಪ ಸಮಿತಿ ಮುಂದೆ ಚರ್ಚೆ ನಡೆಸಲು ಅವಕಾಶವಿಲ್ಲ, ದಾಖಲಾತಿ ಮೂಲಕ ಲಿಖಿತ ಹೇಳಿಕೆಯೊಂದಿಗೆ ಮಾಹಿತಿ ನೀಡಲಷ್ಟೇ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಹೇಳಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.