ETV Bharat / state

ಸೆಕೆಂಡ್ ಹ್ಯಾಂಡ್ ವೆಹಿಕಲ್ ಡೀಲಿಂಗ್ : ಹಲವರಿಗೆ ಟೋಪಿ ಹಾಕಿ ಪರಾರಿಯಾದ ಚಿಕ್ಕಮಗಳೂರಿನ ಖೇಡಿ - ಹಲವರಿಗೆ ಟೋಪಿ ಹಾಕಿ ಪರಾರಿಯಾದ ಚಿಕ್ಕಮಗಳೂರಿನ ವ್ಯಕ್ತಿ

ನ್ಯಾಯ ಬದ್ದವಾಗಿಯೇ ಆ ಜನರಿಗೆ ಹಣ ನೀಡಿ, ಸಂಬಂಧಪಟ್ಟ ವಾಹನದ ಮಾಲೀಕರಿಂದಲೇ ಸಹಿ ಮಾಡಿಸಿಕೊಂಡಿರುವ ಎಲ್ಲಾ ದಾಖಲೆಗಳು ವಾಹನ ಖರೀದಿಸಿದವರ ಬಳಿಯಿವೆ. ಆದರೆ, ಹಣ ಪಡೆದ ಅಜರ್ ಸೇಲ್ ಮಾಡಲು ವಾಹನ ತೆಗೆದುಕೊಂಡು ಬಂದಿದ್ದ ಮಾಲೀಕರಿಗೆ ಹಣವನ್ನು ನೀಡಿಲ್ಲ. ಹೀಗಾಗಿ, ಆ ಮಾಲೀಕರು ಹಣ ನಮಗೆ ಬಂದಿಲ್ಲ ಎಂದು ಪೊಲೀಸರ ಮೊರೆ ಹೋಗಿದ್ದಾರೆ..

chikkamagaluru
ಅಜ್ಹರ್
author img

By

Published : Sep 25, 2021, 5:03 PM IST

ಚಿಕ್ಕಮಗಳೂರು : ಇಲ್ಲೊಬ್ಬ ಖತರ್ನಾಕ್ ಹತ್ತಾರು ಜನರಿಗೆ ಮೋಸ ಮಾಡಿ ಹಣ ಲಪಟಾಯಿಸಿಕೊಂಡು ಊರು ಬಿಟ್ಟಿದ್ದಾನೆ. ಇಂದು ಬರ್ತಾನೆ, ನಾಳೆ ಬರ್ತಾನೆ ಎಂದು ಹಣವನ್ನ ಕೊಟ್ಟು ಕಾದು ಕಾದು ಸುಸ್ತಾದ ಜನರು ಇದೀಗ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಒದ್ದಾಟ ನಡೆಸುವಂತಾಗಿದೆ.

ಸೆಕೆಂಡ್ ಹ್ಯಾಂಡ್ ವೆಹಿಕಲ್ ಡೀಲಿಂಗ್ : ಹಲವರಿಗೆ ಟೋಪಿ ಹಾಕಿ ಪರಾರಿಯಾದ ಚಿಕ್ಕಮಗಳೂರಿನ ವ್ಯಕ್ತಿ

ಚಿಕ್ಕಮಗಳೂರಿನ ಟಿಪ್ಪುನಗರ ನಿವಾಸಿ ಅಜರ್‌ ಎಂಬಾತ ಜನರನ್ನ ವಂಚಿಸಿರುವ ಖೇಡಿ. ಸೆಕೆಂಡ್ ಹ್ಯಾಂಡ್ ವೆಹಿಕಲ್ ಡೀಲಿಂಗ್ ಮಾಡುವುದು ಈತನ ಕೆಲಸ. ನಮ್ಮೂರ ಹುಡುಗ ಅಲ್ವಾ ಅಂತಾ ಜನ ಇವನನ್ನು ನಂಬಿ ಕಾರುಗಳನ್ನು ಖರೀದಿಸಿದರೆ, ಈತ ಟೋಪಿ ಹಾಕಿ ಪರಾರಿಯಾಗಿದ್ದಾನೆ.

