ಚಿಕ್ಕಮಗಳೂರು : ಹಿಜಾಬ್ ವಿರುದ್ಧ ಧ್ವನಿಯೆತ್ತಲು ವಿದ್ಯಾರ್ಥಿಗಳು ಕೇಸರಿ ಶಾಲುಗಳ ಹಾಕಿಕೊಂಡು ಹೋರಾಟ ನಡೆಸುತ್ತಿದ್ದಾರೆ. ಆದರೆ ಈ ಕೇಸರಿ ಶಾಲು ವಿದ್ಯಾರ್ಥಿಗಳ ವಿರುದ್ಧವಾಗಿ ನೀಲಿ ಶಾಲು ಹಾಕಿಕೊಂಡು ವಿದ್ಯಾರ್ಥಿಗಳು ಹಿಜಾಬ್ಗೆ ಬೆಂಬಲ ಸೂಚಿಸುತ್ತಿದ್ದಾರೆ.
ಚಿಕ್ಕಮಗಳೂರು ಐಡಿಎಸ್ಜಿ ಕಾಲೇಜಿನಲ್ಲಿ ನೀಲಿ ಶಾಲು ಪ್ರತ್ಯಕ್ಷವಾಗಿದೆ. ಕಾಲೇಜ್ನಲ್ಲಿ ಹಿಜಾಬ್ ತೆಗೆಸಬಾರದು ಎಂದು ನೀಲಿ ಶಾಲು ಧರಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಜೈ ಭೀಮ್ ಘೋಷಣೆ ಕೂಗುತ್ತಾ ಕೆಲ ನೀಲಿ ಶಾಲು ಧರಿಸಿದ್ದ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಪ್ರತಿಯಾಗಿ ಕೇಸರಿ ಶಾಲು ಧರಿಸಿರುವ ವಿದ್ಯಾರ್ಥಿಗಳಿಂದ ಜೈ ಶ್ರೀರಾಮ್ ಘೋಷಣೆಯಾಗುತ್ತಿದೆ.
ಓದಿ: ಮೈಸೂರು: ತಿಂಡಿ ತಿನ್ನಲು ಬಂದ ವಿದ್ಯಾರ್ಥಿ ಹೋಟೆಲ್ನಲ್ಲೇ ಹೃದಯಾಘಾತದಿಂದ ಸಾವು! ವಿಡಿಯೋ
ಮೊದಲಿನಿಂದಲೂ ಕಾಲೇಜ್ನಲ್ಲಿ ಹಿಜಾಬ್ ಸಂಸ್ಕೃತಿ ನಡೆಯುತ್ತಲೇ ಬಂದಿದೆ. ಈಗ ಏಕೆ ಹಿಜಾಬ್ ತಿರಸ್ಕರಿಸಬೇಕು. ಅವರಿಂದ ನಮಗೇನು ನಷ್ಟವಾಗಿದೆ ಎಂದು ನೀಲಿ ಶಾಲಿನ ವಿದ್ಯಾರ್ಥಿಗಳ ವಾದವಾಗಿದೆ. ದಿನದಿಂದ ದಿನಕ್ಕೆ ಕಾಲೇಜಿನಲ್ಲಿ ವಿವಾದ ನಾನಾ ತಿರುವುಗಳನ್ನು ಪಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಯಾವುದಕ್ಕೆ ಈ ಪ್ರಕರಣ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.