ಚಿಕ್ಕಮಗಳೂರು: ಭಗವದ್ಗೀತೆಯನ್ನು ಓದಿದವರು ಯಾರೂ ಭಯೋತ್ಪಾದಕರಾಗಿಲ್ಲ. ಬದಲಿಗೆ ಅವರು ಜೀವನದಲ್ಲಿ ಸಾರ್ಥಕತೆ ಮೆರೆದಿದ್ದಾರೆ ಎಂದು ಸಿ.ಟಿ.ರವಿ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಗವದ್ಗೀತೆ ಮಹಾತ್ಮ ಗಾಂಧಿ, ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರಿಗೆ ಆದರ್ಶವಾಗಿದೆ. ಅದರಲ್ಲಿ ಆಕ್ಷೇಪಾರ್ಹ ಸಂಗತಿಗಳಿದ್ದರೆ ಹೇಳಲಿ. ಗಾಂಧಿ, ತಿಲಕ್, ನೆಹರು ಸೇರಿದಂತೆ ಅನೇಕರಿಗೆ ಪ್ರೇರಣೆ ನೀಡಿದೆ. ಭಗವದ್ಗೀತೆ ಕೆಟ್ಟ ಕೆಲಸಗಳಿಗೆ ಪ್ರಚೋದನೆ ನೀಡಲ್ಲ. ಅದು ಪ್ರೇರಣೆ ನೀಡುತ್ತದೆ ಎಂದರು.
ಯಾರಿಗೆ ಜೀವನ ಸಾರ್ಥಕತೆ ಬೇಕೋ ಅಂಥವರು ಭಗವದ್ಗೀತೆಯಿಂದಲೂ ಪ್ರೇರಣೆ ಪಡೆಯುತ್ತಾರೆ. ದೇಶದಲ್ಲಿ ಭಗವದ್ಗೀತೆಯನ್ನು ಓದಿ ಭಯೋತ್ಪಾದಕರಾದಂತಹ ಒಂದು ಉದಾಹರಣೆ ಇಲ್ಲ ಎಂದರು.
ಇದನ್ನೂ ಓದಿ: ಬಸ್ ದುರಂತ: ಮೃತರ ಕುಟುಂಬಕ್ಕೆ ತಲಾ 1 ಲಕ್ಷ ರೂ. ನೀಡಿದ ಸಚಿವ ಶ್ರೀರಾಮುಲು