ಚಿಕ್ಕಮಗಳೂರು : ಅವರು ಈಗ ತೋಟದ ಮನೆಗೆ ಕರೆದೊಯ್ದು ಸಂಘಟನೆ ಮಾಡಬೇಕು ಎಂದು ಜೆಡಿಎಸ್ ವಿರುದ್ಧ ಚಿಕ್ಕಮಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ವ್ಯಂಗ್ಯವಾಡಿದ್ದಾರೆ.
ಜೆಡಿಎಸ್ ಏನೇ ಮಾಡಿದ್ರೂ ಬಿಜೆಪಿ ಮಾತ್ರ ನಿತ್ಯ ನೂತನ. ನಮ್ಮ ಸಂಘಟನೆ, ಬೂತ್ ಕಮಿಟಿ ಸದಾ ನಡೆಯುತ್ತೆ. ನಮಗೇನು ಅದು ಆಶ್ಚರ್ಯ ಅನ್ನಿಸಲ್ಲ. ತತ್ವ-ಸಿದ್ಧಾಂತದಡಿ ಪಕ್ಷ ಬೆಳೆಸಿದ್ದೇವೆ, ಅದು ನಿರಂತರವಾಗಿರುತ್ತೆ. ಜೆಡಿಎಸ್ ಮಿಷನ್ 120 ಅವರಿಗೆ ಅನಿವಾರ್ಯ ಎಂದು ಹೇಳಿದರು.
ಹೆಚ್ಚಿನ ಓದಿಗೆ : ಅಭಿವೃದ್ಧಿ, ಉದ್ಯೋಗ ಸೃಷ್ಟಿಯನ್ನು ಬಿಜೆಪಿ ಕಡೆಗಣಿಸಿದೆ: ಹೆಚ್ಡಿಕೆ
ದತ್ತ ಪೀಠದಲ್ಲಿ ಮುಜಾವರ್ ನೇಮಕ ರದ್ದು ಹಿನ್ನೆಲೆ ಈ ಕುರಿತು ಮಾತನಾಡಿದ ಅವರು, ಹೈಕೋರ್ಟ್ ತೀರ್ಪು ಬಂದಿದೆ. ತೀರ್ಪಿನ ಕಾಪಿ ಓದಿಲ್ಲ. ಕೋರ್ಟ್ ತೀರ್ಪಿನ ಆಶಯದಂತೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಕಾಪಿ ಬಂದ ಬಳಿಕ ಪರಿಶೀಲಿಸುತ್ತೇವೆ. ತೀರ್ಪನ್ನ ಓದಿ ಕಾನೂನು ತಜ್ಞರ ಜತೆ ಸಮಾಲೋಚಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.