ETV Bharat / state

ಸಿ.ಎಂ. ಇಬ್ರಾಹಿಂ ಜೀವನಕ್ಕಿಂತ ದೇವದಾಸಿಯರ ಜೀವನವೇ ಪವಿತ್ರವಾದದ್ದು: ಸಿ.ಟಿ. ರವಿ ಕಿಡಿ - Latest News For C.T Ravi

ವಿಧಾನ ಪರಿಷತ್​ ಸದಸ್ಯ ಸಿ.ಎಂ. ಇಬ್ರಾಹಿಂ ಅವರಿಗೆ ದೇವದಾಸಿಯರ ಹಿನ್ನಲೆ ಗೊತ್ತಿಲ್ಲ. ಅವರದ್ದು ಪವಿತ್ರವಾದಂತಹ ಬದುಕು. ಆದ್ರೆ ಇಬ್ರಾಹಿಂ ಜೀವನಕ್ಕಿಂತ ಪವಿತ್ರವಾದದ್ದು ದೇವದಾಸಿಯರ ಬದುಕು ಎಂದು ಸಚಿವ ಸಿ.ಟಿ. ಹೇಳಿದ್ದಾರೆ.

ct-ravi
ಸಿ.ಟಿ ರವಿ
author img

By

Published : Jan 28, 2020, 7:31 PM IST

ಚಿಕ್ಕಮಗಳೂರು: ಗೆದ್ದ ಅನರ್ಹ ಶಾಸಕರನ್ನು ದೇವದಾಸಿಯರಿಗೆ ಹೋಲಿಸಿದ್ದ ಕಾಂಗ್ರೆಸ್​ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಅವರ ಹೇಳಿಕೆಗೆ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಟಾಂಗ್ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿ.ಎಂ. ಇಬ್ರಾಹಿಂ ಅವರಿಗೆ ದೇವದಾಸಿಯರ ಹಿನ್ನಲೆ ಗೊತ್ತಿಲ್ಲ. ಅವರದ್ದು ಪವಿತ್ರವಾದಂತಹ ಬದುಕು. ಅವರದ್ದು ಕಲೆಯ ಜೊತೆ ಸಮರ್ಪಿತವಾದಂತಹ ಬದುಕು. ದೇವದಾಸಿಯರಿಗೆ ಅಪಮಾನ ಮಾಡಿರೋದನ್ನು ನಾನು ಖಂಡಿಸುತ್ತೇನೆ.

ಸಿ.ಎಂ. ಇಬ್ರಾಹಿಂ ವಿರುದ್ಧ ಸಚಿವ ಸಿ.ಟಿ. ರವಿ ಕಿಡಿ

ಸಿ. ಎಂ. ಇಬ್ರಾಹಿಂ ಅವರು ದೇವದಾಸಿಯರಿಗೆ ಅಪಮಾನ ಮಾಡಿರೋದು ಅವರ ಕೀಳು ಮನಸ್ಥಿತಿಯನ್ನು ತೋರಿಸುತ್ತದೆ. ಅದಕ್ಕೂ ಮುಂಚೆ ದೇವದಾಸಿಯರ ಜೀವನ ಹೇಗೆ ಇಬ್ರಾಹಿಂ ಅವರ ಜೀವನ ಹೇಗೆ ಅನ್ನೋದನ್ನು ಅವರೇ ಹೋಲಿಕೆ ಮಾಡಿಕೊಳ್ಳಲಿ. ಸಿ.ಎಂ. ಇಬ್ರಾಹಿಂ ಅವರ ಜೀವನಕ್ಕಿಂತ ದೇವದಾಸಿಯರ ಜೀವನ ಪವಿತ್ರವಾಗಿದೆ ಎಂದು ಸಿ.ಎಂ. ಇಬ್ರಾಹಿಂ ವಿರುದ್ಧ ಸಚಿವ ಸಿ. ಟಿ. ಕಿಡಿಕಾರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.