ETV Bharat / state

ಸ್ವಾಮೀಜಿ ಸಿಟಿ ರವಿ ಭಾಷಣಕ್ಕೆ ಬ್ರೇಕ್​ ಹಾಕಿದ್ರಾ? ಕಾರಣ...! - ಶಾಸಕ ಸಿ ಟಿ ರವಿ

ಚಿಕ್ಕಮಗಳೂರಿನ ಶಾಸಕ ಸಿ.ಟಿ ರವಿ ಕಾರ್ಯಕ್ರಮವೊಂದರಲ್ಲಿ ಹಿಂದುತ್ವದ ಬಗ್ಗೆ ಮಾತನಾಡುತ್ತಿರುವ ವೇಳೆಯಲ್ಲಿ ಸಾಣೇಹಳ್ಳಿಯ ಶ್ರೀ ತರಳಬಾಳು ಜಗದ್ಗುರು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಭಾಷಣ ನಿಲ್ಲಿಸುವಂತೆ ರವಿಗೆ ಹೇಳಿದ ಘಟನೆ ನಡೆದಿದೆ.

ಸಿ.ಟಿ.ರವಿ ಭಾಷಣದ ಆಡಿಯೋ
author img

By

Published : Aug 2, 2019, 5:10 PM IST

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಅಕ್ಕ ನಾಗಲಂಬಿಕೆ ಐಕ್ಯ ಮಂಟಪದಲ್ಲಿ ನಡೆದ 'ಮತ್ತೆ ಕಲ್ಯಾಣ' ಕಾರ್ಯಕ್ರಮದಲ್ಲಿ, ವೇದಿಕೆಯ ಮೇಲೆ ಚಿಕ್ಕಮಗಳೂರಿನ ಶಾಸಕ ಸಿ ಟಿ ರವಿ ಭಾಷಣ ಮಾಡುತ್ತಿದ್ದ ವೇಳೆ ಸಾಣೇಹಳ್ಳಿಯ ಶ್ರೀ ತರಳಬಾಳು ಜಗದ್ಗುರು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಸಿ ಟಿ ರವಿ ಭಾಷಣಕ್ಕೆ ಬ್ರೇಕ್ ಹಾಕಿದ ಘಟನೆ ನಡೆದಿದೆ.

ಸಿ.ಟಿ.ರವಿ ಭಾಷಣದ ಆಡಿಯೋ

ಶಾಸಕ ಸಿ ಟಿ ರವಿ ಮಾತನಾಡುವ ವೇಳೆ, ಭಾರತ ಹಲವು ವೈಚಾರಿಕತೆಗಳ ತೊಟ್ಟಿಲು, ಎಲ್ಲವನ್ನೂ ಒಪ್ಪಿಕೊಂಡು ಅಪ್ಪಿಕೊಂಡು ತನ್ನದೇ ಎಂದು ಭಾವಿಸಿ ಬೆಳಸುವಂತಹ ಗುಣ ಇರುವ ಕಾರಣಗಳಿಗೋಸ್ಕರವೇ ಹಲವು ವಿಚಾರ ಧಾರೆಗಳು ಸಾಯಲಿಲ್ಲ, ಬದಲಾಗಿ ಬೆಳೆದವು. ನನ್ನ ಪೂರ್ವಿಕ ರಾಮ ಹೇಗೋ, ಶಂಕರ ಹೇಗೋ, ಕೃಷ್ಣ ಹೇಗೋ, ಬುದ್ದ, ಕನಕದಾಸ ಹೇಗೋ, ನನಗೆ ಬಸವಣ್ಣನೂ ಹಾಗೇ. ಅವರೆಲ್ಲರ ವಿಚಾರಗಳು ಸಾಂಸ್ಕೃತಿಕ ಪರಂಪರೆಗೆ ಸೇರಿದೆ ಎನ್ನುವುದೇ ಹೆಮ್ಮೆಯ ಸಂಗತಿ. ದೇವನೋಬ್ಬ ನಾಮ ಹಲವು. ಭಗವಂತ ಒಬ್ಬನೇ ಅವನನ್ನು ನಂಬಿದರೆ ಮಾತ್ರವೇ ಮೊಕ್ಷ ಎಂದು ಈ ಪುಣ್ಯ ಭೂಮಿ ಹೇಳಿಕೊಡಲಿಲ್ಲ. ನೂರಾರು ದಾರಿ ಇದೆ ಎಂದೂ ಹೇಳಿಕೊಟ್ಟಿದೆ. ಬಸವತತ್ವವೂ ಒಂದು ದಾರಿ ಎಂದು ನಂಬೋನು ನಾನು. ಈ ತತ್ವದಲ್ಲಿ ನಂಬಿಕೆ ಇಟ್ಟಿರೋನು ನಾನು. ಈ ಸಾಮಾಜಿಕ ಆಂದೋಲನದಲ್ಲಿ ಕಾಯಕ ತತ್ವ ಗುರುತಿಸುವ ಶ್ರೇಷ್ಟತೆ ಇದೆ. ಅದೇ ನನ್ನ ನಂಬಿಕೆಯ ಹಿಂದುತ್ವ. ಈ ಬಸವ ತತ್ವದ ಮೂಲ ವಿಚಾರ ಧಾರೆಯ ಮೇಲೆಯೇ ಹೇಳಿರೋದು. ಅದನ್ನು ಸರಿಯಾಗಿ ಅರ್ಥೈಸಿಕೊಳ್ಳದಿರೋರು ಮೂರ್ಖರು. ಸರಿಯಾಗಿ ಯಾರೂ ಅರ್ಥೈಸಿಕೊಂಡಿದ್ದಾರೋ ಆ ಹಿಂದೂತ್ವದ ಪ್ರತಿಪಾದಕ ನಾನು ಎಂದು ಹೇಳಿದರು.