ಕಳೆದುಕೊಂಡವರು ಕೇವಲ ಹಣ ನೀಡಿಲ್ಲ. ಚಿನ್ನಾಭರಣ ಮಾರಿ ಹಣ ಕೊಟ್ಟಿದ್ದರು. ಸ್ವಿಫ್ಟ್ ಡಿಸೈರ್,ಡಸ್ಟರ್, ಲೇಲ್ಯಾಂಡ್ ಗಾಡಿ ಖರೀದಿಸಿದವರಿಗೆ ವಂಚನೆಯಾಗಿದೆ. ಈ ವಂಚನೆಯ ಕಹಾನಿ ಶಾಹಿದ್, ಅರುಣ್, ಸಾದಿಕ್, ಜಿಶಾನ್, ವಾಸಿಮ್ ಹೀಗೆ ಮುಂದುವರೆದುಕೊಂಡು ಹೋಗುತ್ತದೆ. ಎಲ್ಲರಿಂದಲೂ ಒಂದು ಪೈಸೆ ಬಿಡದಂತೆ ಹಣ ತೆಗೆದುಕೊಂಡ ಅಜರ್ ಇದೀಗ ಊರೇ ಬಿಟ್ಟಿದ್ದಾನೆ. ಇದೀಗ ವಾಹನ ಖರೀದಿದಾರರಿಗೆ ಪೊಲೀಸರಿಂದ ಕರೆಗಳು ಬರುತ್ತಿದ್ದು, ನಿಮ್ಮಲ್ಲಿರುವ ವಾಹನಗಳು ಇವರಿಗೆ ಸೇರಿದ್ದು, ಅವರಿಗೆ ಸೇರಿದ್ದು ಎಂದು ಹೇಳುತ್ತಿದ್ದಾರೆ.

ನ್ಯಾಯ ಬದ್ದವಾಗಿಯೇ ಆ ಜನರಿಗೆ ಹಣ ನೀಡಿ, ಸಂಬಂಧಪಟ್ಟ ವಾಹನದ ಮಾಲೀಕರಿಂದಲೇ ಸಹಿ ಮಾಡಿಸಿಕೊಂಡಿರುವ ಎಲ್ಲಾ ದಾಖಲೆಗಳು ವಾಹನ ಖರೀದಿಸಿದವರ ಬಳಿಯಿವೆ. ಆದರೆ, ಹಣ ಪಡೆದ ಅಜರ್ ಸೇಲ್ ಮಾಡಲು ವಾಹನ ತೆಗೆದುಕೊಂಡು ಬಂದಿದ್ದ ಮಾಲೀಕರಿಗೆ ಹಣವನ್ನು ನೀಡಿಲ್ಲ. ಹೀಗಾಗಿ, ಆ ಮಾಲೀಕರು ಹಣ ನಮಗೆ ಬಂದಿಲ್ಲ ಎಂದು ಪೊಲೀಸರ ಮೊರೆ ಹೋಗಿದ್ದಾರೆ.

ಸಾಲ-ಸೋಲ ಮಾಡಿ, ಒಡವೆ ಅಡವಿಟ್ಟು ಹಣ ನೀಡಿದ್ದ ಜನ ಹಣಕ್ಕಾಗಿ ಕಣ್ಣು ಬಾಯಿ ಬಿಡುವಂತಾಗಿದೆ. ಪೊಲೀಸರಿಂದ ಕರೆ ಬಂದ ಮೇಲೆ ಈಗ ಎಲ್ಲರೂ ನಮಗೂ ಹೀಗೆ ಕರೆ ಬರುತ್ತಿದೆ ಎಂದು ವಿಷಯ ಹಂಚಿಕೊಳುತ್ತಿದ್ದಾರೆ. ವಾಹನಗಳ ಮೇಲೆ ಬ್ಯಾಂಕ್ ಲೋನ್ ಇದ್ದಿದ್ದರಿಂದ ಬ್ಯಾಂಕ್‌ನವರು ಕೆಲ ವಾಹನಗಳನ್ನ ಸೀಜ್ ಮಾಡಿದ್ದಾರೆ. ಹಣ ಕೊಟ್ಟು ವಾಹನ ಕಳೆದುಕೊಂಡವರು ಕೈ-ಕೈ ಹಿಸುಕಿಕೊಳ್ಳುವಂತಾಗಿದೆ.

ಸಾಲ ಮಾಡಿ ಹಣ ನೀಡಿ, ಎಲ್ಲಾ ದಾಖಲೆ ಪತ್ರಗಳನ್ನ ಪಡೆದುಕೊಂಡರು ಕೂಡ ವಾಹನ ಖರೀದಿ ಮಾಡಿದವರಿಗೆ ಇದೀಗ ನೆಮ್ಮದಿಯೇ ಇಲ್ಲದಂತಾಗಿದೆ. ಈ ಮಧ್ಯೆ ಎಲ್ಲರಿಗೂ ಕೈ ಎತ್ತಿ ಊರು ಬಿಟ್ಟಿರುವ ಆಸಾಮಿಗಾಗಿ ಕಾಫಿನಾಡ ಪೊಲೀಸರು ತಲಾಶ್ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.