ETV Bharat / state

ಚರಂಡಿ ನೀರು ಪರಿಶೀಲನೆಗೆ ಹೊರಟ ಇಒ ಮೇಲೆ ಹಲ್ಲೆಗೆ ಯತ್ನ !?

author img

By

Published : Jan 23, 2020, 4:15 PM IST

Updated : Jan 23, 2020, 8:02 PM IST

ದೂರಿನ ಪರಿಶೀಲನೆಗೆ ಹೊರಟ ಇಒ ನವೀನ್ ಕುಮಾರ್ ಮೇಲೆ ಹಲ್ಲೆ ಆರೋಪ ಕೇಳಿ ಬಂದಿದೆ. ಚಿಕ್ಕಮಗಳೂರಿನಲ್ಲಿ ಈ ಘಟನೆ ನಡೆದಿದೆ.

ಪರಿಶೀಲನೆಗೆ ಹೊರಟ ಇಒ ಮೇಲೆ ಹಲ್ಲೆಗೆ ಯತ್ನ ಆರೋಪ , Attempts to attack EO  chikmagaluru
ಪರಿಶೀಲನೆಗೆ ಹೊರಟ ಇಒ ಮೇಲೆ ಹಲ್ಲೆಗೆ ಯತ್ನ ಆರೋಪ

ಚಿಕ್ಕಮಗಳೂರು: ಚರಂಡಿ ನೀರು ಬಾವಿಗೆ ಸೇರುತ್ತಿರುವ ಬಗ್ಗೆ ಪರಿಶೀಲನೆ ನಡೆಸಲು ತಾಲೂಕು ಪಂಚಾಯತ್​ನ ಇಒ ಸ್ಥಳಕ್ಕೆ ಹೋದಾಗ, ಸ್ಥಳೀಯ ನಿವಾಸಿಗಳು ಅವರ ಮೇಲೆ ದಬ್ಬಾಳಿಕೆ ನಡೆಸಿ, ಹಲ್ಲೆಗೆ ಯತ್ನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇಒ ನವೀನ್ ಕುಮಾರ್ ಅವರಿಗೆ ಈ ಬಗ್ಗೆ ದೂರು ಬಂದ ಹಿನ್ನೆಲೆ ಕಾರಿನಲ್ಲಿ ಪರಿಶೀಲನೆಗಾಗಿ ಹೋಗುತ್ತಿದ್ದರು. ಇವರು ಗ್ರಾಮದ ಸಮೀಪಕ್ಕೆ ಹೋಗುತ್ತಿದ್ದಂತೆ ಕೆಲವರು ಕಾರನ್ನು ತಡೆದು, ಕಾರಿನ ಕೀ ಕಿತ್ತುಕೊಂಡು ಹಲ್ಲೆಗೆ ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಪರಿಶೀಲನೆಗೆ ಹೊರಟ ಇಒ ಮೇಲೆ ಹಲ್ಲೆಗೆ ಯತ್ನ ಆರೋಪ

ತಮ್ಮನ್ನು ತಳ್ಳಾಡಿದ್ದಲ್ಲದೇ ಏಕ ವಚನದಲ್ಲಿ ಕೆಲ ಸ್ಥಳೀಯರು ಮಾತನಾಡಿದ್ದಾರೆ ಎಂದು ನವೀನ್ ಕುಮಾರ್ ಆರೋಪ ಮಾಡಿದ್ದಾರೆ. ಘಟನೆ ಸಂಬಂಧ ಹರಿಹರಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:Kn_Ckm_03_Kirik_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ತಾಲೂಕ್ ಪಂಚಾಯತ್ ಇ ಓ ಅವರು ಚರಂಡಿ ನೀರು ಬಾವಿಗೆ ಸೇರುತ್ತಿರುವುದನ್ನು ಪರಿಶೀಲನೆ ನೆಡೆಸಲು ಹೋದಾಗ ಸ್ಥಳೀಯ ನಿವಾಸಿಗಳು ಇ ಓ ನವೀನ್ ಕುಮಾರ್ ಅವರ ಮೇಲೆ ದಬ್ಬಾಳಿಕೆ ನಡೆಸಿ ಹಲ್ಲೆಗೆ ಯತ್ನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕುಪ್ಪನ ಮಕ್ಕಿ ಗ್ರಾಮದಲ್ಲಿ ಕೊಪ್ಪ ಇ ಓ ನವೀನ್ ಕುಮಾರ್ ಅವರು ಕಾರಿನಲ್ಲಿ ಆ ಗ್ರಾಮಕ್ಕೆ ಪರಿಶೀಲನೆಗಾಗಿ ಹೋಗುತ್ತಿದ್ದರು. ಕುಡಿಯುವ ನೀರಿನ ಬಾವಿಗೆ ಚರಂಡಿ ನೀರು ಸೇರ್ಪಡೆಯಾಗುತ್ತಿದೆ ಎಂದೂ ಸ್ಥಳೀಯರು ಇ ಓ ನವೀನ್ ಕುಮಾರ್ ಅವರಿಗೆ ದೂರು ನೀಡಿದ್ದರು.ಈ ಕುರಿತು ಪರಿಶೀಲನೆಗೆ ಹೊರಟಾಗ ಗ್ರಾಮದ ಕೆಲವರು ಅವರ ಕಾರನ್ನು ತೆಡೆದು ಕಾರಿನ ಕೀ ಕಿತ್ತುಕೊಂಡು ಹಲ್ಲೆಗೆ ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇ ಓ ಅವರನ್ನು ತಳ್ಳಾಡಿ ಏಕ ವಚನದಲ್ಲಿ ಕೆಲ ಸ್ಥಳೀಯರು ಮಾತನಾಡಿದ್ದಾರೆ ಎಂದೂ ಇ ಓ ನವೀನ್ ಕುಮಾರ್ ಆರೋಪ ಮಾಡಿ ಹರಿಹರಪುರ ಪೋಲಿಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲು ಮಾಡಿದ್ದು ಹರಿಹರಪುರ ಪೋಲಿಸ್ ಠಾಣೆಯ ಪೋಲಿಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಏತಕ್ಕಾಗಿ ಆ ಸ್ಥಳದಲ್ಲಿ ನಡೆದಿದೆ ಎಂಬುದು ಪೋಲಿಸರ ಸಂಪೂರ್ಣ ತನಿಖೆಯ ನಂತರವೇ ಹೊರ ಬರಬೇಕಿದೆ.....

Conclusion:ರಾಜಕುಮಾರ್.....
ಈ ಟಿವಿ ಭಾರತ್.....
ಚಿಕ್ಕಮಗಳೂರು....
Last Updated : Jan 23, 2020, 8:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.