ETV Bharat / state

ಓವರ್​ ಟೇಕ್ ವೇಳೆ ಬಸ್​ ಡಿಕ್ಕಿ : ಬೈಕ್​ ಸವಾರ ಸ್ಥಳದಲ್ಲೇ ಸಾವು - ಓವರ್​ ಟೇಕ್​ ವೇಳೆ ಅಪಘಾತವಾಗಿ ಯುವಕ ಸಾವು

ಓವರ್​ ಟೇಕ್ ಮಾಡುವ ವೇಳೆ ಅಪಘಾತ ಸಂಭವಿಸಿದ ತರೀಕೆರೆಯ ಯುವಕ ಮೃತಪಟ್ಟಿದ್ದಾನೆ.

Bike rider dies in a bus collision while over take
ತರೀಕೆರೆ ಬಳಿ ಬಸ್​ ಡಿಕ್ಕಿಯಾಗಿ ಬೈಕ್​ ಸವಾರ ಸಾವು
author img

By

Published : Feb 19, 2021, 4:34 PM IST

ಚಿಕ್ಕಮಗಳೂರು : ಓವರ್​ ಟೇಕ್ ಮಾಡುವ ವೇಳೆ ಖಾಸಗಿ ಬಸ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್​ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತರೀಕೆರೆ ತಾಲೂಕಿನ ಕೊಡಿಕ್ಯಾಂಪ್ ಬಳಿಯ ಆಶೀರ್ವಾದ​ ಆಸ್ಪತ್ರೆಯ ಮುಂಭಾಗದಲ್ಲಿ ನಡೆದಿದೆ.

ತರೀಕೆರೆಯ ಕನುಮನಹಟ್ಟಿ ನಿವಾಸಿ ಶಿವರಾಜ್ (22) ಮೃತ ಬೈಕ್ ಸವಾರ. ತರೀಕೆರೆಯ ಖಾಸಗಿ ಶೋ ರೂಮ್​ನ ಉದ್ಯೋಗಿಯಾಗಿರುವ ಶಿವರಾಜ್,​ ಕೆಲಸಕ್ಕೆ ತೆರಳುವ ವೇಳೆ ದುರಂತ ನಡೆದಿದೆ.

ಓದಿ : ಕುಡಿಯುವ ನೀರಿನ ಮೋಟಾರ್​ ಚಾಲನೆ ವೇಳೆ ವಿದ್ಯುತ್​ ತಗುಲಿ ಮಹಿಳೆ ಸಾವು

ಕಳೆದ ಒಂದು ತಿಂಗಳ ಹಿಂದೆ ಶಿವರಾಜ್​ ತಂದೆ ನಿಧನ ಹೊಂದಿದ್ದರು. ಇದೀಗ ಮನೆಯ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ತರೀಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.