ಚಿಕ್ಕಮಗಳೂರು: ಕೆರೆಗೆ ಈಜಲು ಹೋಗಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದ ಕೆಂಪನಹಳ್ಳಿ ಸಮೀಪದ ಚಂದ್ರಕಟ್ಟೆಯಲ್ಲಿ ನಡೆದಿದೆ.
ಮೃತ ಬಾಲಕನನ್ನು ಲಕ್ಯಾ ಗ್ರಾಮದ ಹುಲಿಯಪ್ಪ ಅವರ ಮಗ ಸುಹಾಸ್ ಎಂದು ಗುರುತಿಸಲಾಗಿದೆ. ಕೆಂಪನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 6 ನೇ ತರಗತಿ ಓದುತ್ತಿದ್ದ. ಶಾಲೆಗೆಂದು ತೆರಳಿ ಸುಹಾಸ್ ಸೇರಿದಂತೆ ಮೂವರು ಬಾಲಕರು ಈಜಲು ಕೆರೆಗೆ ಹೋಗಿದ್ದರು. ಈ ವೇಳೆ ದುರಂತ ಸಂಭವಿಸಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಹಾಗೂ ಸ್ಥಳೀಯ ಈಜುಗಾರರು ಶೋಧಕಾರ್ಯ ನಡೆಸಿ ಬಾಲಕನ ಶವನ್ನು ಹೊರ ತೆಗೆದರು. ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.