ಚಿಕ್ಕಮಗಳೂರು: ಪಾತ್ರೆ ತುಂಬಿಕೊಂಡು ಹೋಗುತ್ತಿದ್ದ ಬೈಕ್ಗೆ ಹಿಂಬದಿಯಿಂದ ರಭಸವಾಗಿ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಗಬ್ಗಲ್ ಗ್ರಾಮದಲ್ಲಿ ಜರುಗಿದೆ.
ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪಾತ್ರೆ ವ್ಯಾಪಾರಿ ಶಿವಾಜಿರಾವ್ ಎಂಬುವರ ಬೈಕ್ಗೆ ಹೆರಾಲ್ಡ್ ಎಂಬ ವ್ಯಕ್ತಿ ವೇಗವಾಗಿ ಬಂದು ಗುದ್ದಿದ್ದಾನೆ. ಪರಿಣಾಮ ಶಿವಾಜಿರಾವ್ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಬಾಳೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.