ಚಿಕ್ಕಮಗಳೂರು: ವಿಧಿವಶರಾದ ಚಂದ್ರೇಗೌಡರು ಒಳ್ಳೆಯ ಸ್ಪೀಕರ್ ಆಗಿದ್ದರು. ಯಾಕಂದ್ರೆ, ಆವತ್ತು ಸ್ಪೀಕರ್ ಆಗಿ ಕೆಲಸ ಮಾಡುವುದು ಬಹಳ ಕಷ್ಟದ ಕೆಲಸವಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸ್ಪೀಕರ್ ಅವರೊಂದಿಗಿನ ರಾಜಕೀಯ ಒಡನಾಟದ ನೆನಪು ಮಾಡಿಕೊಂಡರು.
ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಳ್ಳಿಯ ಪೂರ್ಣಚಂದ್ರ ಕಾಫಿ ಎಸ್ಟೇಟ್ನಲ್ಲಿ ಅವರ ಅಂತಿಮ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬೆಂಬಲ ಪಡೆದು ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಚಂದ್ರೇಗೌಡರು ಸ್ಪೀಕರ್ ಆಗಿ ಕೆಲಸ ಮಾಡಿದ್ದರು. ಆಮೇಲೆ ಜನತಾ ಪಾರ್ಟಿಯಲ್ಲಿ ಬಹಳ ದಿನ ನಮ್ಮ ಜೊತೆಯಲ್ಲಿದ್ದರು. ಮತ್ತೆ ಕಾಂಗ್ರೆಸ್ ಸೇರಿ ಶಾಸಕ ಹಾಗೂ ಮಂತ್ರಿ ಆದರು. ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್ ಈ 4 ಸದನದಲ್ಲೂ ಸದಸ್ಯರಾಗಿದ್ದರು. ಆ ರೀತಿ ನಾಲ್ಕು ಸದನದಲ್ಲೂ ಸದಸ್ಯರಾಗೋದು ತೀರಾ ಅಪರೂಪ. ಪ್ರಜಾ ಪ್ರಭುತ್ವದ ನಾಲ್ಕು ವೇದಿಕೆಯಲ್ಲೂ ಇದ್ದರು. 87 ವರ್ಷದ ಅವರು ನಮ್ಮನ್ನಿಂದು ಅಗಲಿದ್ದಾರೆ. ಅವರ ಸಾವಿನಿಂದ ರಾಜ್ಯಕ್ಕೆ ನಷ್ಟವಾಗಿದೆ. ಅವರ ಕುಟುಂಬಕ್ಕೆ ದೇವರು ನಷ್ಟ ಭರಿಸುವ ಶಕ್ತಿ ನೀಡಲಿ ಎಂದು ಹೇಳಿದರು.
-
ಮುಖ್ಯಮಂತ್ರಿ @siddaramaiah ಅವರು ಮೂಡಿಗೆರೆ ತಾಲ್ಲೂಕು ದಾರದಹಳ್ಳಿಯಲ್ಲಿ ಡಿ.ಬಿ. ಚಂದ್ರೇಗೌಡ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು, ಅಂತಿಮ ನಮನ ಸಲ್ಲಿಸಿದರು. pic.twitter.com/qOxfuvyxZN
— CM of Karnataka (@CMofKarnataka) November 8, 2023 " class="align-text-top noRightClick twitterSection" data="
">ಮುಖ್ಯಮಂತ್ರಿ @siddaramaiah ಅವರು ಮೂಡಿಗೆರೆ ತಾಲ್ಲೂಕು ದಾರದಹಳ್ಳಿಯಲ್ಲಿ ಡಿ.ಬಿ. ಚಂದ್ರೇಗೌಡ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು, ಅಂತಿಮ ನಮನ ಸಲ್ಲಿಸಿದರು. pic.twitter.com/qOxfuvyxZN
— CM of Karnataka (@CMofKarnataka) November 8, 2023ಮುಖ್ಯಮಂತ್ರಿ @siddaramaiah ಅವರು ಮೂಡಿಗೆರೆ ತಾಲ್ಲೂಕು ದಾರದಹಳ್ಳಿಯಲ್ಲಿ ಡಿ.ಬಿ. ಚಂದ್ರೇಗೌಡ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು, ಅಂತಿಮ ನಮನ ಸಲ್ಲಿಸಿದರು. pic.twitter.com/qOxfuvyxZN
— CM of Karnataka (@CMofKarnataka) November 8, 2023
ಹೆಡೆದಾಳು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟ ಮಹಿಳೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಸಿದ್ದರಾಮಯ್ಯ, ಆನೆ ದಾಳಿ ಸಂಬಂಧ ಪ್ರತಿಭಟನಾಕಾರರ ಜೊತೆ ಮಾತನಾಡಿದ್ದೇನೆ. ಆನೆಗಳನ್ನು ಕಾಡಿಗೆ ಓಡಿಸುವ ಪ್ರಕ್ರಿಯೇ ಆರಂಭಿಸುತ್ತೇವೆ. ಅರಣ್ಯ ಸಚಿವರು ಕೂಡ ಚಿಕ್ಕಮಗಳೂರಿಗೆ ಬರುತ್ತಾರೆ ಎಂದರು.
ಕಿಯೋನಿಕ್ಸ್ ಎಂಡಿ ಕಡ್ಡಾಯ ರಜೆ ವಿಚಾರದ ಬಗ್ಗೆ ಮಾತನಾಡಿದ ಸಿಎಂ, ಆ ವಿಚಾರ ನನಗೆ ಗೊತ್ತಿಲ್ಲ. ಗುಪ್ತಚರ ಇಲಾಖೆ ನನ್ನ ಬಳಿಯೇ ಇರುವುದು, ನಿಮಗೆ ಯಾರು ಹೇಳಿದ್ದು ಎಂದು ಪ್ರಶ್ನೆ ಮಾಡಿದರು. ಯಾರೇ ಸಂಪರ್ಕ ಮಾಡಿದರೂ ನಮ್ಮ ಶಾಸಕರು ಗಟ್ಟಿಯಾಗಿದ್ದಾರೆ. ಬಿಜೆಪಿಯ ಪ್ರಯತ್ನ ವಿಫಲವಾಗುತ್ತೇ ಎಂದು ಹೇಳಿದರು.
ಅಶ್ವಿನಿ ಪುನೀತ್ ರಾಜ್ ಕುಮಾರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಡಿ.ಎನ್.ಜೀವರಾಜ್, ನಳಿನ್ ಕುಮಾರ್ ಕಟೀಲ್, ಪಿಜಿಆರ್ ಸಿಂಧ್ಯಾ, ಸಭಾಪತಿ ಯುಟಿ ಖಾದರ್ ಸೇರಿದಂತೆ ವಿವಿಧ ಗಣ್ಯರು ಅವರ ಅಂತಿಮ ನಮನದಲ್ಲಿ ಭಾಗಿಯಾಗಿದ್ದರು. ಅಂತ್ಯ ಸಂಸ್ಕಾರಕ್ಕೂ ಮುನ್ನ ಪೊಲೀಸ್ ಇಲಾಖೆಯಿಂದ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಚಂದ್ರೇಗೌಡರಿಗೆ ಸಕಲ ಸರ್ಕಾರಿ ಗೌರವ ಸಲ್ಲಿಕೆ ಮಾಡಲಾಯಿತು.
-
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಹೆಡದಾಳು ಬಳಿ ಇಂದು ಬೆಳಗ್ಗೆ ಕಾಡಾನೆ ದಾಳಿಗೆ ತುತ್ತಾಗಿ ಮೀನಾ ಎಂಬ ಮಹಿಳೆ ಮೃತಪಟ್ಟಿರುವುದು ದುರದೃಷ್ಟಕರ. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಕೂಡಲೇ ಮೃತರ ಕುಟುಂಬಕ್ಕೆ ರೂ.15 ಲಕ್ಷ ಪರಿಹಾರ ನೀಡಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
— CM of Karnataka (@CMofKarnataka) November 8, 2023 " class="align-text-top noRightClick twitterSection" data="
- ಮುಖ್ಯಮಂತ್ರಿ…
">ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಹೆಡದಾಳು ಬಳಿ ಇಂದು ಬೆಳಗ್ಗೆ ಕಾಡಾನೆ ದಾಳಿಗೆ ತುತ್ತಾಗಿ ಮೀನಾ ಎಂಬ ಮಹಿಳೆ ಮೃತಪಟ್ಟಿರುವುದು ದುರದೃಷ್ಟಕರ. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಕೂಡಲೇ ಮೃತರ ಕುಟುಂಬಕ್ಕೆ ರೂ.15 ಲಕ್ಷ ಪರಿಹಾರ ನೀಡಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
— CM of Karnataka (@CMofKarnataka) November 8, 2023
- ಮುಖ್ಯಮಂತ್ರಿ…ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಹೆಡದಾಳು ಬಳಿ ಇಂದು ಬೆಳಗ್ಗೆ ಕಾಡಾನೆ ದಾಳಿಗೆ ತುತ್ತಾಗಿ ಮೀನಾ ಎಂಬ ಮಹಿಳೆ ಮೃತಪಟ್ಟಿರುವುದು ದುರದೃಷ್ಟಕರ. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಕೂಡಲೇ ಮೃತರ ಕುಟುಂಬಕ್ಕೆ ರೂ.15 ಲಕ್ಷ ಪರಿಹಾರ ನೀಡಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
— CM of Karnataka (@CMofKarnataka) November 8, 2023
- ಮುಖ್ಯಮಂತ್ರಿ…
ಅಪರೂಪದ ರಾಜಕಾರಣಿ: ಜನತಾ ಪಕ್ಷದ ಮೂಲಕ ಸಿದ್ದರಾಮಯ್ಯನವರ ಜೊತೆ ರಾಜಕೀಯಕ್ಕೆ ಬಂದಿದ್ದ ಚಂದ್ರೇಗೌಡರು, ಪರಿಷತ್ ಸದಸ್ಯರು, ಶಾಸಕರು, ಸಂಸದರು, ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದರು. 1979ರಲ್ಲಿ ತಮ್ಮ ಕ್ಷೇತ್ರವನ್ನು ಬಿಟ್ಟುಕೊಟ್ಟು ಇಂದಿರಾಗಾಂಧಿಗೆ ರಾಜಕೀಯ ಪುನರ್ಜನ್ಮ ನೀಡಿದ್ದ ಅಪರೂಪದ ರಾಜಕಾರಣಿಯೂ ಆಗಿದ್ದರು. ಚಿಕ್ಕಮಗಳೂರಿನಿಂದ ಗೆದ್ದ ಇಂದಿರಾಗಾಂಧಿ, ಅಂದು ಪ್ರಧಾನಿಯಾಗಿದ್ದರು.