ಚಿಕ್ಕಮಗಳೂರು : ಜಿಲ್ಲೆಯಲ್ಲಿ ಇಂದು 4 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 43 ವರ್ಷದ ಪುರುಷ, 51 ವರ್ಷದ ಪುರುಷ, ಇಬ್ಬರು 20 ವರ್ಷದ ಯುವತಿಯರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಇವರಲ್ಲಿ ಓರ್ವ ಸೋಂಕಿತ ಪುರುಷ ಬೆಂಗಳೂರು ಮೂಲದಿಂದ ಬಂದವರಾಗಿದ್ದು, ಮೂರು ಜನ ಮಹಾರಾಷ್ಟ್ರ ಮೂಲದಿಂದ ಬಂದವರಾಗಿದ್ದಾರೆ. ಓರ್ವ ಸೋಂಕಿತ ಚಿಕ್ಕಮಗಳೂರು ತಾಲೂಕಿಗೆ ಸೇರಿದವರಾಗಿದ್ದು, ಇನ್ನೂ ಮೂರು ಜನ ಸೋಂಕಿತರು ಶೃಂಗೇರಿಯ ನಿವಾಸಿಗಳಾಗಿದ್ದಾರೆ. ಇವರು ವಾಸ ಮಾಡುತ್ತಿದ್ದ ಏರಿಯಾವನ್ನು ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸೀಲ್ ಡೌನ್ ಮಾಡಿ, ಕಟ್ಟೆಚ್ಚರ ವಹಿಸಿದೆ. ಜಿಲ್ಲಾ ಆರೋಗ್ಯ ಇಲಾಖೆ ಈ ನಾಲ್ಕು ಜನರ ಜೊತೆ ಪ್ರಾರ್ಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದವರನ್ನು ಪ್ರತ್ಯೇಕಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ 48ಕ್ಕೆ ಏರಿಕೆಯಾಗಿದೆ. ಈಗಾಗಲೇ 23 ಜನ ಸೋಂಕಿತರು, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಓರ್ವ ವಯೋ ವೃದ್ಧೆ ಕೊರೊನ ವೈರಸ್ ಗೆ ತುತ್ತಾಗಿ ಸಾವನ್ನಪ್ಪಿದ್ದಾರೆ.