ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದಿಂದ ನಡೆಯುತ್ತಿರುವ ದತ್ತ ಜಯಂತಿಯ ಅಂತಿಮ ದಿನವಾದ ಇಂದು, ಪ್ರತಿಯೊಬ್ಬ ಮಾಲಾಧಾರಿಗಳು ದತ್ತ ಪೀಠಕ್ಕೆ ತೆರಳಿ ದತ್ತ ಪಾದುಕೆ ದರ್ಶನ ಪಡೆದರು.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು, ಹೊನ್ನಮ್ಮನ ಹಳ್ಳದಿಂದ ದತ್ತಪೀಠದವರೆಗೆ ಪಾದಯಾತ್ರೆ ಮೂಲಕ ಸಾಗಿ ದತ್ತ ಪೀಠದ ಗುಹೆಯಲ್ಲಿರುವ ಪಾದುಕೆಯ ದರ್ಶನ ಪಡೆದಿದ್ದಾರೆ. ನಂತರ ಜಿಲ್ಲಾಡಳಿತ ನಿರ್ಮಿಸಿರುವ ಶೆಡ್ನಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.
ಓದಿ: ಎಸ್.ಎಲ್.ಧರ್ಮೇಗೌಡ ನಿಧನ: ವಿಧಾನಪರಿಷತ್ ಸಚಿವಾಲಯಕ್ಕೆ ಒಂದು ದಿನದ ರಜೆ
ಇಂದು ದತ್ತಪೀಠದಲ್ಲಿ ಸುಮಾರು 2,000ಕ್ಕೂ ಹೆಚ್ಚು ದತ್ತ ಮಾಲಾಧಾರಿಗಳು ಪಾದುಕೆಯ ದರ್ಶನ ಪಡೆದಿದ್ದಾರೆ.