ಚಿಕ್ಕಮಗಳೂರು: ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ವಿರುದ್ಧ ಸಾವಿರಾರು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ಶಾಸಕ ಕುಮಾರಸ್ವಾಮಿಗೆ ಈ ಬಾರಿ ಟಿಕೆಟ್ ನೀಡಬಾರದೆಂದು ಕಾರ್ಯಕರ್ತರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಗೆ ಒತ್ತಾಯಿಸಿದ್ದಾರೆ.
ಚಿಕ್ಕಮಗಳೂರು ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಸಿ.ಟಿ.ರವಿ ನಿವಾಸದಲ್ಲಿ ಸೇರಿದ ಸಾವಿರಾರು ಕಾರ್ಯಕರ್ತರು , ಶಾಸಕ ಎಂಪಿ ಕುಮಾರಸ್ವಾಮಿಗೆ ಟಿಕೆಟ್ ನೀಡದಂತೆ ಪಟ್ಟು ಹಿಡಿದರು. 3 ಬಾರಿ ಶಾಸಕರಾಗಿರುವ ಎಂ.ಪಿ. ಕುಮಾರಸ್ವಾಮಿ ಅವರು, ಗೆದ್ದ ಮೇಲೆ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಸಿಗುತ್ತಿಲ್ಲ. ಯಾವ ಮನವಿಗೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಗ್ರಾಮ ಪಂಚಾಯ್ತಿ ಚುನಾವಣೆಯಿಂದ ಹಿಡಿದು ಯಾವ ಚುನಾವಣೆಯಲ್ಲೂ ಪಕ್ಷದ ಕಾರ್ಯಕರ್ತರಿಗೆ, ಸ್ಥಳೀಯ ಮುಖಂಡರಿಗೆ ಬೆಂಬಲವಾಗಿ ನಿಂತಿಲ್ಲ. ಹೀಗಾಗಿ ನಮಗೆ ಸ್ಪಂದಿಸುವ ಅಭ್ಯರ್ಥಿಗೆ ಈ ಬಾರಿ ಬಿಜೆಪಿ ಟಿಕೆಟ್ ಕೊಡಿ ಎಂದು ಒತ್ತಾಯಿಸಿದರು.
2018 ಚುನಾವಣೆಯಲ್ಲೂ ಇಂಥ ಪರಿಸ್ಥಿತಿ ಇದ್ದರೂ ಎಂಪಿ ಕುಮಾರಸ್ವಾಮಿ ವಿರುದ್ಧ ಯಾವುದೇ ಪಕ್ಷದ ಹಿರಿಯ ನಾಯಕರು ಬದಲಾವಣೆ ಮಾಡಿಲ್ಲ ಎಂದು ಕಾರ್ಯಕರ್ತರು ಆರೋಪಿಸಿದರು.ಹಿಂದಿನ ವಾರವೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಎದುರು ಅಸಮಾಧಾವನ್ನು ಇದೇ ಕಾರ್ಯಕರ್ತರು ವ್ಯಕ್ತಪಡಿಸಿದ್ದರು. ಕಾರ್ಯಕರ್ತರ ಅಸಮಾಧಾನ ಹಿನ್ನೆಲೆ ವಿಜಯ ಸಂಕಲ್ಪಯಾತ್ರೆ ಯಡಿಯೂರಪ್ಪ ಅಂದು ರದ್ದು ಮಾಡಿದ್ದರು.
ಟಿಪ್ಪು ಕಾಲದಲ್ಲಿ ಇದ್ದಿದ್ರೆ ಉರೀಗೌಡ ನಂಜೇಗೌಡ ತರಹ ಇರ್ತಿದ್ದೆ :ಪತ್ರಕರ್ತರೊಂದಿಗೆ ಸಿ.ಟಿ.ರವಿ ಮಾತನಾಡಿ, ಅಶ್ವಥ್ ನಾರಾಯಣ್ ಉರೀಗೌಡ ನಂಜೇಗೌಡ ಕಾಂಗ್ರೆಸ್ ಟ್ವಿಟ್ಗೆ ಸಿ.ಟಿ.ರವಿ ಸಮರ್ಥನೆ ನೀಡಿದ್ದಾರೆ.. ನಾವು ಅವರೇ.. ನಮಗೆ ಅದು ಖುಷಿ... ಹೆಮ್ಮೆ... ಇದೆ. ಗುಲಾಮಿ ಮಾನಸಿಕತೆಯಲ್ಲಿ ಬದುಕುವ ಜನರಿಗಿಂತ ಹಾಗೇ ಕರೆಸಿಕೊಳ್ಳುವುದು ಒಳ್ಳೆಯದು. ಇಂದು ಟಿಪ್ಪು ಇದ್ದಿದ್ರೆ ಆತ ಆಂಜನೇಯ ದೇವಸ್ಥಾನವನ್ನು ಮಸೀದಿ ಮಾಡಿದ್ರೆ ಸುಮ್ನಿರ್ತಿದ್ವಾ ಎಂದು ಸ್ಪಷ್ಟನೆ ನೀಡಿದರು.
