ಚಿಕ್ಕಮಗಳೂರು: ತಾಲೂಕಿನ ಮಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ರತ್ನಾಕರ್ ಹಾಗೂ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ನಡುವೆ ಸರ್ಕಾರಿ ಕಟ್ಟಡ ಕೆಡವಿದ ಕುರಿತು ನಡೆದ ಫೋನ್ ಸಂಭಾಷಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಸ್ಪಷ್ಟನೆ ನೀಡಿದ್ದು, ಈ ಕುರಿತು ನಿಮಗೆ ಮತ್ತೊಮ್ಮೆ ನಾನು ಪ್ರತಿಕ್ರಿಯೆ ನೀಡುತ್ತೇನೆ ಎಂದಿದ್ದಾರೆ.
ಮಲ್ಲೇನಹಳ್ಳಿ ಪಿಡಿಒ ರತ್ನಾಕರ್ ಅವರು ಸರ್ಕಾರಿ ಕಟ್ಟಡ ಕೆಡವಿದಕ್ಕೆ ಮಾತುಕತೆ ಆಗಿದೆ ಅಷ್ಟೆ. ಅದು ಕೆಪಿಟಿಸಿಎಲ್ ಗೆ ಸೇರಿದ ಕಟ್ಟಡವಾಗಿದ್ದು, ಈ ವಿಚಾರವಾಗಿ ಫೋನಿನಲ್ಲಿ ಚರ್ಚೆ ಮಾಡಲಾಗಿದೆ. ಪ್ರಮುಖವಾಗಿ ಪಿಡಿಒ ಸರ್ಕಾರಿ ಕಟ್ಟಡವನ್ನು ಬೀಳಿಸಿದ್ದಾರೆ. ಈ ಕುರಿತು ಚರ್ಚೆ ಮಾಡಲಾಗಿದೆ ಬೇರೆ ಏನು ಇಲ್ಲ ಎಂಬ ಉತ್ತರವನ್ನು ನೀಡಿ ಬಗಾದಿ ಗೌತಮ್ ಅವರು ಆಡಿಯೋ ಪ್ರಕರಣದ ಕುರಿತು ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ.
ಇದನ್ನು ಓದಿ: ಪಿಡಿಓಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಚಿಕ್ಕಮಗಳೂರು ಡಿಸಿ, ಆಡಿಯೋ ವೈರಲ್