ETV Bharat / state

ಧರ್ಮಸ್ಥಳದಲ್ಲಿ ಮಹಾ ಶಿವರಾತ್ರಿ ಮಹೋತ್ಸವ: ಪಾದಯಾತ್ರಿಗಳಿಗೆ ಚಿಕ್ಕಮಗಳೂರು ಯುವಕರಿಂದ ಸಾರ್ಥಕ ಸೇವೆ - ಮೂಡಿಗೆರೆ ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಾಲಯ

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಹಾ ಶಿವರಾತ್ರಿ ಸಲುವಾಗಿ ಅನೇಕ ಭಕ್ತಾದಿಗಳು ಪಾದಯಾತ್ರೆ ಮೂಲಕ ಸಾಗಿ ಬರುತ್ತಿದ್ದಾರೆ. ಇವರ ದಣಿವು ನಿವಾರಿಸಲು ಚಿಕ್ಕಮಗಳೂರು ಜಿಲ್ಲೆಯ ಸ್ಥಳೀಯ ಯುವಕರ ತಂಡವೊಂದು ಸಾರ್ಥಕ ಸೇವೆ ಸಲ್ಲಿಸುತ್ತಿದೆ.

Hikers
ಪಾದಯಾತ್ರಿಗಳು
author img

By

Published : Feb 16, 2023, 9:12 AM IST

ಸೇವೆ ಕುರಿತು ಮಾಹಿತಿ ನೀಡುತ್ತಿರುವ ಸ್ಥಳೀಯ

ಚಿಕ್ಕಮಗಳೂರು : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುಲಿರುವ ಮಹಾ ಶಿವರಾತ್ರಿ ಮಹೋತ್ಸವಕ್ಕೆ ಪಾಲ್ಗೊಳ್ಳಲು ಭಕ್ತರು ಪಾದಯಾತ್ರೆ ಕೈಗೊಂಡಿದ್ದಾರೆ. ಧರ್ಮಸ್ಥಳಕ್ಕೆ ದೂರದ ಊರುಗಳಿಂದ ಪಾದ ಯಾತ್ರೆಯಲ್ಲಿ ತೆರಳುವ ಸಾವಿರಾರು ಭಕ್ತರಿಗೆ ಊಟ, ಉಪಹಾರದ ಜೊತೆಗೆ ವಿಶ್ರಾಂತಿಗೆ ವ್ಯವಸ್ಥೆ ಮಾಡುವ ಮೂಲಕ ಚಿಕ್ಕಮಗಳೂರು ಜಿಲ್ಲೆಯ ಸ್ಥಳೀಯ ಯುವಕರ ತಂಡವೊಂದು, ಹಾಗೂ ವಿವಿಧ ಸಂಘ ಸಂಸ್ಥೆಗಳು ಸಾರ್ಥಕ ಸೇವೆ ಸಲ್ಲಿಸುತ್ತಿದೆ.

ಪ್ರತಿ ವರ್ಷ ಶಿವರಾತ್ರಿ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಂದ ದೊಡ್ಡ ಸಂಖ್ಯೆಯ ಭಕ್ತರು ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ತೆರಳುವುದು ಸಂಪ್ರದಾಯ. ಅದೇ ರೀತಿ ಈ ವರ್ಷವೂ ಸಾವಿರಾರು ಭಕ್ತರು ಧರ್ಮಸ್ಥಳಕ್ಕೆ ನೂರಾರು ಕಿ.ಮೀ. ದೂರ ನಡೆದೇ ತೆರಳುತ್ತಿದ್ದಾರೆ. ಅಂತಹ ಭಕ್ತರಿಗಾಗಿ ಉಚಿತ ಊಟ, ಉಪಹಾರದ ವ್ಯವಸ್ಥೆಯನ್ನು ಈ ತಂಡ ಮಾಡುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರಿಗಳ ಸೇವಾ ತಂಡದ ಹೆಸರಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ಕೆ ನಗರಸಭೆ ಆಯುಕ್ತರು ಸೇರಿದಂತೆ ಇತರರು ನೆರವು ನೀಡಿದ್ದಾರೆ.

ದಾನಿಗಳು ನೀಡುವ ದೇಣಿಗೆಯಿಂದ ಭಕ್ತರಿಗೆ ಊಟ, ಉಪಚಾರ ಮಾಡಲಾಗುತ್ತಿದೆ. ಉರಿ ಬಿಸಿಲಿನಲ್ಲಿ ಕಾಲ್ನಡಿಗೆಯಲ್ಲಿ ಬರುವ ಭಕ್ತರು ದಣಿವು ನಿವಾರಿಸಿ ಕೊಳ್ಳಲು, ವಿಶ್ರಮಿಸಲು ಸೂಕ್ತ ಸ್ಥಳವಿಲ್ಲದೇ ಪರದಾಡುವುದನ್ನು ಮನಗಂಡ ಈ ತಂಡ ಅವರ ನೆರವಿಗೆ ನಿಂತಿದೆ. ಬೆಳಗಿನಿಂದ ರಾತ್ರಿಯವರೆಗೆ ಸಾವಿರಾರು ಭಕ್ತರು ಇಲ್ಲಿ ಸ್ವಲ್ಪ ಸಮಯ ತಂಗಿದ್ದು, ಆತಿಥ್ಯ ಸ್ವೀಕರಿಸಿ ಮುಂದುವರಿಯುತ್ತಾರೆ. ಮೂಡಿಗೆರೆ ಕೊಟ್ಟಿಗೆಹಾರದಲ್ಲಿ ಕೆಲ ಯುವಕರು ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ.

ಈ ಯುವಕರ ತಂಡದ ಜೊತೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಸಹ ದಿನ ವಿಡೀ ಸ್ಥಳದಲ್ಲಿ ಕ್ಯಾಂಪ್ ಮಾಡಿ ಪಾದಯಾತ್ರಿಗಳ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಜ್ವರ ಇನ್ನಿತರ ಸಮಸ್ಯೆಯಿಂದ ಬಳಲುವವರಿಗೆ ಹತ್ತಿರದಲ್ಲೇ ಹೊಸಮನೆ ಬಡಾವಣೆಯಲ್ಲಿರುವ ಸಂಸ್ಥೆಯ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಸಾಮಾನ್ಯ ಆರೋಗ್ಯ ಸಮಸ್ಯೆ ಇರುವವರಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ಜೊತೆಗೆ ಉಚಿತ ಔಷಧ, ಮಾತ್ರೆಗಳನ್ನು ನೀಡಲಾಗುತ್ತಿದೆ. ವೈದ್ಯರು ಹಾಗೂ ಯುವಕರ ಸೇವಾ ಕಾರ್ಯದ ಬಗ್ಗೆ ಪಾದಯಾತ್ರಿ ಭಕ್ತರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಮಾರ್ಗದಲ್ಲಿ ತೆರೆದ ನೀರು, ಶೌಚಾಲಯ, ಕಸ ವಿಲೇವಾರಿ ಘಟಕ: ಮೂಡಿಗೆರೆ ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಾಲಯದ ಆವರಣದಲ್ಲಿ ದಾನಿಗಳ ನೆರವಿನಲ್ಲಿ ಸ್ವಯಂ ಸೇವಕರು ಧರ್ಮಸ್ಥಳಕ್ಕೆ ತೆರಳುವ ಪಾದಚಾರಿಗಳಿಗೆ ನಿತ್ಯ ದಾಸೋಹ ವ್ಯವಸ್ಥೆ ಮಾಡುತ್ತಿದ್ದಾರೆ. ರಸ್ತೆ ಉದ್ದಕ್ಕೂ ಭಕ್ತರಿಗೆ ತಂಪು ಪಾನಿಯ, ಕಸವಿಲೇವಾರಿ ಘಟಕ, ಕುಡಿಯುವ ನೀರು ಸೇರಿದಂತೆ ತಂಗಲು, ವಿಶ್ರಮಿಸಿಕೊಳ್ಳಲು ವ್ಯವಸ್ಥೆ ಮಾಡುವ ಮೂಲಕ ಸಾರ್ಥಕ ಸೇವೆಯನ್ನು ಹಲವು ಸಂಘ ಸಂಸ್ಥೆಗಳು ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಮೂಡಿಗೆರೆ, ಕೊಟ್ಟಿಗೆಹಾರ, ಚಾರ್ಮಡಿ ಘಾಟ್ ಮೂಲಕ ಪ್ರತಿ ನಿತ್ಯ ಸಾವಿರಾರು ಜನರು ಪಾದಯಾತ್ರೆ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೋಗುತ್ತಿದ್ದಾರೆ.

ಇದನ್ನೂ ಓದಿ: ಭೀಮಾತೀರದ ರಕ್ತಸಿಕ್ತ ಅಧ್ಯಾಯ.. ಸಂಧಾನದ ಮೂಲಕ ಇತಿಶ್ರೀ ಹಾಡಿದ ಎಡಿಜಿಪಿ ಅಲೋಕ್​ ಕುಮಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.