ETV Bharat / state

ಪಂಚರ್ ಹಾಕೋರಿಗಿಂತ ದಿಕ್ಕು ತಪ್ಪಿಸುವವರೇ ಅಪಾಯಕಾರಿ... 'ಕೈ'ಗೆ ಬಿಸಿ ತಾಕಿಸಿದ ಸಿ.ಟಿ. ರವಿ - ಸಿ.ಟಿ ರವಿ ಸುದ್ದಿ

ಮಂಗಳೂರು ಘಟನೆಗೆ ಕಾಣದ ಕೈಗಳು ಎಂದರೆ ತಪ್ಪಾಗುತ್ತದೆ ಕಾಣುವ ಕಾಂಗ್ರೆಸ್​ನ ಕೈಗಳೇ ಈ ರೀತಿಯಾಗಿ ಮಾಡಿದೆ ಎಂದು ಸಿ.ಟಿ ರವಿ ಕಾಂಗ್ರೆಸ್​​​ ಬಗ್ಗೆ ನೇರ ಆರೋಪ ಮಾಡಿದ್ದಾರೆ.

CT ravi
ಸಿ.ಟಿ ರವಿ
author img

By

Published : Dec 23, 2019, 7:47 PM IST

ಚಿಕ್ಕಮಗಳೂರು: ತೇಜಸ್ವಿ ಸೂರ್ಯ ಅವರು ಪಂಚರ್​ ಹಾಕೋರು ಎಂಬುದನ್ನು ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಚಿಕ್ಕಮಗಳೂರಿನಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಚಿವ ಸಿ.ಟಿ ರವಿ

ಯಾವುದೇ ವೃತ್ತಿ ಮಾಡೋರನ್ನು ಕೀಳು ಎಂದೂ ಭಾವಿಸಲು ಸಾಧ್ಯವಿಲ್ಲ. ತಿಳಿವಳಿಕೆ ಇಲ್ಲದವರು ಎಂಬುದಕ್ಕೆ ಮಾರ್ಮಿಕವಾಗಿ ಹಾಗೇ ಹೇಳಿರಬಹುದು. ಸಿಎಎಯಿಂದ ಯಾರಿಗೆ ತೊಂದರೆ ಆಗಿದೆ ಎಂದೂ ಯಾರು ಹೇಳುತ್ತಿಲ್ಲ ಎಂದರು. ಪಂಚರ್​ ಹಾಕೋರು ಬೀದಿಗೆ ಇಳಿದರು ಅನ್ನೋದಕ್ಕಿಂತ ಎಲ್ಲ ತಿಳಿವಳಿಕೆ ಇದ್ದು ರಾಜಕೀಯ ಕಾರಣಕ್ಕೆ ದಿಕ್ಕು ತಪ್ಪಿಸುವವರು ತುಂಬಾ ಅಪಾಯಕಾರಿ. ಪಂಚರ್​ ಹಾಕೋರು ಒಂದು ಕಲ್ಲು ಹೊಡೆದು ಮನೆ ಸೇರಿಕೊಳ್ಳುತ್ತಾರೆ. ಆದರೆ, ಇವರು ಮನೆಹಾಳು ಕೆಲಸ ಮಾಡುತ್ತಲೇ ಇರುತ್ತಾರೆ. ಕಂಡವರ ಮಕ್ಕಳನ್ನು ಬಾವಿಗೆ ನೂಕಿ ಆಳ ನೋಡೋರು ತುಂಬಾ ಅಪಾಯಕಾರಿ ಎಂದು ಕಿಡಿಕಾರಿದ್ದಾರೆ.

ನಾನು ಖಾದರ್ ಅವರನ್ನೇ ಕೇಳಿದ್ದೇನೆ, ಬೆಂಕಿ ಹಾಕುತ್ತೀನಿ ಎಂದು ಹೇಳಿದ್ದೀರಲ್ಲಾ ನಿಮ್ಮ ತರಹವೇ ಬಹುಸಂಖ್ಯಾತರು ಅದೇ ದಾಟಿಯಲ್ಲಿ ಯೋಚನೆಗೆ ಇಳಿದರೇ ಪರಿಸ್ಥಿತಿ ಏನು ಆಗುತ್ತೇ ಎಂದೂ ಯೋಚಿಸಿದ್ದೀರಾ? ಎಂದು ಕೇಳಿದ್ದೇನೆ. ನಿಮ್ಮ ಮನಸ್ಥಿತಿಯ ಜನರೇ ಗೋದ್ರಾದಲ್ಲಿ ಬೆಂಕಿ ಹಾಕಿದ್ದು, ಆ ಮೇಲೆ ಆಗಿದ್ದ ಪರಿಣಾಮ ಎಚ್ಚರ ಇರಲಿ ಎಂದು ಎಚ್ಚರಿಸಿದರು.

