ETV Bharat / state

ಚಿಲ್ಲರೆ ಹಣಕ್ಕಾಗಿ ಬಾರ್‌ ಕ್ಯಾಶಿಯರ್ ಕೊಲೆ : 6 ಆರೋಪಿಗಳು ಅರೆಸ್ಟ್ - ಚಿಕ್ಕಮಗಳೂರಿನಲ್ಲಿ ಬಾರ್‌ ಕ್ಯಾಶಿಯರ್ ಕೊಲೆ ಜನರ ಬಂಧನ

ಮುಷ್ಠಿಯಲ್ಲಿ ಎದೆ, ಹೊಟ್ಟೆ ಹಾಗೂ ಮುಖಕ್ಕೆ ಬಲವಾಗಿ ಹೊಡೆದು ಹೋಗಿದ್ದಾರೆ. ಕೆಲಸ ಮುಗಿಸಿ ಮನೆಗೆ ಹೋದ ಯಶ್‍ಪಾಲ್ ಎದೆ ನೋವು ಎಂದು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಹೋಗುವಾಗ ಮಾರ್ಗ ಮಧ್ಯೆ ಹಗರೆ ಬಳಿ ಸಾವನ್ನಪ್ಪಿದ್ದಾರೆ..

Bar cashier murder
ಯಶ್‍ಪಾಲ್ ಮೃತ ಬಾರ್‌ ಕ್ಯಾಶಿಯರ್
author img

By

Published : Apr 5, 2022, 2:31 PM IST

ಚಿಕ್ಕಮಗಳೂರು : 10 ರೂ.ಚಿಲ್ಲರೆ ಹಣಕ್ಕಾಗಿ ಮದ್ಯವ್ಯಸನಿಗಳು ಬಾರ್ ಕ್ಯಾಶಿಯರ್ ಜೊತೆ ಜಗಳವಾಡಿ ಆತನನ್ನ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯ ಪಟ್ಟಣದಲ್ಲಿ ನಡೆದಿದೆ. ಯಶ್‍ಪಾಲ್ (28) ಎಂಬುವರು ಮೃತ ದುರ್ದೈವಿ.

ಯುಗಾದಿ ಹಬ್ಬದ ದಿನವಾದ ಶನಿವಾರ ಸಂಜೆ ಆರು ಗಂಟೆಗೆ ಆರು ಜನ ಯುವಕರು ಸಖರಾಯಪಟ್ಟಣ ಸಮೀಪದ ಅಯ್ಯನಕೆರೆಗೆ ಹೋಗಿದ್ದರು. ಬಳಿಕ ಮದ್ಯದ ಖರೀದಿಗೆ ಬಂದವರು ಚಿಲ್ಲರೆ ಹಣಕ್ಕಾಗಿ ಬಾರಿನ ಮತ್ತೊಬ್ಬ ಕ್ಯಾಶಿಯರ್ ಲಕ್ಷ್ಮಿಶ್ ಎಂಬುವನ ಜತೆ ಮಾತಿನ ಚಕಮಕಿ ನಡೆಸಿದ್ದರು. ಈ ವೇಳೆ, ಬಾರ್ ಮುಂದೆ ಇದ್ದ ಬೈಕ್​ನ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿರುವುದನ್ನ ಕಂಡು ಯಶ್‍ಪಾಲ್ ಆಕ್ಷೇಪಿಸಿದ್ದಾರೆ. ಆಗ 6 ಜನರೂ ಸೇರಿ ಆತನ ಮೇಲೆ ಹಲ್ಲೆ ಮಾಡಿದ್ದಾರೆ.

ಮುಷ್ಠಿಯಲ್ಲಿ ಎದೆ, ಹೊಟ್ಟೆ ಹಾಗೂ ಮುಖಕ್ಕೆ ಬಲವಾಗಿ ಹೊಡೆದು ಹೋಗಿದ್ದಾರೆ. ಕೆಲಸ ಮುಗಿಸಿ ಮನೆಗೆ ಹೋದ ಯಶ್‍ಪಾಲ್ ಎದೆ ನೋವು ಎಂದು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಹೋಗುವಾಗ ಮಾರ್ಗ ಮಧ್ಯೆ ಹಗರೆ ಬಳಿ ಸಾವನ್ನಪ್ಪಿದ್ದಾರೆ. ಮೃತ ಯಶ್‍ಪಾಲ್ ಮನೆಯವರು ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ರಘು, ಪ್ರಕಾಶ್, ಶ್ರೀಧರ್, ಯತೀಶ್, ಮಂಜುನಾಥ್ ಹಾಗೂ ಸಂಜಯ್ ಎಂಬ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಪ್ರೇಮ ವಿವಾಹಕ್ಕೆ ಸಿಗದ ಒಪ್ಪಿಗೆ: ಧಾರವಾಡದಲ್ಲಿ ಪ್ರೇಮಿಗಳ ಆತ್ಮಹತ್ಯೆ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.