ETV Bharat / state

ಸಹಾಯ ಕೇಳಿ ಪುರುಷರಿಗೆ ವಂಚನೆ: ಹನಿಟ್ರ್ಯಾಪ್ ತಂಡದ ತಾಯಿ-ಮಗಳು ಸೇರಿ 13 ಮಂದಿ ಅರೆಸ್ಟ್ - ಚಿಕ್ಕಮಗಳೂರು ಹನಿಟ್ರ್ಯಾಪ್ ಕೇಸ್

ಪ್ರಕರಣವನ್ನು ಪತ್ತೆ ಮಾಡಲು ಜಂಟಿ ಕಾರ್ಯಾಚರಣೆ ನಡೆಸಿದ ಚಿಕ್ಕಮಗಳೂರು ನಗರ ಹಾಗೂ ಸೈಬರ್ ಪೊಲೀಸರು, ಪುರುಷರನ್ನು ಯಾಮಾರಿಸಿ ಹನಿಟ್ರ್ಯಾಪ್ ಮಾಡುತ್ತಿದ್ದ 13 ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಪೈಕಿ 6 ಮಂದಿ ಮಹಿಳೆಯರಿದ್ದಾರೆ.

Honey trap in Chikkamagluru
ಹನಿಟ್ರ್ಯಾಪ್ ಜಾಲ ಬೇಧಿಸಿದ ಚಿಕ್ಕಮಗಳೂರು ಪೊಲೀಸರು
author img

By

Published : Aug 19, 2021, 9:25 AM IST

ಚಿಕ್ಕಮಗಳೂರು: ಪುರುಷರನ್ನು ಯಾಮಾರಿಸಿ ಹನಿಟ್ರ್ಯಾಪ್ ದಂಧೆ ನಡೆಸುತ್ತಿದ್ದ ಜಾಲವೊಂದನ್ನು ಪೊಲೀಸರು ಬೇಧಿಸಿದ್ದು, 7 ಮಂದಿ ಪುರುಷರು 6 ಮಂದಿ ಮಹಿಳೆಯರು ಸೇರಿದಂತೆ ಒಟ್ಟು 13 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಚಿಕ್ಕಮಗಳೂರು ನಗರ ಮತ್ತು ಹಾಸನದ ಸಕಲೇಶಪುರ ಮೂಲದವರಾಗಿದ್ದಾರೆ.

ಹನಿಟ್ರ್ಯಾಪ್ ಜಾಲದಲ್ಲಿ ತಾಯಿ-ಮಗಳು!

ಈ ಹನಿಟ್ರ್ಯಾಪ್ ತಂಡದ ಬಲೆಗೆ ಬಿದ್ದು ಕಿರುಕುಳ ತಾಳಲಾರದೆ ಬೇಸತ್ತು ಹೋಗಿದ್ದ ಕೆಲವು ವ್ಯಕ್ತಿಗಳು ನೀಡಿದ ದೂರಿನ ಮೇರೆಗೆ ಜಂಟಿ ಕಾರ್ಯಾಚರಣೆ ನಡೆಸಿದ ಚಿಕ್ಕಮಗಳೂರು ನಗರ ಹಾಗೂ ಸೈಬರ್ ಪೊಲೀಸರು, ಆರೋಪಿಗಳ ಕೈಗೆ ಕೋಳ ತೊಡಿಸಿದ್ದಾರೆ. ಬಂಧಿತರ ಪೈಕಿ ತಾಯಿ-ಮಗಳು ಕೂಡ ಇದ್ದಾರೆ ಅನ್ನೋದು ಗಮನಿಸಬೇಕಾದ ಸಂಗತಿ.

ಆರೋಪಿಗಳಿಂದ 1 ಲಕ್ಷದ 97 ಸಾವಿರ ರೂ. ಹಣ, 2 ಲಕ್ಷ ರೂ. ಬರೆದುಕೊಂಡಿರುವ ಚೆಕ್, 5 ಕಾರುಗಳು, 17 ಮೊಬೈಲ್ ಫೋನ್, 24 ಸಿಮ್ ಕಾರ್ಡ್​ ಮತ್ತು 24 ಸಾವಿರ ರೂಪಾಯಿಯ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಹನಿಟ್ರ್ಯಾಪ್ ಜಾಲ ಬೇಧಿಸಿದ ಚಿಕ್ಕಮಗಳೂರು ಪೊಲೀಸರು

ಮೋಸದ ಬಲೆಗೆ ಬೀಳಿಸುತ್ತಿದ್ದ ಬಗೆ ಹೀಗೆ..

