ಚಿಕ್ಕಮಗಳೂರು : ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸೇರಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಸಚಿವರುಗಳಿಗೆ ಮತ್ತು ಜಿಂದಾಲ್ ಕಂಪನಿಗೆ ಸಂಬಂಧಿಸಿದಂತೆ ನೇರವಾಗಿ 15 ಪ್ರಶ್ನೆಗಳನ್ನು ಕೇಳಿರುವ ಪತ್ರವನ್ನು ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಬಿಡುಗಡೆ ಮಾಡಿದ್ದಾರೆ.
ಜಿಂದಾಲ್ ಕಂಪನಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಭೂಮಿ ಮಾರಾಟ ಮಾಡಿ ಕೊಡುತ್ತಿರುವುದರಿಂದ ಕರ್ನಾಟಕ ರಾಜ್ಯಕ್ಕೆ ಆಗುವ ಲಾಭವೇನು? ಜಿಂದಾಲ್ ಸ್ಟೀಲ್ ಕಂಪನಿ ಕರ್ನಾಟಕದಲ್ಲಿ ಪ್ರಾರಂಭಿಸುವಾಗ ಕರ್ನಾಟಕ ಸರ್ಕಾರಕ್ಕೂ, ಜಿಂದಾಲ್ ಕಂಪನಿಗೂ ನಡೆದಿರುವ ವ್ಯಾವಹಾರಿಕ ಒಪ್ಪಂದವೇನು? ಎಂದು ಪ್ರಶ್ನಿಸಿದ್ದಾರೆ.
ಜಿಂದಾಲ್ ಕಂಪನಿಗೆ ರಾಜ್ಯ ಸರ್ಕಾರ ಒದಗಿಸುತ್ತಿರುವ ನೀರಿನ ಪ್ರಮಾಣ ಹಾಗೂ ಅದನ್ನು ಎಲ್ಲಿಂದ ಒದಗಿಸಲಾಗುತ್ತದೆ? ಕಂಪನಿಗೆ ಭೂಮಿಯನ್ನು ಲೀಸ್‌ಗೆ ನೀಡಲಾಗಿದೆ. ಎಷ್ಟು ವರ್ಷಗಳ ಅವಧಿಗೆ ನೀಡಲಾಗಿದೆ? ಅದರ ಮೊತ್ತ ಎಷ್ಟು? ಜಿಂದಾಲ್ ಕಂಪನಿ ಎಂಎಂಎಲ್‌ಗೆ ಬಾಕಿ ಉಳಿಸಿಕೊಂಡಿರುವ ಹಣ ಎಷ್ಟು? ಎಂಬೆಲ್ಲಾ ವಿಚಾರಗಳೂ ಸೇರಿ ಒಟ್ಟು 15 ಪ್ರಶ್ನೆಗಳನ್ನು ಶಾಸಕ ರವಿ ರಾಜ್ಯ ಸಮಿಶ್ರ ಸರ್ಕಾರಕ್ಕೆ ಎಸೆದಿದ್ದಾರೆ. ತಮ್ಮ ಪತ್ರದ ಮೂಲಕ ಸಾರ್ವಜನಿಕರ ಸಂಶಯ ಹಾಗೂ ನನ್ನ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದೂ ಶಾಸಕರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.