ಚಿಕ್ಕಮಗಳೂರು: ಯುವತಿಗೆ ಅಸಭ್ಯ ಮೆಸೇಜ್ ಕಳಿಸಿರುವ ಆರೋಪದಡಿ ಚಿಕ್ಕಮಗಳೂರು ಜಿಲ್ಲೆಯ ಬಜರಂಗದಳದ ಜಿಲ್ಲಾ ಸಂಚಾಲಕ ಹುದ್ದೆ ಹಾಗೂ ಸಂಘ ಪರಿವಾರದಿಂದ ತುಡಕೂರು ಮಂಜುನಾಥ್ರನ್ನ ಉಚ್ಛಾಟನೆ ಮಾಡಲಾಗಿದೆ.
ಜಿಲ್ಲೆಯ ಬಜರಂಗದಳದ ಜಿಲ್ಲಾ ಸಂಚಾಲಕ ಹುದ್ದೆ ಹಾಗೂ ಸಂಘ ಪರಿವಾರದಿಂದ ಮಂಜುನಾಥ್ರನ್ನ ಉಚ್ಛಾಟನೆ ಮಾಡಲಾಗಿದೆ. ಉಚ್ಛಾಟನೆ ಆದೇಶ ಪ್ರತಿ ಹೊರ ಬೀಳುತ್ತಿದ್ದಂತೆ ತುಡುಕೂರು ಮಂಜು ಮಾಡಿದ್ದಾರೆ ಎನ್ನಲಾದ ಕೆಲವೊಂದು ಮೇಸೆಜ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಯುವತಿಗೆ ಅಸಭ್ಯ ಮೇಸೆಜ್ಗಳನ್ನು ಕಳಿಸಿರುವ ಸ್ಕ್ರೀನ್ ಶಾಟ್ಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಮೂಲಕ ಡ್ಯಾಮೇಜ್ ಕಂಟ್ರೋಲ್ಗೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಮುಂದಾಗಿವೆ. ನಾಲ್ಕು ವರ್ಷದಿಂದ ಜಿಲ್ಲಾ ಬಜರಂಗದಳದ ಜಿಲ್ಲಾ ಸಂಚಾಲಕರಾಗಿ ತುಡಕೂರು ಮಂಜು ಕಾರ್ಯನಿರ್ವಹಿಸಿದ್ದರು.