ಚಿಕ್ಕಮಗಳೂರು: ಕೊರೊನಾ ಸೋಂಕು ಜನ ಸಾಮಾನ್ಯರಿಗೆ ಮಾತ್ರವಲ್ಲದೇ ಜನಪ್ರತಿನಿಧಿಗಳಿಗೂ ಕಾಡಲಾರಂಭಿಸಿದೆ. ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಬೋಜೇಗೌಡ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಕಳೆದ ಮೂರು ದಿನಗಳಿಂದ ವಿಧಾನಪರಿಷತ್ ಸದಸ್ಯ ಎಂ. ಕೆ. ಪ್ರಾಣೇಶ್ಗೆ ಕೊರೊನಾ ಸೋಂಕು ದೃಢಪಟ್ಟಿರುವ ಬೆನ್ನೆಲ್ಲೇ, ಇಂದು ಮತ್ತೋರ್ವ ವಿಧಾನಪರಿಷತ್ ಸದಸ್ಯ ಎಸ್. ಎಲ್. ಬೋಜೇಗೌಡ ಅವರಿಗೆ ಕೊರೊನಾ ಸೋಂಕಿರುವುದು ಖಚಿತವಾಗಿದೆ.
ಚಿಕ್ಕಮಗಳೂರಿನ ಜನ ಪ್ರತಿನಿಧಿಗಳಿಗೂ ಬೆಂಬಿಡದೆ ಕೊರೊನಾ ಸೋಂಕು ಕಾಡುತ್ತಿದ್ದು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ಆತಂಕಕ್ಕೆ ಕಾರಣವಾಗಿದೆ.