ಪ್ರಚೋದನೆ ಮಾಡಿದ ಖಾದರ್ ಅವರನ್ನು ಬಿಟ್ಟು ನನ್ನ ಮಾತುಗಳನ್ನು ತಿರುಚಿ ಹೇಳಲು ಪ್ರಾರಂಭ ಮಾಡಿದ್ದಾರೆ. ಸಿಎಎ ಬಗ್ಗೆ ಗೊತ್ತಿದ್ದು ವಿರೋಧ ಮಾಡಿದರೇ ಅದಕ್ಕೆ ಅರ್ಥ ಇದೆ. ಗೊತ್ತಿಲ್ಲದೇ ಕರೆದರೇ ಏನು ಹೇಳಬೇಕು. ಒಂದು ವೇಳೆ ಆ ಬಿಲ್ ಬಗ್ಗೆ ವಿರೋಧ ಮಾಡೋದು ಆಗಿದ್ದರೇ ಶಾಂತಿಯುತ ಹೋರಾಟ ಬಿಟ್ಟು ಬೆಂಕಿ ಹಾಕೋದನ್ನು ಯಾಕೆ ಆಯ್ಕೆ ಮಾಡಿಕೊಂಡರು. ಈ ಘಟನೆಗೆ ಕಾಣದ ಕೈಗಳು ಎಂದರೇ ತಪ್ಪಾಗುತ್ತದೆ ಕಾಣುವ ಕಾಂಗ್ರೆಸ್​ನ ಕೈಗಳೇ ಈ ರೀತಿಯಾಗಿ ಮಾಡಿದೆ ಎಂದು ಸಿ.ಟಿ ರವಿ ಕಾಂಗ್ರೆಸ್ ಬಗ್ಗೆ ನೇರ ಆರೋಪ ಮಾಡಿದ್ದಾರೆ.

ಇದೇ ವೇಳೆ, ಜಾರ್ಖಂಡ್​ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿ, ಅಪ ಪ್ರಚಾರದ ನಡುವೆ ಮತ್ತೆ ಜಾರ್ಖಂಡ್ ನಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂಬ ನಂಬಿಕೆ ಇತ್ತು. ಕೆಲವೊಮ್ಮೆ ಮತ ವಿಭಜನೆ ಆದಾಗ ಕೆಲವು ಕಡೆ ಲಾಭ ತಂದು ಕೊಡುತ್ತದೆ. ಕೆಲವು ಕಡೆ ನಷ್ಟ ತಂದು ಕೊಡುತ್ತದೆ. ಇದರ ಬಗ್ಗೆ ಯೋಚನೆ ಮಾಡಬೇಕು ಎಂದು ತಿಳಿಸಿದ್ದಾರೆ.

Intro:Kn_Ckm_05_Zarkand_result_reaction_av_7202347Body:ಚಿಕ್ಕಮಗಳೂರು :-

ಅಪ ಪ್ರಚಾರದ ನಡುವೆ ಮತ್ತೆ ಜಾರ್ಖಂಡ್ ನಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ನಂಬಿಕೆ ಇತ್ತು.ಎಂದೂ ಜಾರ್ಖಂಡ್ ಚುನಾವಣಾ ಫಲಿತಾಂಶದ ಬಗ್ಗೆ ಸಚಿವ ಸಿ ಟಿ ರವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ನೋಡಬೇಕು ಫಲತಾಂಶದ ವಿವರವನ್ನು.ಒಂದೊಂದು ಕ್ಷೇತ್ರದ ಬಗ್ಗೆ ಅಧ್ಯಯನ ಮಾಡಬೇಕು.ಕೆಲವೊಮ್ಮೆ ಮತ ವಿಭಜನೆ ಆದಾಗ ಕೆಲವು ಕಡೆ ಲಾಭ ತಂದೂ ಕೊಡುತ್ತದೆ.ಕೆಲವು ಕಡೆ ನಷ್ಟ ತಂದೂ ಕೊಡುತ್ತದೆ.ಇದರ ಬಗ್ಗೆ ಯೋಚನೆ ಮಾಡಬೇಕು.ಎಂದೂ ಚಿಕ್ಕಮಗಳೂರಿನಲ್ಲಿ ಸಚಿವ ಸಿ ಟಿ ರವಿ ಹೇಳಿದರು....

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.