ಚಿಕ್ಕಮಗಳೂರು: ಕೊರೊನಾ ವೈರಸ್ ಭೀತಿ ಹಾಗೂ ದೇಶದಾದ್ಯಂತ ಲಾಕ್ಡೌನ್ ಆಗಿರುವ ಕಾರಣ ಚಿಕ್ಕಮಗಳೂರಲ್ಲಿ ಕುಟುಂಬಸ್ಥರೇ ಸೇರಿ ಸರಳ ವಿವಾಹಕ್ಕೆ ಸಾಕ್ಷಿಯಾಗಿದ್ದಾರೆ. ಕೇವಲ ಕುಟುಂಬದ 20 ಜನ ಸದಸ್ಯರ ನಡುವೆ ಅತ್ಯಂತ ಸರಳವಾಗಿ ಮದುವೆ ಕಾರ್ಯ ನೆರೆವೇರಿದೆ.
ಕೇವಲ 20 ಜನರಿಗೆ ಈ ಮದುವೆ ಸೀಮಿತವಾಗಿದ್ದು, ವಧು-ವರರ ಪೋಷಕರು, ಸಹೋದರರಷ್ಟೆ ಭಾಗಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೂಳೂರಿನಲ್ಲಿ ಅತೀ ಸರಳವಾಗಿ ಮನೆಯಲ್ಲಿಯೇ ವಿವಾಹ ನಡೆದಿದ್ದು, ಇಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಈ ಮದುವೆ ನಿಗದಿಯಾಗಿತ್ತು. ಆದರೆ, ಈ ಎಲ್ಲ ಕಾರಣಗಳಿಂದ ವರನ ಮನೆಯಲ್ಲೇ ಸರಳ ಮದುವೆ ಸಮಾರಂಭ ನಡೆದಿದ್ದು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.