ETV Bharat / state

ನನ್ನನ್ನು ಸಭೆಗೆ ಕರೆಯಲ್ಲ: ಸಚಿವ ಅಂಗಾರ ವಿರುದ್ಧ ಭೋಜೇಗೌಡ ಕಿಡಿ - ಸಚಿವ ಅಂಗಾರ

ಇದು ನನ್ನ ನೋಡೆಲ್ ಕ್ಷೇತ್ರ. ಜಿಲ್ಲಾ ಬಿಜೆಪಿಯಲ್ಲಿ ಗುಂಪುಗಾರಿಕೆ ಇರೋದು ನನಗೆ ಗೊತ್ತಿದೆ, ಅದನ್ನು ನಿಮ್ಮಲ್ಲಿ ಇಟ್ಟಕೊಳ್ಳಿ ಎಂದು ಸಚಿವ ಅಂಗಾರ ವಿರುದ್ಧ ವಿಧಾನಪರಿಷತ್ ಸದಸ್ಯ ಎಸ್​ಎಲ್ ಭೋಜೇಗೌಡ ಕಿಡಿಕಾರಿದ್ದಾರೆ.

ಸಚಿವ ಅಂಗಾರ ವಿರುದ್ಧ ಭೋಜೇಗೌಡ ಕಿಡಿ
ಸಚಿವ ಅಂಗಾರ ವಿರುದ್ಧ ಭೋಜೇಗೌಡ ಕಿಡಿ
author img

By

Published : Jun 24, 2021, 5:10 PM IST

ಚಿಕ್ಕಮಗಳೂರು: ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಜಿಲ್ಲಾಡಳಿತ ನಡೆಸುವ ಸಭೆಗೆ ನಮ್ಮನ್ನು ಆಹ್ವಾನಿಸುವುದಿಲ್ಲ ಎಂದು ವಿಧಾನಪರಿಷತ್ ಸದಸ್ಯ ಎಸ್​ಎಲ್ ಭೋಜೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವ ಅಂಗಾರ ವಿರುದ್ಧ ಭೋಜೇಗೌಡ ಕಿಡಿ

ಈ ಕುರಿತು ಮಾತನಾಡಿದ ಭೋಜೇಗೌಡ, ಇಲ್ಲಿ ಜಿಲ್ಲಾಧಿಕಾರಿಯನ್ನ ರಾಜಕಾರಣದ ಕೈಗೊಂಬೆ ಮಾಡಿಕೊಂಡಿದ್ದಾರೆ. ಜಿಲ್ಲಾಡಳಿತ ನನ್ನನ್ನ ನಿರ್ಲಕ್ಷ್ಯ ಮಾಡಿದೆ. ಜಿಲ್ಲಾ ಮಂತ್ರಿಗಳಿಗೆ ಪ್ರೋಟೋಕಾಲ್ ಏನೆಂದು ಗೊತ್ತಿಲ್ಲವಾ. ಎಂಟು ಬಾರಿ ಶಾಸಕರಾಗಿದ್ದಾರೆ, ನಾನು ಅವರಿಗೆ ಹೇಳಿ ಕೊಡಬೇಕಾ ಎಂದು ಪ್ರಶ್ನಿಸಿದ್ದಾರೆ.

ನಾನು ಹಲವು ಬಾರಿ ಈ ಬಗ್ಗೆ ಹೇಳಿದ್ದೇನೆ. ಅವರು ನಮಗೆ ಬುದ್ಧಿ ಹೇಳಬೇಕು. ಸರ್ಕಾರ ಅವರಿಗೆ ಜನರ ದುಡ್ಡಲ್ಲಿ ಎಲ್ಲ ಅಧಿಕಾರಿಗಳನ್ನ ನೀಡಿದೆ. ಕೈಗೊಬ್ಬ-ಕಾಲಿಗೊಬ್ಬ ಪಿಎಗಳು ಇದ್ದಾರೆ. ಪಿಎಗಳ ಮೂಲಕ ಶಾಸಕರಿಗೆ ನಿಮ್ಮ ಪ್ರವಾಸದ ಕಾರ್ಯಕ್ರಮವನ್ನು ತಿಳಿಸಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ನಿಮ್ಮ ತಿಂಗಳ ಪ್ರವಾಸದ ಕಾಪಿ ನಮಗೆ ಏಕೆ ಹಾಕುವುದಿಲ್ಲ. ಕಾರ್ಯಕ್ರಮದ ಕಾಪಿಯನ್ನ ಶಾಸಕರಿಗೆ ಏಕೆ ಕಳುಹಿಸಿಲ್ಲ ಎಂದು ಸಚಿವ ಅಂಗಾರ ವಿರುದ್ಧ ಕಿಡಿಕಾರಿದ್ದಾರೆ.

ಓದಿ:ಬಂಧನದ ಭೀತಿ: ನಿರೀಕ್ಷಣಾ ಜಾಮೀನು ಕೋರಿ KTK ಹೈಕೋರ್ಟ್ ಮೊರೆ ಹೋದ Twitter MD

ETV Bharat Logo

Copyright © 2025 Ushodaya Enterprises Pvt. Ltd., All Rights Reserved.