ಚಿಕ್ಕಮಗಳೂರು: ಬಿ.ಎಸ್. ಯಡಿಯೂರಪ್ಪ ಅವರಂತಹ ಹಿರಿಯರು ಹಾಗೂ ದೊಡ್ಡ ಪಕ್ಷವನ್ನು ಬ್ಲ್ಯಾಕ್ ಮೇಲ್ ಮಾಡಿ ಮಂತ್ರಿಯಾಗಿರುವುದು ರಾಜ್ಯದ ದುರಂತ ಎಂದು ಮಾಜಿ ಸಭಾಪತಿ ಬಿ.ಎಲ್. ಶಂಕರ್ ಹೇಳಿದರು.
ಯಾರು?, ಯಾರನ್ನು?, ಏಕೆ?, ಯಾವ ಕಾರಣಕ್ಕೆ ಬ್ಲ್ಯಾಕ್ ಮೇಲ್ ಮಾಡಿದ್ರು. ಬ್ಲ್ಯಾಕ್ ಮೇಲ್ ಮಾಡಲು ಇದ್ದ ಕಾರಣಗಳೇನು?, ಹಣವೋ, ಭ್ರಷ್ಟಾಚಾರವೋ ಅಥವಾ ನಾಯಕರ ಖಾಸಗಿ ಬದುಕಿನ ವಿಚಾರವೋ ಎಂದು ಎಲ್ಲವನ್ನು ತಿಳಿಯುವ ಹಕ್ಕು ಜನರಿಗಿದೆ. ಎಲ್ಲದರ ಕುರಿತು ಸೂಕ್ತ ತನಿಖೆ ನಡೆಸುವ ಅವಶ್ಯಕತೆ ಇದೆ ಎಂದರು.
ಬಿಜೆಪಿಯಲ್ಲಿ ಮೂವರು ಸಚಿವರು ಬ್ಲ್ಯಾಕ್ ಮೇಲ್ ಮಾಡಿ ಮಂತ್ರಿಯಾಗಿದ್ದಾರೆ. ಬೆಂಗಳೂರು-ಬೆಳಗಾವಿಗೆ ಸೀಮಿತವಾದ ಮಂತ್ರಿ ಮಂಡಲವೆಂದು ಅನೇಕರು ಆರೋಪಿಸಿದ್ದಾರೆ. ಈ ಬಗ್ಗೆ ಬಿಜೆಪಿಯ ಹಿರಿಯ ಮುಖಂಡರೇ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದಾರೆ.