ಚಿಕ್ಕಮಗಳೂರು: ತಾಲೂಕಿನ ತಿಮ್ಮನಹಳ್ಳಿ ಗ್ರಾಮಕ್ಕೆ ಶಾಸಕ ಸಿ.ಟಿ.ರವಿ ಭೇಟಿ ನೀಡಿ ಕೀಲು ನೋವಿನಿಂದ ಬಳಲುತ್ತಿರುವ ಗ್ರಾಮಸ್ಥರ ಯೋಗಕ್ಷೇಮ ವಿಚಾರಿಸಿದರು.
ಕಳೆದ 23 ದಿನಗಳಿಂದ ಈ ಕಾಯಿಲೆ ಒಬ್ಬರಿಂದೊಬ್ಬರಿಗೆ ಹರಡುತ್ತ ಬಂದಿದೆ ಎಂಬ ಮಾಹಿತಿಯನ್ನು ವೈದ್ಯರು ಶಾಸಕ ಸಿ.ಟಿ.ರವಿ ಅವರಿಗೆ ನೀಡಿದ್ದು, ಈ ಗ್ರಾಮದಲ್ಲಿರುವ 120 ಮನೆಗಳಲ್ಲೂ ಈ ಕಾಯಿಲೆ ಹರಡಿದೆ. ಎಲ್ಲ ಮನೆಗಳಲ್ಲೂ ಒಬ್ಬರಲ್ಲ ಒಬ್ಬರು ರೋಗಿಗಳಿದ್ದಾರೆ. ಇದನ್ನು ಬಹಳ ಗಂಭೀರವಾಗಿ ತೆಗೆದುಕೊಂಡು ಗ್ರಾಮಸ್ಥರ ಬಗ್ಗೆ ಎಚ್ಚರ ವಹಿಸಿ ಕಾಯಿಲೆ ಗುಣಪಡಿಸುವಂತೆ ಸೂಚನೆ ನೀಡಿದರು.
ಈ ವೇಳೆ ರೋಗಿಗಳ ಜೊತೆ ಚರ್ಚಿಸಿ ನಿಮಗೆ ಯಾವುದೆ ರೀತಿಯ ಸಮಸ್ಯೆ ಬಾರದಂತೆ ಆರೋಗ್ಯ ಕಾಪಾಡಿಕೊಳ್ಳಲು ಮುಂಜಾಗೃತ ಕ್ರಮದ ಬಗ್ಗೆ ಯೋಚಿಸಿ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಲು ಜಿಲ್ಲಾಡಳಿತದೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು.