ಚಿಕ್ಕಮಗಳೂರು: ಜಿಲ್ಲೆಯ ಮುತ್ತೋಡಿ ಅಭಯಾರಣ್ಯಕ್ಕೆ ನಟ ದರ್ಶನ್ ತೂಗುದೀಪ್ ಭೇಟಿ ನೀಡಿದ್ದಾರೆ.
ಭದ್ರಾ ರಕ್ಷಿತಾರಣ್ಯದಲ್ಲಿ ಚಾಲೆಂಜಿಂಗ್ ಸ್ಟಾರ್ ಸಫಾರಿ ನಡೆಸಿದ್ದಾರೆ. ಈ ವೇಳೆ ದರ್ಶನ್ ಜೊತೆ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಅವರ ಅಭಿಮಾನಿಗಳು ಸೆಲ್ಫಿ ತೆಗೆಸಿಕೊಂಡು ಖುಷಿಪಟ್ಟಿದ್ದಾರೆ.
ಸ್ನೇಹಿತರ ಜೊತೆ ಮುತ್ತೋಡಿಗೆ ಆಗಮಿಸಿರುವ ದರ್ಶನ್, ಮಧ್ಯಾಹ್ನ ಸಫಾರಿ ಮುಗಿಸಿ ತೆರಳುತ್ತಿದ್ದಾರೆ.