ಚಿಕ್ಕಮಗಳೂರು: ಡಿಸೆಂಬರ್ 2ರಂದು ಜೀರೋ ಟ್ರಾಫಿಕ್ ನೆಪದಲ್ಲಿ ಬೇಕಾಬಿಟ್ಟಿ ವಾಹನ ಚಲಾಯಿಸಿ ಸಂಚಾರಕ್ಕೆ ಅಡಚಣೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷ ಮಗ್ಗಲ ಮಕ್ಕಿ ಗಣೇಶ್, ಬಣಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯೊಬ್ಬಳಿಗೆ ತುರ್ತು ಶಸ್ತ್ರಚಿಕಿತ್ಸೆಯ ಅವಶ್ಯಕತೆಯಿದೆ ಎಂದು ಚಿಕ್ಕಮಗಳೂರು ಜಿಲ್ಲೆಯ ಮೂಲಕ ಜೀರೋ ಟ್ರಾಫಿಕ್ನಲ್ಲಿ ಬೆಂಗಳೂರಿಗೆ ಹೋಗಿದ್ದಾರೆ. ತುರ್ತು ಚಿಕಿತ್ಸೆ ಎಂದೂ ಯುವತಿಯನ್ನು ಕರೆದುಕೊಂಡು ಹೋಗಿದ್ದು, 6 ದಿನಗಳು ಕಳೆದರೂ ಯುವತಿಗೆ ಶಸ್ತ್ರಚಿಕಿತ್ಸೆ ನಡೆದಿಲ್ಲ. ಈ ಕುರಿತು ಪೊಲೀಸ್ ಇಲಾಖೆಯ ಅನುಮತಿಯನ್ನೂ ಕೇಳಿಲ್ಲ. ಬೇರೆ ವಾಹನಗಳನ್ನು ರಸ್ತೆಯಲ್ಲಿಯೇ ತಡೆದು ನಿಲ್ಲಿಸಿರುವುದರಿಂದ ಸಾವಿರಾರು ಜನರಿಗೆ ತೊಂದರೆಯಾಗಿತ್ತು. ಆ್ಯಂಬುಲೆನ್ಸ್ ಜೊತೆ ಇತರೆ ಖಾಸಗಿ ವಾಹನಗಳು ಅತ್ಯಂತ ವೇಗವಾಗಿ ಹೋಗಿರುವುದು ಜನರಲ್ಲಿ ಭೀತಿ ಮೂಡಿಸಿದೆ.
ಓದಿ: ಯಾವ ಪಕ್ಷದಲ್ಲೂ ತತ್ವ ಸಿದ್ಧಾಂತ ಇಲ್ಲ, ನಾವೂ ಹೊರತಾಗಿಲ್ಲ: ಬಸವರಾಜ್ ಹೊರಟ್ಟಿ
ಇನ್ನು, ಶಸ್ತ್ರ ಚಿಕಿತ್ಸೆಗೆಂದು ಕರೆದುಕೊಂಡು ಹೋದ ಆ್ಯಂಬುಲೆನ್ಸ್ಗೆ ಇನ್ಸೂರೆನ್ಸ್ ಇಲ್ಲ, ಟ್ಯಾಕ್ಸ್ ಕಟ್ಟಿಯೂ ಇಲ್ಲ ಹಾಗೂ ಎಫ್ಸಿಯೂ ಇಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ತನಿಖೆ ನಡೆಸಿ ಘಟನೆಗೆ ಕಾರಣರಾದ ವ್ಯಕ್ತಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಮಗ್ಗಲ ಮಕ್ಕಿ ಗಣೇಶ್ ದೂರು ದಾಖಲು ಮಾಡಿದ್ದಾರೆ.