ETV Bharat / state

ಮೂಡಿಗೆರೆಯಲ್ಲಿ ಯುಪಿಎಸ್ ಬ್ಯಾಟರಿ‌ ಕಳ್ಳತನ.. ಇಬ್ಬರು ಅಂದರ್ - ಮೂಡಿಗೆರೆ ಚಿಕ್ಕಮಗಳೂರು ಲೆಟೆಸ್ಟ್ ನ್ಯೂಸ್

ಮೂಡಿಗೆರೆಯಲ್ಲಿ ಬ್ಯಾಟರಿ ಅಂಗಡಿಯೊಂದರ ಬೀಗ ಮುರಿದು 51 ಬ್ಯಾಟರಿಗಳನ್ನು ಹಾಗೂ ಬಿಳಗುಳ ಗ್ರಾಮದಲ್ಲಿರುವ ಮೊಬೈಲ್ ಟವರ್​ನ ಎರಡು ರೆಕ್ಟಿಫೈರ್ ಮಾಡ್ಯೂಲ್​ಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Battery theft Case
Battery theft Case
author img

By

Published : Aug 19, 2020, 6:09 PM IST

ಚಿಕ್ಕಮಗಳೂರು: ಲಕ್ಷಾಂತರ ರೂ. ಮೌಲ್ಯದ ಯುಪಿಎಸ್ ಬ್ಯಾಟರಿ‌ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಮೂಡಿಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ವಾರ ಮೂಡಿಗೆರೆಯಲ್ಲಿ ಬ್ಯಾಟರಿ ಅಂಗಡಿಯೊಂದರ ಬೀಗ ಮುರಿದು 51 ಬ್ಯಾಟರಿಗಳನ್ನು ಹಾಗೂ ಬಿಳಗುಳ ಗ್ರಾಮದಲ್ಲಿರುವ ಮೊಬೈಲ್ ಟವರ್​ನ ಎರಡು ರೆಕ್ಟಿಫೈರ್ ಮಾಡ್ಯೂಲ್​ಗಳನ್ನು ಕಳ್ಳತನ ಮಾಡಿದ್ದರು. ಬೆಳ್ತಂಗಡಿ ತಾಲೂಕಿನ ಕಕ್ಕುಂಜೆಯ ಗಾಂಧಿನಗರದ ರಶೀದ್ (30), ಫಾರುಕ್ (29), ನೌಶಾದ್ (27) ಎಂಬುವವರೇ ರಾತ್ರಿ ವೇಳೆ ಈ ಕಳ್ಳತನ ಎಸಗಿದ ಖದೀಮರು.

ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಮೂಡಿಗೆರೆ ಪೊಲೀಸರು ಬಂಧಿಸಿದ್ದು, ಇನ್ನೋರ್ವ ಆರೋಪಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಬಂಧಿತ ಆರೋಪಿಗಳಿಂದ 1.49 ಲಕ್ಷ ರೂ. ಮೌಲ್ಯದ ಬ್ಯಾಟರಿಗಳನ್ನು ವಶಕ್ಕೆ ಪಡೆಯಲಾಗಿದೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.