ETV Bharat / state

ಅಲ್‍ಖೈದಾ-ಕಾಂಗ್ರೆಸ್ ಒಂದೇ ಕಡೆ ಬ್ಯಾಟಿಂಗ್ ಮಾಡುತ್ತಿದ್ದಾರೆ: ಶಾಸಕ ಸಿ.ಟಿ.ರವಿ - Aal-Khaida and Congress

ದೇಶ ಕಾಯುವ ಸಂಘಟನೆ ಆರ್​ಎಸ್​ಎಸ್​ ಮತ್ತು ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ನಡುವೆ ಹೋಲಿಕೆ ಮಾಡುತ್ತಿರುವ ಬುದ್ದಿಗೇಡಿ ಜನರು, ಮೊದಲು ಕಾಂಗ್ರೆಸ್​ ಮತ್ತು ಆಲ್​ಖೈದಾ ನಡುವೆ ಹೋಲಿಕೆ ಮಾಡಿ. ಇದರಲ್ಲಿ ಪಾತ್ರದಾರಿ ಯಾರು, ಸೂತ್ರದಾರಿ ಯಾರು ಎಂಬುದನ್ನು ಕಂಡುಹಿಡಿಯಲಿ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

MLA C.T.Ravi talked to press
ಸುದ್ದಿಗಾರರೊಂದಿಗೆ ಶಾಸಕ ಸಿ.ಟಿ.ರವಿ ಮಾತನಾಡಿದರು.
author img

By

Published : Apr 8, 2022, 9:27 PM IST

ಚಿಕ್ಕಮಗಳೂರು: ಅಲ್‍ಖೈದಾ ಬಿಡುಗಡೆ ವಿಡಿಯೋ ಕುರಿತು ಸಿದ್ದರಾಮಯ್ಯ ಹೇಳಿಕೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಲ್ಲಿ ಮಾಜಿ ಸಿದ್ದರಾಮಯ್ಯಗೆ ಶಾಸಕ ಸಿ.ಟಿ.ರವಿ ಟಾಂಗ್ ಕೊಟ್ಟಿದ್ದು, ಅಲ್‍ಖೈದಾ-ಕಾಂಗ್ರೆಸ್ ಒಂದೇ ಕಡೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹೋಲಿಕೆ ಮಾಡುವುದಾದರೆ ಕಾಂಗ್ರೆಸ್-ಅಲ್‍ಖೈದಾ ಮಧ್ಯೆ ಹೋಲಿಕೆ ಮಾಡಬೇಕು. ಸೂತ್ರದಾರಿ ಅಲ್‍ಖೈದಾನೋ, ಪಾತ್ರದಾರಿ ಕಾಂಗ್ರೆಸ್ಸೋ ಎನ್ನುವುದು ಮೊದಲು ಗೊತ್ತಾಗಬೇಕು ಎಂದು ವಾಗ್ದಾಳಿ ಮಾಡಿದ್ದಾರೆ.

ಕಾಂಗ್ರೆಸ್ ನಾಯಕರು ಸೋಲಿನ ಹತಾಶೆಯಿಂದ ಬುದ್ಧಿ ಭ್ರಮಣೆಯಾದಂತೆ ಮಾತನಾಡುತ್ತಿದ್ದಾರೆ. ಯುಪಿಯಲ್ಲಿ 399 ರಲ್ಲಿ ಸ್ಪರ್ಧೆ ಮಾಡಿ 387ರಲ್ಲಿ ಠೇವಣಿ ಕಳೆದುಕೊಂಡರೆ ಯಾರಿಗಾದರೂ ಹತಾಶೆ ಕಾಡುತ್ತದೆ. ಪಂಜಾಬ್‍ನಲ್ಲೂ ಇದ್ದ ಸರ್ಕಾರವನ್ನು ಕಳೆದುಕೊಂಡು ಹತಾಶರಾಗಿ ಬುದ್ಧಿಭ್ರಮಣೆಯಾದಂತೆ ಕಾಂಗ್ರೆಸ್​ನವರು ಮಾತನಾಡುತ್ತಿದ್ದಾರೆ.

ಆರ್.ಎಸ್.ಎಸ್. ದೇಶಭಕ್ತ ಹಾಗೂ ದೇಶ ಕಾಯುವ ಸಂಘಟನೆ. ಅಲ್‍ ಖೈದಾ ಬಾಂಬಿನ ಮೇಲೆ ವಿಶ್ವಾಸವಿಟ್ಟಿರುವ ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆ. ಇವೆರಡರ ನಡುವೆ ಹೋಲಿಕೆ ಮಾಡುತ್ತಿರುವುದು ಬುದ್ಧಿ ಇಲ್ಲದವರು ಮಾಡುವ ಕೆಲಸ. ಕಾಂಗ್ರೆಸ್ಸಿಗರು ಅಲ್‍ಖೈದಾ ಮೇಲೆ ಸಿಂಪಥಿ ತೋರುತ್ತಿದ್ದಾರೆ. ರಾಷ್ಟ್ರಭಕ್ತ ಸಂಘಟನೆ ಜೊತೆ ಹೋಲಿಕೆ ಮಾಡುತ್ತಾ ಕಾಂಗ್ರೆಸ್​ ಪರೋಕ್ಷವಾಗಿ ಅಲ್‍ಖೈದಾಗೆ ವಕಾಲತ್ತು ವಹಿಸಿಸುತ್ತಿದೆ ಎಂದು ಸಿ.ಟಿ.ರವಿ ಹೇಳಿದರು.

ಇದನ್ನೂ ಓದಿ: ಖಲಿಸ್ತಾನ್ ಚಳವಳಿಗೆ ಗೊಬ್ಬರ ಹಾಕಿದ್ದು ಕಾಂಗ್ರೆಸ್, ಬಲಿಯಾಗಿದ್ದು ಇಂದಿರಾಗಾಂಧಿ: ಸಿ.ಟಿ.ರವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.