ETV Bharat / state

ಬಿಜೆಪಿಯವರು ಈಗೇನ್​ ಬೇಕೋ ಅದನ್ನೇ ಮಾಡಿಕೊಳ್ಳಲಿ: ಮುಂದೆ ನಮ್ಮ ಸರ್ಕಾರ ಬಂದಾಗ ಎಲ್ಲ ರಿವರ್ಸ್​ ಎಂದ ಡಿಕೆಶಿ - ಬಿಜೆಪಿ ವಿರುದ್ಧ ಡಿ ಕೆ ಶಿವಕುಮಾರ್ ಆಕ್ರೋಶ

ನಾನು - ನನ್ನ ಪತ್ನಿ ಇಬ್ಬರೂ ಜೇಮ್ಸ್ ಸಿನಿಮಾಗೆ ಹೋಗುತ್ತೇವೆ. ಬೆಳಗ್ಗೆಯೇ ನನ್ನ ಹೆಂಡತಿಗೆ ಈ ಬಗ್ಗೆ ಹೇಳಿದ್ದೇನೆ. ಈಗಾಗಲೇ ನನ್ನ ಮಗ ಸಿನೆಮಾ ನೋಡಲು ವ್ಯವಸ್ಥೆ ಮಾಡಿದ್ದಾನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ತಿಳಿಸಿದ್ದಾರೆ.

d-k-shivakumar
ಡಿ. ಕೆ ಶಿವಕುಮಾರ್
author img

By

Published : Mar 17, 2022, 8:53 PM IST

Updated : Mar 17, 2022, 9:03 PM IST

ಚಿಕ್ಕಮಗಳೂರು: ಪರಿಷತ್‍ನಲ್ಲಿ ಮತಾಂತರ ನಿಷೇಧ ಕಾಯ್ದೆ ಪಾಸ್‍ಗೆ ಬಿಜೆಪಿ ಸಿದ್ಧತೆ ನಡೆಸಿದ ಹಿನ್ನೆಲೆ ಪ್ರತಿಕ್ರಿಯಿಸಿದ ಡಿ. ಕೆ ಶಿವಕುಮಾರ್, ನಾವು ಈ ಕಾಯ್ದೆಯನ್ನು ವಿರೋಧಿಸುತ್ತಿದ್ದೇವೆ. ಅವರು ಏನು ಬೇಕೋ ಅದನ್ನ ಮಾಡಿಕೊಳ್ಳಲಿ. ಜನರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮುಂದೆ ನಮ್ಮ ಸರ್ಕಾರ ಬರುತ್ತೆ. ಆಗ ಎಲ್ಲಾ ರಿವರ್ಸ್ ಮಾಡುತ್ತೇವೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಮಾತನಾಡಿದರು

ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಡಿಜಿಟಲ್ ಸದಸ್ಯತ್ವ ಅಭಿಯಾನದ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದ ಅವರು, ಒಬ್ಬೊಬ್ಬರು ಒಂದೊಂದು ರೀಸನ್ ಹೇಳ್ತಿದ್ದಾರೆ. ನಾನು ಯಾವುದನ್ನೂ ಕೇಳಲ್ಲ. ಹೆಚ್ಚು ಸದಸ್ಯತ್ವ ಮಾಡಿಸಿದವರಿಗೆ ನಾಯಕತ್ವದಲ್ಲಿ ಅವಕಾಶ ಸಿಗಲಿದೆ. ಕಾಂಗ್ರೆಸ್ ಪಕ್ಷಕ್ಕೆ ಮೆಂಬರ್ ಮಾಡಿಸದಿದ್ದರೆ ವೋಟು ಹೇಗೆ ತೆಗೆದುಕೊಳ್ತಾರೆ. ನಮ್ಮ ಪಕ್ಷಕ್ಕೆ ಮೆಂಬರ್​ಶಿಪ್​ ಫಂಡೇಷನ್ ಎಲ್ಲರ ಕೈನಲ್ಲೂ ಮಾಡಿಸುತ್ತೇವೆ ಎಂದರು.

ಜೇಮ್ಸ್ ಸಿನಿಮಾಗೆ ಹೋಗುತ್ತೇವೆ.. ನಾನು-ನನ್ನ ಪತ್ನಿ ಇಬ್ಬರೂ ಜೇಮ್ಸ್ ಸಿನಿಮಾಗೆ ಹೋಗುತ್ತೇವೆ. ಬೆಳಗ್ಗೆಯೇ ನನ್ನ ಹೆಂಡತಿಗೆ ಈ ಬಗ್ಗೆ ಹೇಳಿದ್ದೇನೆ. ಈಗಾಗಲೇ ನನ್ನ ಮಗ ಸಿನೆಮಾ ನೋಡಲು ವ್ಯವಸ್ಥೆ ಮಾಡಿದ್ದಾನೆ ಎಂದು ತಿಳಿಸಿದರು.

ಕಾಂಗ್ರೆಸ್ ಹಿರಿಯ ನಾಯಕಿ ಮೋಟಮ್ಮರಿಗೆ ಅವಮಾನ?.. ಚಿಕ್ಕಮಗಳೂರು ಜಿಲ್ಲೆಯ ಎನ್​ಆರ್ ​ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಕಾಂಗ್ರೆಸ್ ಹಿರಿಯ ನಾಯಕಿ ಮೋಟಮ್ಮರಿಗೆ ಡಿ.ಕೆ. ಶಿವಕುಮಾರ್ ಅವಮಾನ ಮಾಡಿದ್ರಾ? ಎಂಬ ಪ್ರಶ್ನೆ ಕಾರ್ಯಕರ್ತರಿಗೆ ಕಾಡತೊಡಗಿದೆ.

ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿ ಇಡೀ ಜಿಲ್ಲೆಯಲ್ಲಿ ಕಳಪೆ ಸಾಧನೆ ಹಿನ್ನೆಲೆ ಸಭೆಯಲ್ಲೇ ಮೋಟಮ್ಮ ವಿರುದ್ಧ ಡಿ. ಕೆ ಶಿವಕುಮಾರ್ ಗರಂ ಆಗಿದ್ದಾರೆ. ಈ ಬಗ್ಗೆ ಸಮಜಾಯಿಷಿ ನೀಡಲು ಕಾರು ಬಳಿ ಬಂದು ಕ್ಷಮೆ ಕೇಳಿದ ಹಿರಿಯ ನಾಯಕಿ ಮೋಟಮ್ಮ ಅವರಿಗೆ ನೋ.. ನೋ.. ಸಾರಿ ಮಾತನಾಡಬೇಡಿ ಎಂದು ಡಿ. ಕೆ ಶಿವಕುಮಾರ್ ಹೇಳಿದ್ದಾರೆ. ನೂರಾರು ಜನರ ಮಧ್ಯೆಯೇ ಹಿರಿಯ ನಾಯಕಿಗೆ ಪ್ರತಿಕ್ರಿಯೆ ನೀಡದೆ ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಓದಿ: ಕಾಂಗ್ರೆಸ್ ದೇಶವನ್ನು ಮತ್ತೆ ಮುನ್ನಡೆಸುವ ಪ್ರಬಲ ರಾಜಕೀಯ ಶಕ್ತಿಯಾಗಿ ಎದ್ದು ಬರಲಿದೆ: ಸಿದ್ದರಾಮಯ್ಯ

Last Updated : Mar 17, 2022, 9:03 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.