ETV Bharat / state

ವೆಂಕಟೇಶನಿಂದ ಬಿಎಸ್​ವೈಗೆ ಪ್ರಸಾದ... ಚರ್ಚೆಗೆ ಗ್ರಾಸ! - ಚಿಕ್ಕಮಗಳೂರು

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ದೇವರ ಹಣೆಯಿಂದ ಪ್ರಸಾದ ದೊರೆತಿರುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕೊಪ್ಪ ತಾಲೂಕಿನ ಗೌರಿಗದ್ದೆಯ ವಿನಯ ಗುರೂಜಿ ಆಶ್ರಮದಲ್ಲಿ ಬಿಎಸ್​ವೈ ಪೂಜೆ ಸಲ್ಲಿಸುವ ವೇಳೆ ಬಲಭಾಗಕ್ಕೆ ಬಿದ್ದ ವಿಗ್ರಹದ ನಾಮ ಈಗ ಚರ್ಚೆಗೆ ಗ್ರಾಸವಾಗಿದೆ.

ಬಿಎಸ್​ವೈ
author img

By

Published : Sep 15, 2019, 2:39 PM IST

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆಯ ವಿನಯ ಗುರೂಜಿ ಆಶ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ದೇವರ ಹಣೆಯಿಂದ ಪ್ರಸಾದ ದೊರೆತಿರುವ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ವಿನಯ ಗುರೂಜಿ ಆಶ್ರಮದಲ್ಲಿ ಪೂಜೆ ನೆರವೇರಿಸಿದ ಬಿಎಸ್​ವೈ

ಸದ್ಯ ಇದು ಶುಭ ಪ್ರಸಾದನಾ ಎನ್ನುವ ರೀತಿಯಲ್ಲಿ ಚರ್ಚೆ ಆಗುತ್ತಿದೆ. ಕಳೆದ ಗುರುವಾರ ವಿನಯ ಗುರೂಜಿ ನೇತೃತ್ವದಲ್ಲಿ ಆಶ್ರಮದಲ್ಲಿ ವಿಷ್ಣು ಸಹಸ್ರನಾಮ ನೆರೆವೇರಿಸಲಾಗಿತ್ತು. ವಿನಯ ಗುರೂಜಿ ಆಶ್ರಮದಲ್ಲಿರುವ ವಿಷ್ಣು ವಿಗ್ರಹಕ್ಕೆ ಮಂಗಳಾರತಿ ಮಾಡುವ ವೇಳೆ ಬಲಭಾಗಕ್ಕೆ ಬಿದ್ದ ವಿಗ್ರಹದ ನಾಮ ಬಿಎಸ್​ವೈ ಪ್ರಸಾದವಾಗಿ ಸಿಕ್ಕಿತ್ತು.

ನಾಮ ಬಿದ್ದ ತಕ್ಷಣ ಬಿಎಸ್​ವೈ, ಶೋಭಾ ಕರಂದ್ಲಾಜೆ ಬಳಿಗೆ ವಿನಯ ಗುರೂಜಿ ಆಗಮಿಸಿ ಇಬ್ಬರ ಜೊತೆ ಮಾತಾಡಿ ಪೂಜೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಸಂಸದೆ ಶೋಭ ಕರಂದ್ಲಾಜೆ, ಸಚಿವ ಸಿ.ಟಿ.ರವಿ ಹಾಗೂ ಶೃಂಗೇರಿ ಶಾಸಕ ರಾಜೇಗೌಡ ಬಿ ಎಸ್ ವೈಗೆ ಸಾಥ್ ನೀಡಿದರು. ಇನ್ನು ಈ ಬಗ್ಗೆ ಬಿಎಸ್​ವೈಗೆ ಒಳ್ಳೆಯ ಶಕುನವೆಂದು ಕೆಲವರು ಹೇಳುತ್ತಿದ್ದರೆ ಮತ್ತೆ ಕೆಲವರು ಅಪಶುಕನ ಎನ್ನುವ ರೀತಿಯಲ್ಲಿ ಚರ್ಚೆ ಮಾಡುತ್ತಿದ್ದಾರೆ.

