ETV Bharat / state

'ಜಗದೀಶ್ ಶೆಟ್ಟರ್ ದೆಹಲಿ ಭೇಟಿ' ಬಗ್ಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ: ಸಿ.ಟಿ.ರವಿ

author img

By

Published : Sep 11, 2020, 3:21 PM IST

ನಾಯಕತ್ವದ ಬದಲಾವಣೆಯ ಪ್ರಶ್ನೆಯೇ ಇಲ್ಲ. ಕೆಲವರು ಸುಮ್ಮನೆ ಇಂತಹ ಪ್ರಶ್ನೆಗಳನ್ನು ತೇಲಿ ಬಿಡುತ್ತಾರೆ. ಯಡಿಯೂರಪ್ಪನವರೇ ನಮ್ಮ ಮುಖ್ಯಮಂತ್ರಿಗಳು. ಅವರೇ ಮುಂದುವರೆಯುತ್ತಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಸ್ಪಷ್ಟಪಡಿಸಿದ್ದಾರೆ.

C T Ravi
ಸಿಟಿ ರವಿ

ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ದೆಹಲಿ ಭೇಟಿ ಬಗ್ಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡವೆಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ದೆಹಲಿ ರಾಜಕೀಯ ವಲಯದಲ್ಲಿ ನಮ್ಮ ರಾಜ್ಯದ ಚರ್ಚೆ ಆಗುತ್ತಿಲ್ಲ. ಮಧ್ಯಪ್ರದೇಶ, ಬಿಹಾರ ಚುನಾವಣೆಯ ಬಗ್ಗೆ ದೆಹಲಿ ನಾಯಕರು ಮಗ್ನರಾಗಿದ್ದಾರೆ. ಮುಖ್ಯಮಂತ್ರಿಗಳು ಕೂಡ ಮುಂದಿನ ವಾರದಲ್ಲಿ ದೆಹಲಿಗೆ ತೆರಳುವ ಕುರಿತು ಹೇಳಿದ್ದಾರೆ. ಅವರು ಬಂದ ನಂತರ ಸಚಿವ ಸಂಪುಟ ವಿಸ್ತರಣೆ ಹಾಗೂ ಯಾರನ್ನು ತೆಗೆದುಕೊಳ್ಳುತ್ತಾರೆ ಎನ್ನುವುದು ಸ್ಪಷ್ಟವಾಗುತ್ತೆ ಎಂದರು.

ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ

ನಾಯಕತ್ವದ ಬದಲಾವಣೆಯ ಪ್ರಶ್ನೆಯೇ ಇಲ್ಲ. ಕೆಲವರು ಸುಮ್ಮನೆ ಇಂತಹ ಪ್ರಶ್ನೆಗಳನ್ನು ತೇಲಿ ಬಿಡುತ್ತಾರೆ. ಯಡಿಯೂರಪ್ಪನವರೇ ನಮ್ಮ ಮುಖ್ಯಮಂತ್ರಿಗಳು. ಅವರೇ ಮುಂದುವರೆಯುತ್ತಾರೆ ಎಂದ ಅವರು, ಸಿಎಂ ಯಡಿಯೂರಪ್ಪ, ಹೆಚ್.ಡಿ.ಕೆ ಭೇಟಿ ವಿಚಾರ ಮಾತನಾಡಿ, ಅವರಿಬ್ಬರು ಯಾವ ಉದ್ದೇಶದಿಂದ ಭೇಟಿಯಾಗಿದ್ದಾರೋ ಗೊತ್ತಿಲ್ಲ. ಕ್ಷೇತ್ರದ ಅಭಿವೃದ್ಧಿ ಕಾರಣವೋ, ಮುಂದಿನ ವಿಧಾನಸಭಾ ಅಧಿವೇಶನದ ಬಗ್ಗೆ ಚರ್ಚೆಯೋ ಗೊತ್ತಿಲ್ಲ. ಕೇಂದ್ರದಿಂದ ಆ ರೀತಿಯ ಯಾವುದೇ ಚರ್ಚೆಯಾಗಲಿ, ಸೂಚನೆಯಾಗಲಿ ನಮಗಿಲ್ಲ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.