ಚಿಕ್ಕಮಗಳೂರು: ನಗರದ ಶೃಂಗೇರಿ ಶಾರದ ಪೀಠಕ್ಕೆ ಕುಟುಂಬ ಸಮೇತರಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಆಗಮಿಸಿದ್ದರು. ಪೂಜೆ ಮುಗಿಸಿ ವಾಪಾಸ್ ತೆರಳುವಾಗ ಸಮಯಕ್ಕೆ ಸರಿಯಾಗಿ ಹೆಲಿಪ್ಯಾಡ್ಗೆ ಬರಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳುವ ವೇಳೆ ಮಂದ ಬೆಳಕು ಮೂಡುವ ಸಾಧ್ಯತೆಯಿಂದಾಗಿ ಹೆಲಿಕಾಪ್ಟರ್ ಲ್ಯಾಂಡಿಂಗ್ಗೆ ಸಮಸೈಯಾಗಬಹುದು ಎಂದು ಹೆಲಿಕಾಪ್ಟರ್ ಪ್ರಯಾಣವನ್ನು ಸಿಬ್ಬಂದಿ ನಿರಾಕರಿಸಿದ್ದಾರೆ.
4 ಗಂಟೆಗೆ ಶೃಂಗೇರಿಯಿಂದ ಡಿ.ಕೆ.ಶಿ ಹಾಗೂ ಅವರ ಕುಟುಂಬ ಬೆಂಗಳೂರಿಗೆ ಹೋಗಬೇಕಿತ್ತು. ಆದರೆ ದೇವಸ್ಥಾನದಲ್ಲಿ ಕಾರ್ಯಕರ್ತರು ಹಾಗೂ ಭಕ್ತರು ಸೆಲ್ಫಿಗೆ ಮುಗಿಬಿದ್ದ ಕಾರಣ ಹೆಲಿಪ್ಯಾಡ್ಗೆ ಡಿಕೆಶಿ, ಕುಟುಂಬಸ್ಥರು ತಡವಾಗಿ ಆಗಿಮಿಸಿದ್ದರು. ಇದರಿಂದ ಬೆಂಗಳೂರ ತೆರಳುವ ಮಾರ್ಗ ಮಧ್ಯೆ ಮಂದ ಬೆಳಕು ಮೂಡುವ ಸಾಧ್ಯತೆ ಹಿನ್ನೆಲೆ ಹೆಲಿಕಾಪ್ಟರ್ ಪ್ರಯಾಣವನ್ನು ಸಿಬ್ಬಂದಿ ರದ್ದುಗೊಳಿಸಿದ್ದಾರೆ.
ಇದರಿಂದಾಗಿ ಡಿಕೆಶಿ ಕುಟುಂಬಸ್ಥರು ಮಂಗಳೂರಿನಿಂದ ರಾತ್ರಿ 9 ಗಂಟೆಯ ನಂತರ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳಸಲಿದ್ದಾರೆ.