Intro:Kn_ckm_05_Nama prasada_av_7202347Body:ಚಿಕ್ಕಮಗಳೂರು : -

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆಯ ವಿನಯ್ ಗುರೂಜಿ ಆಶ್ರಮದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ದೇವರ ಹಣೆಯಿಂದ ವಿಚಿತ್ರ ಪ್ರಸಾದವಾಗಿದೆ.ಸದ್ಯ ಇದು ಶುಭ ಅಥವಾ ಅ ಶುಭ ಪ್ರಸಾದನ ಎನ್ನುವ ರೀತಿಯಲ್ಲಿ ಚರ್ಚೆ ಆಗುತ್ತಿದ್ದು ಬಿ.ಎಸ್.ವೈ ಗೆ ಶುಭ-ಅಶುಭ ಎನ್ನುವ ರೀತಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ.ಆಶ್ರಮದಲ್ಲಿರುವ ದೇವರಿಗೆ ವಿಷ್ಣು ಸಹಸ್ರನಾಮ ಹೇಳುವ ವೇಳೆ ಬಿ ಎಸ್ ವೈ ಗೆ ದೇವರಿಗೆ ಹಾಕಿದ ನಾಮ ಪ್ರಸಾದವಾಗಿ ಸಿಕ್ಕಿದೆ. ಕಳೆದ ಗುರುವಾರ ವಿನಯದ ಗುರೂಜಿ ನೇತೃತ್ವದಲ್ಲಿ ಆಶ್ರಮದಲ್ಲಿ ವಿಷ್ಣು ಸಹಸ್ರನಾಮ ನೆರೆವೇರಿಸಲಾಗಿತ್ತು. ವಿನಯ್ ಗುರೂಜಿ ಆಶ್ರಮದಲ್ಲಿರುವ ವಿಷ್ಣು ವಿಗ್ರಹಕ್ಕೆ ಮಂಗಳರಾತಿ ಮಾಡುವ ವೇಳೆ ಬಲಭಾಗಕ್ಕೆ ಬಿದ್ದ ವಿಗ್ರಹದ ನಾಮ.ಪ್ರಸಾದವಾಗಿ ಬಿದಿದ್ದು ವಿಗ್ರಹದಿಂದ ನಾಮ ಬಿದ್ದ ಪರಿಣಾಮ ಈಗ ಈ ಕುರಿತು ಚರ್ಚೆ ಆಗುತ್ತಿದೆ. ಬಿಎಸ್ ವೈ ಗೆ ಒಳ್ಳೆಯ ಶುಕುನವೆಂದು ಕೆಲವರು ಹೇಳುತ್ತಿದ್ದರೆ ಮತ್ತೆ ಕೆಲವರು ಅಪಶುಕನ ಎನ್ನುವ ರೀತಿಯಲ್ಲಿ ಚರ್ಚೆ ಮಾಡುತ್ತಿದ್ದಾರೆ. ನಾಮ ಬಿದ್ದ ತಕ್ಷಣ ಬಿಎಸ್ ವೈ, ಶೋಭಾ ಕರಂದ್ಲಾಜೆ ಬಳಿಗೆ ವಿನಯ್ ಗುರೂಜಿ ಆಗಮಿಸಿ ಇಬ್ಬರು ಕಿವಿಯಲ್ಲಿ ಮಾತಾಡಿ ಪೂಜೆ ಗೆ ತೆರಳಿದ್ದಾರೆ. ಸುಭದ್ರ ಸರ್ಕಾರಕ್ಕಾಗಿ ಯಾಗ ನಡೆಸಿದ್ದಾರೆ ಎನ್ನುಲಾಗುತ್ತಿದ್ದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಗೌರಿಗದ್ದೆಯಲ್ಲಿ ಹೋಮ ಹವನ ನಡೆಸಿದರು.ಈ ಸಂದರ್ಭದಲ್ಲಿ ಸಂಸದೆ ಶೋಭ ಕರಂದ್ಲಾಜೆ, ಸಚಿವ ಸಿ.ಟಿ.ರವಿ, ಹಾಗೂ ಶೃಂಗೇರಿ ಶಾಸಕ ರಾಜೇಗೌಡ ಬಿ ಎಸ್ ವೈಗೆ ಸಾಥ್ ನೀಡಿದರು...

Conclusion:ರಾಜಕುಮಾರ್...
ಈಟಿವಿ ಭಾರತ್...
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.