ETV Bharat / state

ಕುಗ್ರಾಮಗಳಲ್ಲಿ ಬೆಳಕು ಮೂಡಿಸುವ ಸಾಹಸಿ: ಕಾಫಿ ನಾಡಿನ 'ಪವರ್​​ ಮ್ಯಾನ್' ಈ ರತ್ನಾಕರ್!​

author img

By

Published : Dec 13, 2020, 5:55 PM IST

Updated : Dec 13, 2020, 6:04 PM IST

ಚಿಕ್ಕಮಗಳೂರು ಜಿಲ್ಲೆಯ ರತ್ನಾಕರ್​​ ಇಲ್ಲಿಯವರೆಗೆ ಅದೆಷ್ಟೋ ಕುಗ್ರಾಮಗಳಿಗೆ ವಿದ್ಯುತ್​ ವ್ಯವಸ್ಥೆ ಮಾಡಿದ್ದಾರೆ. ಈ ಮೂಲಕ ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ ಬೇರೆ ಬೇರೆ ರಾಜ್ಯಗಳಲ್ಲಿರುವ ಗ್ರಾಮಗಳಿಗೂ ತಾವು ತಯಾರಿಸಿರುವ ಟರ್ಬೋ ಯಂತ್ರದ ಮೂಲಕ ವಿದ್ಯುತ್​ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ. ತಮ್ಮ ಸಾಹಸಮಯ ಕಾರ್ಯದಿಂದ ಪವರ್ ಮ್ಯಾನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪವರ್​​ ಮ್ಯಾನ್ ರತ್ನಾಕರ್
Chikkamagaluru district Ratnakar

ಚಿಕ್ಕಮಗಳೂರು: ಕಾಫಿನಾಡಲ್ಲಿ ವಿದ್ಯುತ್​ ಕಣ್ಣಾ ಮುಚ್ಚಾಲೆ ಮಳೆಗಾಲದ ಸಮಯದಲ್ಲಿ ಸಾಮಾನ್ಯ. ಜಿಲ್ಲೆಯ ಆದೆಷ್ಟೋ ಕುಗ್ರಾಮಗಳಿಗೆ ಈವರೆಗೂ ವಿದ್ಯುತ್​ ಸಂಪರ್ಕವೇ ಇಲ್ಲ. ​​ಸರ್ಕಾರ ಈ ಬಗ್ಗೆ ಗಮನ ಹರಿಸದಿದ್ದರೂ ಇಲ್ಲೋರ್ವ ಸಾಹಸಿ ಪವರ್​ ಮ್ಯಾನ್​ ಅಂತಹ ಗ್ರಾಮಗಳಿಗೆ ಬೆಳಕು ನೀಡುವ ಕೆಲಸ ಮಾಡುತ್ತಿದ್ದಾರೆ.

Chikkamagaluru district Ratnakar
ರತ್ನಾಕರ್​​ ತಯಾರಿಸಿರುವ ಟರ್ಬೋ ಯಂತ್ರ

ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಗುಡ್ಡೆ ತೋಟದ ನಿವಾಸಿ ರತ್ನಾಕರ್​​ ಇಂತಹದೊಂದು ಕೆಲಸ ಮಾಡುತ್ತಿರುವ ಸಾಹಸಿ ವ್ಯಕ್ತಿ. ಇವರ ಸಾಧನೆಯ ವಿಷಯ ಸ್ಥಳೀಯ ಮಟ್ಟದಿಂದ ಹಿಡಿದು ರಾಷ್ಟ್ರಪತಿಗಳಾಗಿದ್ದ ಅಬ್ದುಲ್ ಕಲಾಂ, ಪ್ರಣಬ್​ ಮುಖರ್ಜಿವರೆಗೂ ಮುಟ್ಟಿದೆ. ಸುಮಾರು 30 ವರ್ಷಗಳ ಹಿಂದೆ ಇವರ ಊರಿಗೆ ಕರೆಂಟ್ ವ್ಯವಸ್ಥೆ ಇರಲಿಲ್ಲ. ಮಳೆಗಾಲ ಬಂದರಂತೂ ತಿಂಗಳುಗಟ್ಟಲೇ ಕರೆಂಟ್ ಬರೋ ಮಾತೇ ಇರುತ್ತಿರಲಿಲ್ಲ. ಈ ವೇಳೆ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಮುಂದಾದ ರತ್ನಾಕರ್ ಅವರಿಗೆ ನೀರನ್ನು ಬಳಸಿಕೊಂಡು ವಿದ್ಯುತ್​ ತಯಾರಿಸುವ ಟರ್ಬೋ ಯಂತ್ರದ ಯೋಚನೆ ಬಂದಿದೆ.