ನನಗೆ ಅರ್ಥದ ಅರಿವಿದೆ. ನನಗೆ ಯಾರಾದರೂ ಮೂಲ ಭೂತವಾದಿ ಅಂದರೆ ಅವರ ಅರಿವಿನ ಬಗ್ಗೆ ಮರುಗುತ್ತೇನೆ. ಹಿಂದುತ್ವ ಎಲ್ಲವನ್ನೂ ಒಪ್ಪುತ್ತದೆ ಎಂದು ಹೇಳುತ್ತಿರುವಾಗ ಅವರ ಭಾಷಣವನ್ನು ಸ್ವಾಮೀಜಿ ಅರ್ಧಕ್ಕೆ ಮೊಟಕು ಗೊಳಿಸುವಂತೆ ಆದೇಶ ನೀಡಿದರು. ನಂತರ ಸಿ ಟಿ ರವಿ ಅವರಿಗೆ ಸ್ವಾಮೀಜಿಗಳು ಮಾತನಾಡಿ, ನಿಮ್ಮ ಅಭಿಪ್ರಾಯಗಳನ್ನು ಎಲ್ಲರೂ ಒಪ್ಪಲು ಸಾಧ್ಯವಿಲ್ಲ. ಎಲ್ಲರನ್ನೂ ಒಳಗೊಂಡ ದೇಶವನ್ನೂ ನಾವು ಕಾಣ ಬಯಸುತ್ತೇವೆ ಅಂತಹ ಕಾರ್ಯಕ್ರಮಕ್ಕೆ ಎಲ್ಲರೂ ಒಗ್ಗಟ್ಟಾಗಿ ಇರಬೇಕು ಎನ್ನುವ ಮೂಲಕ ಶ್ರೀಗಳು ಶಾಸಕ ಸಿ ಟಿ ರವಿ ಅವರಿಗೆ ತಿಳಿ ಮಾತು ಹೇಳಿದ್ದಾರೆ.

