ಚಿಕ್ಕಮಗಳೂರ: ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಚಿಕ್ಕಮಗಳೂರು ಜಿಲ್ಲೆ ಲಾಕ್ ಡೌನ್ ಮಾಡಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ.
ಚಿಕ್ಕಮಗಳೂರು ಜಿಲ್ಲೆ ಇಂದಿನಿಂದ ಮೇ 4 ರವರೆಗೆ ಸಂಪೂರ್ಣ ಸ್ತಬ್ಧ ಆಗಲಿದ್ದು, ಅಗತ್ಯ ಸೇವೆ ಹೊರತುಪಡಿಸಿ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಲಿವೆ.
ಮೆಡಿಕಲ್, ದಿನಸಿ ಅಂಗಡಿಗಳು, ಹಣ್ಣು - ತರಕಾರಿ ಅಂಗಡಿಗಳು ತೆರೆಯಲು ಮಾತ್ರ ಅವಕಾಶ ನೀಡಲಾಗಿದ್ದು, ಮೀನು-ಮಾಂಸದ ಅಂಗಡಿಗಳಿಗೆ ಲಾಕ್ಡೌನ್ ನಿಂದ ವಿನಾಯಿತಿ ನೀಡಲಾಗಿದೆ.
ಈಗಾಗಲೇ ಅಂಗಡಿ - ಮುಂಗಟ್ಟುಗಳನ್ನು ಪೊಲೀಸರು ಮುಚ್ಚಿಸುತ್ತಿದ್ದು, ಚಿಕ್ಕಮಗಳೂರು ನಗರದಲ್ಲಿ ಮೈಕ್ ನಲ್ಲಿ ಪೊಲೀಸರು ಅನೌನ್ಸ್ ಮಾಡುವುದರ ಮೂಲಕ ಈ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.