ಸಿನಿಮಾ ಶೈಲಿಯಲ್ಲಿ ಈ ತಂಡ ತಮ್ಮ ಕೃತ್ಯವೆಸಗುತ್ತಿತ್ತು. ತಂಡದ ಮಹಿಳೆಯರು ಮಧ್ಯವಯಸ್ಸಿನ ಮತ್ತು ಆರ್ಥಿಕವಾಗಿ ಸ್ವಲ್ಪ ಚೆನ್ನಾಗಿರುವ ಪುರುಷರನ್ನು ಟಾರ್ಗೆಟ್ ಮಾಡಿ ಅವರನ್ನು ತಮ್ಮ ಬಲೆಗೆ ಬೀಳಿಸುತ್ತಿದ್ದರು. ಬಳಿಕ ಅವರೊಂದಿಗೆ ಸಲುಗೆ ಬೆಳೆಸಿ ನಗ್ನ ವಿಡಿಯೋಗಳನ್ನು ಮಾಡಿಕೊಳ್ಳುತ್ತಿದ್ದರಂತೆ. ಇದಾದ ಮೇಲೆ ಕೇಳಿದಷ್ಟು ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಡುವುದಾಗಿ ಬೆದರಿಸುತ್ತಿದ್ದರು.

ಸಹಾಯ ಮಾಡಲು ಬಂದವರಿಗೆ ವಂಚನೆ

ಇನ್ನೊಂದು ರೀತಿಯಲ್ಲಿ, ಈ ತಂಡದ ಮಹಿಳೆಯರು ಏನೇನೋ ಕಥೆಗಳನ್ನು ಕಟ್ಟಿ ಮನೆಯಲ್ಲಿ ಕಷ್ಟ ಇದೆ, ಮನೆಯವರಿಗೆ ಹುಷಾರಿಲ್ಲ ಎಂಬಿತ್ಯಾದಿ ನೆಪಗಳಿಂದ ಪುರುಷರನ್ನು ತಮ್ಮ ಮನೆಗೆ ಕರೆಸಿಕೊಳ್ಳುತ್ತಿದ್ದರು. ಪುರುಷರು ಸಹಾಯ ಮಾಡುವ ಉದ್ದೇಶದಿಂದ ಆ ಮಹಿಳೆಯ ಮನೆಗೆ ಹೋದ ತಕ್ಷಣ ಅಲ್ಲಿಗೆ ಪೊಲೀಸರ ವೇಷದಲ್ಲಿ ಎಂಟ್ರಿ ಕೊಡುವ ತಂಡದ ಪುರುಷರು, ಇಲ್ಲಿ ವೇಶ್ಯಾವಟಿಕೆ ನಡೆಯುತ್ತಿದೆ. ನೀವು ಮಹಿಳೆಯನ್ನು ಇಟ್ಟುಕೊಂಡು ವೇಶ್ಯಾವಟಿಕೆ ಮಾಡುತ್ತಿದ್ದೀರಿ ಎಂದು ಸುಳ್ಳು ಆರೋಪ ಹೊರಿಸುತ್ತಿದ್ದರು.

ಇದಕ್ಕೆ ಮಹಿಳೆ ಕೂಡ ಹೌದು ಎಂದು ಹೇಳುತ್ತಿದ್ದಳು. ಅಲ್ಲದೆ, ಹಲ್ಲೆ ಮಾಡಿ ಬಲವಂತವಾಗಿ ವಿಡಿಯೋ ಶೂಟ್ ಮಾಡಿಕೊಳ್ಳುತಿದ್ದರು. ಬಳಿಕ ಈ ವಿಷಯವನ್ನು ಇಟ್ಟುಕೊಂಡು ತಂಡ ಆತನ ಬಳಿ ಹಣಕ್ಕೆ ಬೇಡಿಕೆ ಇಡುತ್ತಿತ್ತು. ಹಣ ಕೊಡದಿದ್ದರೆ ಮಹಿಳೆಯರನ್ನು ಇಟ್ಟುಕೊಂಡು ವೇಶ್ಯಾವಟಿಕೆ ಮಾಡಿದ್ದೀರಿ ಎಂದು ಕೇಸ್ ಹಾಕ್ತೀವಿ, ಎಫ್​ಐಆರ್ ಮಾಡ್ತೀವಿ ಎಂದು ಭಯ ಹುಟ್ಟಿಸುತ್ತಿದ್ದರು.

ಕಿರುಕುಳ ತಾಳಲಾರದೆ ಪೊಲೀಸರಿಗೆ ದೂರು

ಈ ರೀತಿ ಹಲವು ಪುರುಷರಿಗೆ ತಂಡ ಮೋಸ ಮಾಡುತ್ತಿತ್ತು. ಇವರಿಂದ ವಂಚನೆಗೊಳಗಾದವರು ಮರ್ಯಾದೆಗೆ ಅಂಜಿ ಕೇಳಿದಷ್ಟು ಹಣ ಕೊಡುತ್ತಿದ್ದರು. ಈ ತಂಡದ ಕಿರುಕುಳ ತಾಳಲಾರದೆ ಕೆಲ ಪುರುಷರು ಇತ್ತೀಚೆಗೆ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು, ಕೊನೆಗೂ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.