ಕೆಲವರು ಸತ್ಯ ಗೊತ್ತಿದ್ರು ಹೇಡಿಗಳಂತೆ ಬದುಕಿದ್ರು. ಓಟಿನ ಆಸೆಗೆ ಒಪ್ಪಿಕೊಳ್ಳಲು ಟಿಪ್ಪು ತಯಾರಿರಲಿಲ್ಲ. ನಾವು ಸತ್ಯವನ್ನು ಪ್ರತಿಪಾದನೆ ಮಾಡಿದೆವು. ಟಿಪ್ಪು ಕಾಲದಲ್ಲಿ ಇದ್ದಿದ್ರೆ ನಾನೇ ಉರಿಗೌಡ ನಂಜೇಗೌಡ ತರಹ ನಿಲ್ಲುತ್ತಿದ್ದೆನು. ಇತಿಹಾಸದಲ್ಲಿ ಮತಾಂಧನ ವಿರುದ್ಧ ಕತ್ತಿ ಎತ್ತಿದವನು ಎನಿಸಿ ಕೊಳ್ಳುತ್ತಿದ್ದೆನು. ಹೇಡಿ ಆಗುತ್ತಿರಲಿಲ್ಲ. ದುರ್ದೈವ... ಕೆಲವರು ಕಪಾಲೇಶ್ವರ ಬೆಟ್ಟವನ್ನು ಮತಾಂತರ ಮಾಡಲು ಹೊರಟಿದ್ದರು ಎಂದು ಆರೋಪಿಸಿದರು.
ಅಂತಹ ಜನ ಇಂದು ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾರೆ.ಗುಲಾಮಿ ಮಾನಸಿಕತೆಯ ಆ ಜನ ಕಪಾಲೇಶ್ವರ ಬೆಟ್ಟವನ್ನು ಮತಾಂತರ ಮಾಡಲು ಮುಂದಾಗಿದ್ದರು. ಹಿಂದೂಗಳಾಗಿ ದೊಡ್ಡ ಮಾತುಗಳನ್ನು ಆಡುತ್ತಾರೆ. ಕಾಫಿಗರ ರಕ್ತಕ್ಕಾಗಿ ನನ್ನ ಖಡ್ಗ ತಹ ತಹಿಸುತ್ತಿದೆ. ಟಿಪ್ಪು ಖಡ್ಗದ ಮೇಲಿದ್ದ ಬರಹ. ಯಾರೂ ಇಸ್ಲಾಂ ಧರ್ಮವನ್ನು ನಂಬೋದಿಲ್ಲವೋ ಅವರೆಲ್ಲರೂ ಕಾಫಿಗರು.ಒಕ್ಕಲಿಗ, ಕುರುಬ, ಲಿಂಗಾಯಿತ, ಜೈನ, ಬ್ರಾಹ್ಮಣ, ಕ್ರಿಶ್ಚಿಯನ್ ಎಲ್ಲರೂ ಕಾಫಿಗರು ಎಂದು ಹೇಳಿದರು.
ಟಿಪ್ಪುವನ್ನು ಮೈಸೂರು ಹುಲಿ, ಕನ್ನಡ ಪ್ರೇಮಿ, ಧರ್ಮ ಸಹಿಷ್ಣು ಎಂದು ಓದಿದ್ದೇವೆ. ನಾವು ಪುಸ್ತಕದಲ್ಲಿ ಓದಿದ್ದು ಬೇರೆ, ವಾಸ್ತವದಲ್ಲಿ ದಾಖಲೆ ಪ್ರಕಾರ ಸತ್ಯವೇ ಬೇರೆ. ರಕ್ತಕ್ಕಾಗಿ ಹಾತೊರೆಯುವನನ್ನು ಮತಾಂಧ ಅಂತ ಇತಿಹಾಸದಲ್ಲಿ ಗುರುತಿ ಸಬೇಕಿತ್ತು ಎಂದು ಹೇಳಿದರು.
ದುರ್ದೈವ ಸರ್ವಧರ್ಮ ಸಹಿಷ್ಣು ಅಂತ ಸುಳ್ಳು ಇತಿಹಾಸ ಬರೆದರು. ವ್ಯಾಪಾರಕ್ಕಾಗಿ ಬಂದ ಬ್ರಿಟಿಷರ್ ಮೋಸದಿಂದ ನಮ್ಮ ಆಳಿದರು ಎಂದು ಓದಿದ್ದೇವೆ. ಅದೇ ರೀತಿ ಹೈದರಾಲಿ ನಂಬಿಕೆ ದ್ರೋಹಿ ಅಂತ ನಮ್ಮ ಪಠ್ಯ ಪುಸ್ತಕದಲ್ಲಿ ಬರೆಯಬೇಕಿತ್ತು ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಸುದ್ದಿಗಾರರಿಗೆ ತಿಳಿಸಿದರು.
ಇದನ್ನೂಓದಿ:ಭಟ್ಕಳದಲ್ಲಿ ಮುಸ್ಲಿಮ್ ಅಭ್ಯರ್ಥಿ ಕಣಕ್ಕಿಳಿಸದಿದ್ದರೆ 'ನೋಟಾ'ಕ್ಕೆ ಮೊರೆ: ಮಹಿಳೆಯರಿಂದ ಎಚ್ಚರಿಕೆ