ಚಿಕ್ಕಮಗಳೂರು: ನಗರದ ಸಿನಿಮಾ ಥಿಯೇಟರ್ವೊಂದರಲ್ಲಿ 'ವಿಕ್ರಾಂತ್ ರೋಣ' ಚಿತ್ರ ಪ್ರದರ್ಶನದ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ಗಲಾಟೆಯಲ್ಲಿ ನಡುರಸ್ತೆಯಲ್ಲೇ ಹಾಡಹಗಲೇ ಲಾಂಗ್ ಝಳಪಿಸಿ, ಯುವಕನೋರ್ವ ಮೇಲೆ ಹಲ್ಲೆ ಮಾಡಲಾಗಿದೆ.
ಮಿಲನ ಚಿತ್ರಮಂದಿರದ ಹೊರಾಂಗಣದಲ್ಲಿ ಈ ಮಾರಾಮಾರಿ ಆಗಿದ್ದು, ಭರತ್ ಎಂಬ ಯುವಕನ ಮೇಲೆ ಎದುರಾಳಿ ಗುಂಪು ಹಲ್ಲೆ ನಡೆಸಿದೆ. ಭರತ್ ನೆಲಕ್ಕೆ ಬಿದ್ದರೂ ಬಿಡದೆ ಯುವಕರ ತಂಡ ಹಲ್ಲೆಗೈದಿದ್ದು, ತೀವ್ರವಾಗಿ ಗಾಯಗೊಂಡಿದ್ದಾನೆ.
ವಿಷಯ ತಿಳಿದು ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಗಾಯಾಳು ಭರತ್ನನ್ನು ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ರವಾನೆ ಮಾಡಿದ್ದಾರೆ. ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ್ಮೇಲೆ 66 ಕೋಮು ದಳ್ಳುರಿ ಕೇಸ್: ಆರೋಪಿಗಳಿಗೆ ಶಿಕ್ಷೆ ಮಾತ್ರ ಶೂನ್ಯ!