ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಎನ್ಆರ್ ಪುರ ತಾಲೂಕಿನ ಸುಮಾರು 48 ಕೆರೆಗಳ ಅಭಿವೃದ್ಧಿಗೆ ಎಂದು ಜಿಲ್ಲಾ ಪಂಚಾಯಿತಿಯ ಗ್ರ್ಯಾಂಟ್‍ನಲ್ಲಿ 30 ಲಕ್ಷ ರೂ. ಬಿಡುಗಡೆಯಾಗಿತ್ತು. ಆದರೆ ಅಧಿಕಾರಿಗಳು, ಕಂಟ್ರ್ಯಾಕ್ಟರ್ಗಳು ಕೆರೆ ಬೆಳೆಸಲಿಲ್ಲ. ತಾವು ಮಾತ್ರ ಬೆಳೆದಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
48 ಕೆರೆಗಳ ಪೈಕಿ 20-22 ಕೆರೆಗಳ ಬಳಿ ಜೆಸಿಬಿ ಹಾಗೂ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿ ಅಧಿಕಾರಿಗಳು ಫೋಟೋ ಮಾತ್ರ ಹೊಡೆಸಿದ್ದಾರೆ. ಉಳಿದ ಕೆರೆಗಳತ್ತ ಗಮನ ಕೂಡ ಹರಿಸಿಲ್ಲ. ಆದರೆ ಹಣ ಮಾತ್ರ ಫುಲ್ ಡ್ರಾ ಆಗಿದೆ. ಸರ್ಕಾರದ ಹಣವನ್ನು ಗುಳುಂ ಮಾಡಿದ್ದಾರೆಂದು ಆರೋಪಿಸಿರುವ ಎನ್.ಆರ್ ಪುರ ಜನರು ಅಧಿಕಾರಿಗಳು ಹಾಗೂ ಕಂಟ್ರ್ಯಾಕ್ಟರ್ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ಉದ್ಯೋಗ ಖಾತರಿ ಯೋಜನೆಯಡಿ ಎನ್.ಆರ್ ಪುರದ ಈಚಿಕೆರೆ ಗ್ರಾಮದ ಸರ್ವೇ ನಂಬರ್ 26ರಲ್ಲಿರೋ ಕೆರೆ ಅಭಿವೃದ್ಧಿಗೆ ಐದು ಲಕ್ಷ ರೂ. ಹಣ ಸ್ಯಾಂಕ್ಷನ್ ಆಗಿತ್ತು. ಅಧಿಕಾರಿಗಳು ಹಾಗೂ ಕಂಟ್ರ್ಯಾಕ್ಟರ್ 2 ಜೆಸಿಬಿ, 2 ಟ್ರ್ಯಾಕ್ಟರ್ ಕರೆಸಿ 50 ಲೋಡ್ ಮಣ್ಣು ತೆಗೆದು ಹೋದವರು ಮತ್ತೆ ಬಂದಿಲ್ಲ. ಕೆರೆ ಸ್ವಚ್ಛ ಆಗ್ಲಿಲ್ಲ. ಹಣ ಮಾತ್ರ ಡ್ರಾ ಮಾಡಿಕೊಂಡಿದ್ದಾರೆ ಅಂತ ಆರೋಪಿಸಿರೋ ರೈತರು ಈ ಬಗ್ಗೆ ಸೂಕ್ತ ತನಿಖೆಯಾಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ. ಇದೀಗ ಜಿ.ಪಂ ಸಿಇಒ ಪ್ರಭು ಕೂಡ ತಾ.ಪಂ ಇಒ ಬಳಿ ಈ ಬಗ್ಗೆ ವರದಿ ಕೇಳಿದ್ದಾರೆ.
ಇದನ್ನೂ ಓದಿ: 24x7 ಕುಡಿವ ನೀರು ಒದಗಿಸುತ್ತಿರುವ ರಾಜ್ಯದ ಮೊದಲ ಜಿಲ್ಲೆ ಶಿವಮೊಗ್ಗ: ಕೆ.ಎಸ್ ಈಶ್ವರಪ್ಪ