ಚಾಮರಾಜನಗರ/ಮೈಸೂರು/ಚಿಕ್ಕಬಳ್ಳಾಪುರ: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಷ್ಟೇ ಕಿಲ್ಲರ್ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆಯೂ ಸಹ ಹೆಚ್ಚಾಗುತ್ತಿದೆ.
ಚಾಮರಾಜನಗರ: ಜಿಲ್ಲೆಯಲ್ಲಿಂದು 80 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 5,325ಕ್ಕೆ ಏರಿಕೆಯಾಗಿದೆ. ಇಂದು 55 ಮಂದಿ ಗುಣಮುಖರಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 795ಕ್ಕೆ ಏರಿಕೆಯಾಗಿದೆ. 47 ಮಂದಿ ಸೋಂಕಿತರು ಐಸಿಯುನಲ್ಲಿದ್ದು 211 ಮಂದಿ ಹೋಂ ಐಸೋಲೇಷನ್ನಲ್ಲಿದ್ದಾರೆ. 744 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.
ಮೃತರ ವಿವರ: ಮಹಾಮಾರಿ ಸೋಂಕಿನಿಂದ ಇಂದು ಇಬ್ಬರು ಅಸುನೀಗಿದ್ದಾರೆ. ಕಳೆದ 10 ರಂದು ದಾಖಲಾಗಿದ್ದ ಚಾಮರಾಜನಗರದ 75 ವರ್ಷದ ವೃದ್ಧ ಹಾಗೂ ಕಳೆದ 13 ರಂದು ದಾಖಲಾಗಿದ್ದ ಚಾಮರಾಜನಗರದ ಮತ್ತೋರ್ವ 75 ವರ್ಷದ ವೃದ್ಧ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ. ಮೃತರ ಅಂತ್ಯ ಸಂಸ್ಕಾರವನ್ನು ಕೋವಿಡ್ ನಿಯಮಾನುಸಾರ ಸ್ವಯಂ ಸೇವಕರು ನೆರವೇರಿಸಿದ್ದಾರೆ.
ಮೈಸೂರು: ಜಿಲ್ಲೆಯಲ್ಲಿ ಇಂದು 404 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 261 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮೂವರು ಕೊರೊನಾಗೆ ಬಲಿಯಾದ ವರದಿಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 44,137ಕ್ಕೆ ಏರಿಕೆಯಾಗಿದೆ.
261 ಜನರು ಸೇರಿದಂತೆ ಒಟ್ಟು 36,105 ಸೋಂಕಿತರು ಗುಣಮುಖರಾದಂತಾಗಿದೆ. 7,120 ಜನರು ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರು ಸೇರಿದಂತೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 912 ಸೋಂಕಿತರು ಕೊರೊನಾಗೆ ಬಲಿಯಾದ ವರದಿ ಇದೆ.
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇಂದು 276 ಸೋಂಕಿತರು ಕಾಣಿಡಿಕೊಂಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಮೃತಪಟ್ಟಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ 133, ಬಾಗೇಪಲ್ಲಿ 18, ಚಿಂತಾಮಣಿ 45, ಗೌರಿಬಿದನೂರು 16, ಗುಡಿಬಂಡೆ 32, ಶಿಡ್ಲಘಟ್ಟದಲ್ಲಿ 32 ಸೋಂಕಿತರು ಕಾಣಿಸಿಕೊಂಡಿದ್ದಾರೆ. ಸೋಂಕಿತರ ಸಂಖ್ಯೆ 9,673ಕ್ಕೆ ಏರಿಕೆಯಾಗಿದೆ.
ಇನ್ನು ಚಿಕ್ಕಬಳ್ಳಾಪುರದಲ್ಲಿ 82, ಬಾಗೇಪಲ್ಲಿ 61, ಚಿಂತಾಮಣಿ 22, ಗೌರಿಬಿದನೂರು 65, ಗುಡಿಬಂಡೆ 11, ಶಿಡ್ಲಘಟ್ಟದಲ್ಲಿ 31 ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದಾರೆ. ಗುಣಮುಖಗೊಂಡವರ ಸಂಖ್ಯೆ 8422 ಕ್ಕೆ ಏರಿಕೆಯಾಗಿದೆ.