ETV Bharat / state

ನಾ ಬಿಡಂಗಿಲ್ಲ, ನೀ ಕೇಳಂಗಿಲ್ಲ: ಮರದ ಬಳ್ಳಿ ನಡುವೆ ಸುತ್ತಿಕೊಂಡು ಕಪ್ಪೆ ತಿಂದು ಹಾಕಿದ ಬಿಲ್ ಮುರಿ ಹಾವು - snake latest videos

ಶೃಂಗೇರಿ ತಾಲೂಕಿನ ಮೆಣಸೆ ಸಮೀಪದ ಕೆರೆಮನೆಯಲ್ಲಿ ಹಾವೊಂದು ಕಪ್ಪೆಯನ್ನ ಬೇಟೆಯಾಡುವ ದೃಶ್ಯವನ್ನು ಪ್ರಗತಿಪರ ರೈತ ಭರತ್ ರಾಜ್ ಸೆರೆ ಹಿಡಿದಿದ್ದಾರೆ. ಈ ಕುರಿತಾದ ವಿಡಿಯೋ ಇಲ್ಲಿದೆ ನೋಡಿ.

Bill Muri snake ate the frog
ಕಪ್ಪೆ ತಿಂದು ಹಾಕಿದ ಬಿಲ್ ಮುರಿ ಹಾವು
author img

By

Published : Feb 5, 2022, 1:10 PM IST

ಚಿಕ್ಕಮಗಳೂರು: ನೀನೆ ನನ್ನ ಆಹಾರವೆಂದು ಹರಸಾಹಸಪಟ್ಟು ಕಪ್ಪೆಯನ್ನ ಮರದ ಬಳ್ಳಿಯ ನಡುವೆ ಸುತ್ತಿಕೊಂಡು ಹಾವೊಂದು ತಿಂದು ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆ ಸಮೀಪದ ಕೆರೆಮನೆಯಲ್ಲಿ ನಡೆದಿದೆ.

ಬಿಲ್ ಮುರಿ (common bronze back tree snake) ಎಂಬ ಅಪರೂಪದ ಹಾವೊಂದು ಕಪ್ಪೆ ಬೇಟೆಯಾಡಿದೆ. ಸಣ್ಣ ಪಕ್ಷಿಗಳು, ಕಪ್ಪೆಗಳನ್ನ ತಿಂದು ಬದುಕುವ ಅಪರೂಪದ ಹಾವು ಇದಾಗಿದ್ದು, ಪೊದೆ, ಮರಗಳಲ್ಲಿ ಈ ಹಾವು ವಾಸ ಮಾಡುವುದು ವಾಡಿಕೆ. ಮರದಲ್ಲಿ ಬಳ್ಳಿಯಂತೆ ನೇತಾಡಿಕೊಂಡಿರುವ ವಿಷಕಾರಿಯಲ್ಲದ ತುಂಬಾ ಅಪರೂಪದ ಹಾವು ಇದು.

ಓದಿ: ಹಿಜಾಬ್ ಹೆಸರಿನಲ್ಲಿ ನಮ್ಮ ಪ್ರದೇಶವನ್ನು ತಾಲಿಬಾನ್ ಮಾಡಲು ಅವಕಾಶ ನೀಡುವುದಿಲ್ಲ: ಕಟೀಲ್​ ಕಿಡಿ

ಕಪ್ಪೆಯನ್ನ ಬಿಲ್ ಮುರಿ ಹಾವು ಬೇಟೆಯಾಡುವ ದೃಶ್ಯವನ್ನು ಪ್ರಗತಿಪರ ರೈತ ಭರತ್ ರಾಜ್ ಸೆರೆ ಹಿಡಿದಿದ್ದಾರೆ. ಈ ಕುರಿತಾದ ವಿಡಿಯೋ ಇಲ್ಲಿದೆ ನೋಡಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.