ETV Bharat / state

ಪರಿಷತ್​ನಲ್ಲಿ ನಡೆದ ಘಟನೆಯಲ್ಲಿ ಎಲ್ಲರೂ ತಪ್ಪಿತಸ್ಥರೇ: ಕಾಂಗ್ರೆಸ್​ ಮುಖಂಡ ಬಿ.ಎಲ್.ಶಂಕರ್​ - ವಿಧಾನ ಪರಿಷತ್​ನಲ್ಲಿ ಗಲಾಟೆ ವಿಚಾರ

ಪರಿಷತ್​ನಲ್ಲಿ ನಡೆದ ಘಟನೆಯ ಹೊಣೆಯನ್ನು ಸಭಾಪತಿ, ಉಪ ಸಭಾಪತಿ, ಆಡಳಿತ ಪಕ್ಷ, ವಿರೋಧ ಪಕ್ಷದವರು ಸಮಾನವಾಗಿ ಹೊರಬೇಕು ಎಂದು ಕಾಂಗ್ರೆಸ್​ ಮುಖಂಡ ಬಿ.ಎಲ್.ಶಂಕರ್​ ಹೇಳಿದ್ದಾರೆ.

Congress leader BL Shankar
ಕಾಂಗ್ರೆಸ್​ ಮುಖಂಡ ಬಿ.ಎಲ್.ಶಂಕರ್​
author img

By

Published : Dec 17, 2020, 5:10 PM IST

ಚಿಕ್ಕಮಗಳೂರು: ವಿಧಾನ ಪರಿಷತ್​ನಲ್ಲಿ ನಡೆದ ಘಟನೆಯಲ್ಲಿ ಎಲ್ಲರೂ ತಪ್ಪಿತಸ್ಥರೇ ಎಂದು ಕಾಂಗ್ರೆಸ್​ ಮುಖಂಡ ಬಿ.ಎಲ್.ಶಂಕರ್​ ಹೇಳಿದ್ದಾರೆ.

ಕಾಂಗ್ರೆಸ್​ ಮುಖಂಡ ಬಿ.ಎಲ್.ಶಂಕರ್​

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಪರಿಷತ್​ನಲ್ಲಿ ನಡೆದ ಘಟನೆಯ ಹೊಣೆಯನ್ನು ಸಭಾಪತಿ, ಉಪ ಸಭಾಪತಿ, ಆಡಳಿತ ಪಕ್ಷ, ವಿರೋಧ ಪಕ್ಷದವರು ಸಮಾನವಾಗಿ ಹೊರಬೇಕು. ಆಡಳಿತ ಪಕ್ಷಕ್ಕೆ ಸಭಾಪತಿಯವರನ್ನು ಕೆಳಗೆ ಇಳಿಸಲೇಬೇಕು ಎಂದರೆ ಅದಕ್ಕೆ ನಿಯಮವಳಿಯಲ್ಲಿ ಅವಕಾಶವಿದೆ. ಆದರೆ ಅವರಿಗೆ ಕಾಯುವಷ್ಟು ತಾಳ್ಮೆ ಇರಲಿಲ್ಲ. ಸಭಾಪತಿಯವರನ್ನು ಸದನಕ್ಕೆ ಬಾರದ ಹಾಗೆ ಬಾಗಿಲು ಹಾಕಿ, ಉಪ ಸಭಾಪತಿಯನ್ನು ಕೂರಿಸಿ ಅವರಿಂದ ಸಭಾ ನಡಾವಳಿ ಮಾಡಿಸೋದು ಸರಿಯಲ್ಲ.

ಓದಿ:ಈ ಒಂದು ಐಡಿಯಾ ತಂದ್ರೆ ಸರ್ಕಾರಕ್ಕೆ 40,000 ಕೋಟಿ ರೂ. ಗಳಿಕೆ: ತಂಬಾಕು ವಿರುದ್ಧ ವೈದ್ಯರ ಮಾಸ್ಟರ್ ಸಲಹೆ

ಉಪ ಸಭಾಪತಿ ಎಸ್​.ಎಲ್.ಧರ್ಮೇಗೌಡರು ತಪ್ಪನ್ನು ಮಾಡಿದ್ದಾರೆ. ಅವರ ನೈತಿಕತೆಗೆ ದೊಡ್ಡ ಸವಾಲು. ಉಪ ಸಭಾಪತಿಯವರನ್ನು ಎಳೆದು ಹಾಕಿದ್ದು ತಪ್ಪೇ. ಸಭಾಪತಿ ಇನ್ನೊಂದು ಬಾಗಿಲಿನಿಂದ ಸದನವನ್ನು ಪ್ರವೇಶ ಮಾಡಬಹುದಿತ್ತು. ಒಂದೇ ಸಂದರ್ಭದಲ್ಲಿ ಸಭಾಪತಿ ಹಾಗೂ ಉಪ ಸಭಾಪತಿ ಆ ಸ್ಥಾನದಲ್ಲಿ ಕೂರಲು ಸಾಧ್ಯವಿಲ್ಲ. ಇಲ್ಲಿ ಎಲ್ಲಾ ಪಕ್ಷಗಳಿಗೆ ಪ್ರತಿಷ್ಠೆ ಮುಖ್ಯವಾಗಿತ್ತು. ಆತುರ ಬಹಳವಾಗಿದೆ. ಈ ರೀತಿ ಆಗಿದ್ದು ದೊಡ್ಡ ದುರಂತ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.