ETV Bharat / state

ಮುಖ್ಯಮಂತ್ರಿಗಳ ಕುರ್ಚಿ ಅಲುಗಾಡುವ ಕುರ್ಚಿ ಅಲ್ಲ, ಅದು ಸ್ಥಿರವಾಗಿದೆ: ಸಿ.ಟಿ.ರವಿ - ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಲೇಟೆಸ್ಟ್​ ಚಿಕ್ಕಮಗಳೂರು ಭೇಟಿ

ಮುಖ್ಯಮಂತ್ರಿಗಳ ಕುರ್ಚಿ ಅಲುಗಾಡುವ ಕುರ್ಚಿ ಅಲ್ಲ, ಅದು ಸ್ಥಿರವಾಗಿದೆ. ಅದರ ಬಗ್ಗೆ ಯಾವುದೇ ರೀತಿಯ ಅನುಮಾನ ಬೇಡ ಎಂದು ಸಿಎಂ ಕುರ್ಚಿ ಅಲ್ಲಾಡುತ್ತಿದೆ ಎಂದು ಹೇಳಿದ್ದ ಸಿದ್ದರಾಮಯ್ಯ ಮಾತಿಗೆ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.

ct ravi   taunt to siddaramaiah
ಸಿಟಿ ರವಿ ಪ್ರತಿಕ್ರಿಯೆ
author img

By

Published : Jan 2, 2021, 5:57 PM IST

ಚಿಕ್ಕಬಳ್ಳಾಪುರ: ಕೆಲವರು ತಲೆ ಅಲ್ಲಾಡಿಸುತ್ತಿರುತ್ತಾರೆ, ಆಗ ಅವರಿಗೆ ಜಗತ್ತೇ ಅಲುಗಾಡುತ್ತಿದೆ ಅನ್ನೋ ಥರ ಕಾಣುತ್ತೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಸಿ.ಟಿ.ರವಿ ಪ್ರತಿಕ್ರಿಯೆ

ಸಿಎಂ ಕುರ್ಚಿ ಅಲ್ಲಾಡುತ್ತಿದೆ ಎಂದು ಹೇಳಿದ್ದ ಸಿದ್ದರಾಮಯ್ಯ ಮಾತಿಗೆ ಸಿ.ಟಿ.ರವಿ ಈ ರೀತಿ ತಿರುಗೇಟು ನೀಡಿದ್ದು, ನಾನು ಸಿದ್ದರಾಮಯ್ಯನವರಿಗೆ ಕೇಳುತ್ತಿದ್ದೇನೆ. ನಿಮಗೆ ಕುರ್ಚಿ ರಾತ್ರಿ ಹೊತ್ತು ಅಲುಗಾಡೋದು ಕಾಣುತ್ತಿದ್ಯಾ ಅಥವಾ ಹಗಲು ಹೊತ್ತು ಅಲುಗಾಡೋದು ಕಾಣುತ್ತಿದ್ಯಾ? ಯಾವ ಹೊತ್ತು ಕುರ್ಚಿ ಅಲುಗಾಡುತ್ತಿದೆ ಎಂದು ಹೇಳಿದರೆ ಸ್ವಷ್ಟವಾಗಿ ಹೇಳಬಹುದು ಎಂದ್ರು.

ಮುಖ್ಯಮಂತ್ರಿಗಳ ಕುರ್ಚಿ ಅಲುಗಾಡುವ ಕುರ್ಚಿ ಅಲ್ಲ, ಅದು ಸ್ಥಿರವಾಗಿದೆ. ಅದರ ಬಗ್ಗೆ ಯಾವುದೇ ರೀತಿಯ ಅನುಮಾನ ಬೇಡ. ಇನ್ನು ಎರಡೂಕಾಲು ವರ್ಷ ಆಡಳಿತವಿದೆ. ಆಡಳಿತಕ್ಕೆ ಇನ್ನೂ ಚುರುಕು ಮುಟ್ಟಿಸುವಂತಹ ಕೆಲಸ ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದ ಮೇಲಿದೆ. ಹಾಗಾಗಿ ಆಡಳಿತಕ್ಕೆ ಚುರುಕು ಮುಟ್ಟಿಸುವ ಕೆಲಸ ಪ್ರಾರಂಭವಾಗಿದೆ. ಈಗಾಗಲೇ 4 ಮತ್ತು 5ರಂದು ವಿಭಾಗವಾರು ಶಾಸಕರ ಸಭೆಯನ್ನು ಮುಖ್ಯಮಂತ್ರಿಗಳು ಕರೆದಿದ್ದಾರೆ. ಮುಖ್ಯಮಂತ್ರಿಗಳು ಯಾವಾಗ ಬೇಕಾದರೂ ಶಾಸಕಾಂಗ ಪಕ್ಷದ ಸಭೆ ಕರೆಯಬಹುದು ಎಂದರು.

ಇದನ್ನೂ ಓದಿ:ಜೈಲಿನಲ್ಲಿ ಮೂರು ವರ್ಷದ ಮಗು ಸಾವು : ಲಾಕ್‌ಅಪ್​ ಡೆತ್​ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.