ETV Bharat / state

ಎಲ್ಲಾ ಸಮಯದಲ್ಲೂ ಮ್ಯಾಜಿಕ್​ ವರ್ಕೌಟ್​ ಆಗೋದಿಲ್ಲ: ಸಿ.ಟಿ.ರವಿ

ಜನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಒಂದು ರೀತಿ ಯೋಚಿಸಿದ್ರೆ, ಲೋಕಸಭೆಗೆ ಇನ್ನೊಂದು ರೀತಿ ಯೋಚನೆ ಮಾಡುತ್ತಾರೆ. ಒಂದು ಚುನಾವಣೆಗೆ ಕೇಂದ್ರ ನಾಯಕತ್ವ ಹಾಗೂ ಪಕ್ಷದ ಸಂಘಟನೆ ಎಷ್ಟು ಪರಿಣಾಮಕಾರಿಯಾಗುತ್ತೋ ಅದೇ ರೀತಿ ಸ್ಥಳೀಯ ನಾಯಕತ್ವದ ಮೇಲೂ ಕೂಡ ಅಷ್ಟೇ ಪರಿಣಾಮ ಬೀರುತ್ತೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ದೆಹಲಿ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದರು.

CT Ravi
ಎಲ್ಲಾ ಸಮಯದಲ್ಲೂ ಮ್ಯಾಜಿಕ್​ ವರ್ಕೌಟ್​ ಆಗೋದಿಲ್ಲ: ಸಿ.ಟಿ ರವಿ
author img

By

Published : Feb 11, 2020, 4:23 PM IST

ಚಿಕ್ಕಮಗಳೂರು: ಒಂದು ಚುನಾವಣೆಗೆ ಕೇಂದ್ರ ನಾಯಕತ್ವ ಹಾಗೂ ಪಕ್ಷದ ಸಂಘಟನೆ ಎಷ್ಟು ಪರಿಣಾಮಕಾರಿಯಾಗುತ್ತೋ ಸ್ಥಳೀಯ ನಾಯಕತ್ವ ಕೂಡ ಅಷ್ಟೇ ಪರಿಣಾಮಕಾರಿ ಬೀರುತ್ತದೆ. ಅಷ್ಟೇ ಅಲ್ಲದೆ, ಎಲ್ಲಾ ಸಮಯದಲ್ಲೂ ಮ್ಯಾಜಿಕ್​ ನಡೆಯೋದಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದರು.

ಎಲ್ಲಾ ಸಮಯದಲ್ಲೂ ಮ್ಯಾಜಿಕ್​ ವರ್ಕೌಟ್​ ಆಗೋದಿಲ್ಲ: ಸಿ.ಟಿ.ರವಿ

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮ್ಮ ಸ್ವಾರ್ಥಕ್ಕಾಗಿ ಚುನಾವಣಾ ವ್ಯವಸ್ಥೆಯ ಮೇಲೆ ಆರೋಪ ಮಾಡಬಾರದು. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಛತ್ತೀಸ್​ಗಢದಲ್ಲಿ ಕಾಂಗ್ರೆಸ್​ ಗೆದ್ದಾಗ ಮೋದಿ ವಿರುದ್ಧ ಮಾತನಾಡಿದರು. ಮಧ್ಯಪ್ರದೇಶದಲ್ಲಿ ಗೆದ್ದಾಗ ಆ ಗೆಲುವು ಮುಂಬರುವ ಚುನಾವಣೆ ದಿಕ್ಸೂಚಿ ಎಂದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಕಂಡಿದೆ. ಹಾಗಾಗಿ ಇದು ಮೋದಿ ವಿರುದ್ಧದ ಜನಾದೇಶವಲ್ಲ ಎಂದು ಹೇಳಿದರು.

ದೇಶದ ಜನರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಒಂದು ರೀತಿ ಯೋಚಿಸಿದರೆ, ಲೋಕಸಭೆಗೆ ಇನ್ನೊಂದು ರೀತಿ ಯೋಚನೆ ಮಾಡುತ್ತಾರೆ. ನಮ್ಮ ಕೊರತೆ ಏನಿದೆ ಎಂಬುದನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.