Chikkamagaluru district Ratnakar
ರತ್ನಾಕರ್​​ ತಯಾರಿಸಿರುವ ಟರ್ಬೋ ಯಂತ್ರ

ಓದಿ : ನಾನು ಮುಖ್ಯಮಂತ್ರಿಯಾಗಬೇಕೆಂಬ ಮಾತಿಗೆ ಅರ್ಥವಿಲ್ಲ: ಸಚಿವ ಪ್ರಹ್ಲಾದ್​ ಜೋಶಿ

ಆ ಕೂಡಲೇ ಕಾರ್ಯ ಪ್ರವೃತರಾದ ರತ್ನಾಕರ್​, ತಮ್ಮ ಕೈಯಲ್ಲಿದ್ದ ಕೆಲಸವನ್ನು ಬಿಟ್ಟು ಒಂದು ಟರ್ಬೋ ಯೂನಿಟ್ ಸಿದ್ಧಪಡಿಸಿದರು. ಅಷ್ಟೇ ಅಲ್ಲದೆ, ಅದೇ ಮಳೆಗಾಲದ ನೀರನ್ನು ಬಳಸಿಕೊಂಡು ಮನೆಗೆ ವಿದ್ಯುತ್ ವ್ಯವಸ್ಥೆ ಮಾಡಿದ್ದಾರೆ. ಅಂದಿನಿಂದ ಇಲ್ಲಿವರೆಗೂ ಇವರ ಮನೆಯಲ್ಲಿ ಕರೆಂಟ್ ಇಲ್ಲದ ದಿನವೇ ಇಲ್ಲವಂತೆ. ಕೇವಲ ಇವರ ಮನೆಗೆ ಮಾತ್ರವಲ್ಲ, ಅದೆಷ್ಟೋ ಕುಗ್ರಾಮಗಳಿಗೆ ಹೋಗಿ ವಿದ್ಯುತ್​ ವ್ಯವಸ್ಥೆ ಕಲ್ಪಿಸುವ ಮೂಲಕ ಕಾಫಿನಾಡಿನ ಪವರ್ ಮ್ಯಾನ್ ಎಂಬ ಹೆಗ್ಗಳಿಗೆಕೆ ರತ್ನಾಕರ್ ಪಾತ್ರರಾಗಿದ್ದಾರೆ.

ಬೇರೆ ರಾಜ್ಯಗಳಲ್ಲೂ ಕರೆಂಟ್​ ಕೊಟ್ಟ ರತ್ನಾಕರ್​:

ರತ್ನಾಕರ್​ ಅವರು ಕೇವಲ ನಮ್ಮ ರಾಜ್ಯದ ಗ್ರಾಮಗಳಿಗೆ ಮಾತ್ರವಲ್ಲದೆ ಬೇರೆ ಬೇರೆ ರಾಜ್ಯಗಳಲ್ಲಿರುವ ಕುಗ್ರಾಮಗಳಿಗೆ ಕರೆಂಟ್​ ವ್ಯವಸ್ಥೆ ಮಾಡಿದ್ದಾರೆ. ಕಳೆದ ವರ್ಷ ಮೇಘಾಲಯದ ಕೆಲ ಕುಗ್ರಾಮಗಳಿಗೆ ಇವರು ವಿದ್ಯುತ್​ ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ. ಇದೀಗ ಇವರ ಬಳಿ ಬೇರೆ ರಾಜ್ಯಗಳು ತಮ್ಮ ಗ್ರಾಮಗಳಿಗೂ ವಿದ್ಯುತ್​ ವ್ಯವಸ್ಥೆ ಕಲ್ಪಿಸುವಂತೆ ಕೇಳುತ್ತಿದ್ದಾರಂತೆ. ಅದಕ್ಕಾಗಿ ಅವರು ಟರ್ಬೋ ಯೂನಿಟ್​​ಗಳನ್ನು ರೆಡಿ ಮಾಡಿಕೊಂಡಿದ್ದು, ಇನ್ನೆರಡು ದಿನದಲ್ಲಿ ಉತ್ತರದ ರಾಜ್ಯಗಳಿಗೆ ಶಿಫ್ಟ್ ಆಗಲಿವೆ. ಆ ಬಳಿಕ ರತ್ನಾಕರ್ ಅಲ್ಲಿಗೆ ಹೋಗಿ ಟರ್ಬೋ ಲೈನ್ ಜೋಡಿಸಿ ಕಾಫಿನಾಡಿನ ಪವರನ್ನು ಹರಿಸಲಿದ್ದಾರೆ. ರತ್ನಾಕರ್ ಕೈಚಳಕ ಕೇವಲ ಮನೆಯ ವಿದ್ಯುತ್ ಉದ್ದೇಶಕ್ಕೆ ಮಾತ್ರ ಬಳಕೆಯಾಗುತ್ತಿಲ್ಲ. ಬದಲಾಗಿ ಅದೇ ಟರ್ಬೋದಲ್ಲಿ ಹಿಟ್ಟಿನ ಗಿರಣಿಯನ್ನು ಕೂಡ ಮಾಡಿಕೊಂಡು ವಿವಿಧ ಪ್ರಯೋಜನ ಪಡೆಯುತ್ತಿದ್ದಾರೆ.

Last Updated : Dec 13, 2020, 6:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.