Intro:Kn_Ckm_05_Speach ge break_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದ ಅಕ್ಕ ನಾಗಲಂಬಿಕೆ ಐಕ್ಯ ಮಂಟಪದಲ್ಲಿ ನಡೆದ ಮತ್ತೆ ಕಲ್ಯಾಣ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಚಿಕ್ಕಮಗಳೂರಿನ ಶಾಸಕ ಸಿ ಟಿ ರವಿ ಭಾಷಣ ಮಾಡುವ ವೇಳೆ ಸಾಣೇಹಳ್ಳಿಯ ಶ್ರೀ ತರಳಬಾಳು ಜಗದ್ಗುರು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಸಿ ಟಿ ರವಿ ಭಾಷಣದ ಮಧ್ಯೆ ಅವರಿಗೆ ಬ್ರೇಕ್ ಹಾಕಿದ್ದಾರೆ.ಸಿ ಟಿ ರವಿ ಮಾತನಾಡುವ ವೇಳೆ ಭಾರತ ಹಲವು ವೈಚಾರಿಕತೆಗಳ ತೊಟ್ಟಿಲು ಎಲ್ಲವನ್ನೂ ಒಪ್ಪಿಕೊಂಡು ಅಪ್ಪಿಕೊಂಡು ತನ್ನದೇ ಎಂದೂ ಭಾವಿಸುವಂತ ಬೆಳಸುವಂತ ಗುಣ ಇರುವ ಕಾರಣಗಳಿಸೋಸ್ಕರನೇ ಹಲವು ವಿಚಾರ ಧಾರೆಗಳು ಸಾಯಲಿಲ್ಲ,ಬದಲಾಗಿ ಬೆಳೆದವು.ನನ್ನ ಪೂರ್ವಿಕ ರಾಮ ಹೇಗೋ, ಶಂಕರ ಹೇಗೋ, ಕೃಷ್ಣ ಹೇಗೋ, ಬುದ್ದ, ಕನಕದಾಸ ಹೇಗೋ, ನನ್ನಗೆ ಬಸವಣ್ಣನೂ ಹಾಗೇ. ಅವರೆಲ್ಲರ ವಿಚಾರಗಳು ಸಾಂಸ್ಕೃತಿಕ ವಾರಸ್ಥಾರರ ಪರಂಪರೇಗೆ ಸೇರಿದೆ ಎನ್ನುವುದೇ ಹೆಮ್ಮೆಯ ಸಂಗತಿ. ನಮ್ಮ ಸಾಫ್ಟವೇರ್ ಬಹುತ್ವ ವನ್ನು ಒಪ್ಪುವ ಸಾಫ್ಟವೇರ್ ನಮ್ಮಲ್ಲಿ ಹೇಳುವುದೇ ವಿವಿಧತೆಯಲ್ಲಿ ಏಕತೆ ಕಾಣಬೇಕು ಎನ್ನುತ್ತೆ. ದೇವನೋಬ್ಬ ನಾಮ ಹಲವು ಎಂದೂ ಹೇಳುತ್ತೆ. ಭಗವಂತ ಒಬ್ಬನೇ ಅವನನ್ನು ನಂಬಿದರೇ ಮೊಕ್ಷ ಮಾತ್ರ ಎಂದೂ ಈ ಪುಣ್ಯ ಭೂಮಿ ಹೇಳಿಕೊಡಲಿಲ್ಲ. ನೂರಾರು ದಾರಿ ಇದೆ ಎಂದೂ ಹೇಳಿಕೊಟ್ಟಿದೆ. ಬಸವತತ್ವವೂ ಒಂದು ದಾರಿ ಎಂದೂ ನಂಬೋನು ನಾನು. ಈ ತತ್ವದಲ್ಲಿ ನಂಬಿಕೆ ಇಟ್ಟಿರೋನು ನಾನು. ಈ ಸಾಮಾಜಿಕ ಆಂದೋಲನದಲ್ಲಿ ಕಾಯಕ ತತ್ವ ಗುರುತಿಸುವ ಶ್ರೇಷ್ಟ ತತ್ವ ವಿದೆ. ಅದೇ ನನ್ನ ನಂಬಿಕೆಯ ಹಿಂದೂತ್ವ. ಈ ಬಸವ ತತ್ವದ ಮೂಲ ವಿಚಾರ ಧಾರೆಯ ಮೇಲೆಯೇ ಹೇಳಿರೋದು.ಅದನ್ನು ಸರಿಯಾಗಿ ಅರ್ಥೈಸಿಕೊಳ್ಳದಿರೋರು ಮೂರ್ಖರು. ಸರಿಯಾಗಿ ಯಾರೂ ಅರ್ಥೈಸಿಕೊಂಡಿದ್ದಾರೋ ಆ ಹಿಂದೂತ್ವದ ಪ್ರತಿಫಾದಕ ನಾನೇ ಎಂದೂ ಹೇಳಿದರು. ನನ್ನಗೇ ಅರ್ಥದ ಅರಿವಿದೆ. ನನ್ನಗೆ ಯಾರಾದರೂ ಮೂಲ ಭೂತವಾದಿ ಅಂದರೇ ಅವರ ಅರಿವಿನ ಬಗ್ಗೆ ಮರುಗುತ್ತೇನೆ. ಹಿಂದೂತ್ವ ಮೂಲಭೂತ ಒಪ್ಪುವುದಿಲ್ಲ. ಆದರೇ ಹಿಂದೂತ್ವ ಎಲ್ಲವನ್ನೂ ಒಪ್ಪುತ್ತದೆ. ಎಂದೂ ಹೇಳುತ್ತಿರುವಾಗ ಅವರ ಭಾಷಣವನ್ನು ಸ್ವಾಮೀಜಿ ಅರ್ಧಕ್ಕೆ ಮೊಟಕು ಗೊಳಿಸುವಂತೆ ಆದೇಶ ನೀಡಿದರು. ನಂತರ ಸಿ ಟಿ ರವಿ ಅವರಿಗೆ ಸ್ವಾಮೀಜಿಗಳು ಮಾತನಾಡಿ ನಿಮ್ಮ ಅಭಿಪ್ರಾಯಗಳನ್ನು ಎಲ್ಲರೂ ಒಪ್ಪಲು ಸಾಧ್ಯವಿಲ್ಲ. ಎಲ್ಲರನ್ನೂ ಒಳಗೊಂಡ ದೇಶವನ್ನೂ ನಾವು ಕಾಣ ಬಯಸುತ್ತೇವೆ ಅಂತಹ ಕಾರ್ಯಕ್ರಮಕ್ಕೆ ಎಲ್ಲರೂ ಒಗ್ಗಟ್ಟಾಗಿ ಇರಬೇಕು. ಎಂದೂ ಶ್ರೀಗಳು ಶಾಸಕ ಸಿ ಟಿ ರವಿ ಅವರಿಗೆ ತಿಳಿ ಮಾತು ಹೇಳಿದರು....

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.