ETV Bharat / state

ಹಳ್ಳಕ್ಕೆ ಕಸ ಎಸೆದ ಯುವಕನಿಗೆ ಶಾಸಕ ಸಿ ಟಿ ರವಿ ತರಾಟೆ - ಹಳ್ಳಕ್ಕೆ ಕಸ ಎಸೆದ ಯುವಕನಿಗೆ ಶಾಸಕ ಸಿ ಟಿ ರವಿ ತರಾಟೆ

ಮುಂದಿನ ದಿನಗಳಲ್ಲಿ ಸ್ವಚ್ಛತೆಯ ಕಡೆಗೆ ಎಲ್ಲರೂ ಹೆಚ್ಚಿನ ಒಲವು ನೀಡಬೇಕೆಂದು ಅಧಿಕಾರಿಗಳು ಆಗ್ರಹಿಸಿದ್ದಾರೆ.

c-t-ravi-outrage-against-young-man-who-throws-garbage-into-river
ಹಳ್ಳಕ್ಕೆ ಕಸ ಎಸೆದ ಯುವಕನಿಗೆ ಶಾಸಕ ಸಿ ಟಿ ರವಿ ತರಾಟೆ
author img

By

Published : Dec 27, 2021, 6:23 PM IST

ಚಿಕ್ಕಮಗಳೂರು: ರಸ್ತೆ ಬದಿಗೆ ಕಸ ಎಸೆಯುತ್ತಿದ್ದ ಯುವಕನನ್ನು ಶಾಸಕ ಸಿ ಟಿ ರವಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಹಳ್ಳಕ್ಕೆ ಕಸ ಎಸೆದ ಯುವಕನಿಗೆ ಶಾಸಕ ಸಿ ಟಿ ರವಿ ತರಾಟೆ

ತಾಲೂಕಿನ ಮಲ್ಲಂದೂರು ರಸ್ತೆಯ ಉಪ್ಪಳ್ಳಿ ಚಿತಾಗಾರದ ರಸ್ತೆಯ ಸಮೀಪದಲ್ಲಿರುವ ಹಳ್ಳಕ್ಕೆ ಯುವಕನೊಬ್ಬ ಕಸ ತಂದು ಎಸೆಯುವ ಸಂದರ್ಭದಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಶಾಸಕ ಸಿ ಟಿ ರವಿ ಗಮನಿಸಿದ್ದಾರೆ. ನಂತರ ನಡು ರಸ್ತೆಯಲ್ಲೇ ಯುವಕನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಮನೆಯ ಸಮೀಪಕ್ಕೆ ಕಸ ವಿಲೇವಾರಿ ಮಾಡುವ ವಾಹನ ಬಂದರೂ ಕೂಡ ಈ ರೀತಿಯ ವರ್ತನೆ ಮಾಡುವುದು ಎಷ್ಟು ಸರಿ?. ಇನ್ನೊಂದು ಬಾರಿ ಈ ರೀತಿ ನಡೆದುಕೊಂಡರೆ ಸರಿ ಇರುವುದಿಲ್ಲ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.

ಒಂದೆಡೆ ಸ್ವಚ್ಛತೆಯೆಡೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಸಲುವಾಗಿ ಸರ್ಕಾರ ಹಲವಾರು ಯೋಜನೆಗಳ ಮೂಲಕ ಹಾಗೂ ವಿವಿಧ ರೀತಿಯಲ್ಲಿ ಜನರಿಗೆ ಅರಿವನ್ನು ಮೂಡಿಸುತ್ತಿದ್ದರೆ, ಇನ್ನೊಂದೆಡೆ ಸಮಾಜವನ್ನು ಬದಲಾಯಿಸಬೇಕಾದ ಯುವಕರು ಈ ರೀತಿಯಾಗಿ ನಡೆದುಕೊಳ್ಳುವುದು ಅವರ ವ್ಯಕ್ತಿತ್ವ ಬಿಂಬಿಸುತ್ತದೆ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸ್ವಚ್ಛತೆಯ ಕಡೆಗೆ ಎಲ್ಲರೂ ಹೆಚ್ಚಿನ ಒಲವು ನೀಡಬೇಕೆಂದು ಅಧಿಕಾರಿಗಳು ಆಗ್ರಹಿಸಿದ್ದಾರೆ.

ಓದಿ: ಗ್ರಾಮ ಪಂಚಾಯತ್ ವಿರುದ್ಧ ಸುಳ್ಳು ಆರೋಪ ಮಾಡಿದ್ದ ಸಂಸ್ಥೆಗೆ ₹1 ಲಕ್ಷ ದಂಡ: ಹೈಕೋರ್ಟ್ ಆದೇಶ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.