ETV Bharat / state

ಅನುಸೂಯಾ ಜಯಂತಿ: ದತ್ತಪೀಠಕ್ಕೆ ಸಾವಿರಾರು ಭಕ್ತರ ಆಗಮನ - Religious power

ಚಿಕ್ಕಮಗಳೂರು ನಗರದಲ್ಲಿ ಸಂಕೀರ್ತನಾ ಯಾತ್ರೆ ಕೈಗೊಂಡ ಎಂಟು ಸಾವಿರಕ್ಕೂ ಅಧಿಕ ಮಹಿಳೆಯರು ನಗರದಲ್ಲಿ ಬೃಹತ್ ಪಾದಯಾತ್ರೆಯಲ್ಲಿ ಸಾಗಿ ಅನುಸೂಯಾ ದೇವಿಯ ಪೂಜೆಯಲ್ಲಿ ಪಾಲ್ಗೊಂಡರು.

ಅನುಸೂಯ ಜಯಂತಿ
ಅನುಸೂಯ ಜಯಂತಿ
author img

By

Published : Dec 6, 2022, 9:53 PM IST

Updated : Dec 7, 2022, 3:05 PM IST

ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿರುವ ದತ್ತಪೀಠದ ವಿವಾದಿತ ಇನಾಂ ದತ್ತಾತ್ರೆಯ ಪೀಠದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ದತ್ತ ಜಯಂತಿಗೆ ಇಂದು ಸಂಭ್ರಮದ ಚಾಲನೆ ದೊರೆಯಿತು.

ಮೊದಲನೇ ದಿನ ಅನುಸೂಯಾ ಜಯಂತಿಯ ಪ್ರಯುಕ್ತ ಚಿಕ್ಕಮಗಳೂರು ನಗರದಲ್ಲಿ ಸಂಕೀರ್ತನಾ ಯಾತ್ರೆ ಕೈಗೊಂಡ ಎಂಟು ಸಾವಿರಕ್ಕೂ ಅಧಿಕ ಮಹಿಳೆಯರು, ನಗರದಲ್ಲಿ ಬೃಹತ್ ಪಾದಯಾತ್ರೆ ನಡೆಸಿ ದತ್ತಪೀಠಕ್ಕೆ ತೆರಳಿ ಪೊಲೀಸ್ ಭದ್ರತೆಯಲ್ಲೇ ದತ್ತಪಾದುಕೆಯ ದರ್ಶನ ಪಡೆದರು. ಬಳಿಕ ಅನುಸೂಯಾ ದೇವಿಗೆ ಪೂಜೆ, ಹೋಮ, ಹವನ ನಡೆಸಿದರು. ಮೆರವಣಿಗೆಯಲ್ಲಿ ಶಾಸಕ ಸಿ ಟಿ ರವಿ ಭಾಗಿಯಾಗಿದ್ದರು.

ದತ್ತಪೀಠಕ್ಕೆ ತೆರಳುವ ಮಾರ್ಗದಲ್ಲಿ ಕಿಡಿಗೇಡಿಗಳು ಮೊಳೆ ಸುರಿದಿದ್ದು, ಪೊಲೀಸ್ ವಾಹನ ಸೇರಿ ನಾಲ್ಕೈದು ವಾಹನಗಳು ಪಂಚರ್ ಆಗಿವೆ. ಈ ರೀತಿಯ ಗೊಡ್ಡು ಬೆದರಿಕೆಗೆ ನಾವು ಬಗ್ಗಲ್ಲ. ದತ್ತ ಜಯಂತಿಯನ್ನು ಮತ್ತಷ್ಟು ಅದ್ಧೂರಿಯಾಗಿ ಮಾಡುತ್ತೇವೆ ಸಿ ಟಿ ರವಿ ಹೇಳಿದರು.

ಬಜರಂಗದಳ ಮುಖಂಡ ರಘು ಸಕಲೇಶಪುರ ಅವರು ಮಾತನಾಡಿದರು

ಹಿಂದೂಗಳ ಪೀಠವೆಂದು ಘೋಷಿಸುವಂತೆ ಒತ್ತಾಯ: ದತ್ತಪೀಠವನ್ನು ಹಿಂದೂಗಳ ಪುಣ್ಯಕ್ಷೇತ್ರವೆಂದು ಘೋಷಿಸುವುದರ ಜೊತೆಗೆ ಅನುಸೂಯಾ ದೇವಿಗೆ ಭವನ ನಿರ್ಮಿಸಬೇಕೆಂದು ಭಕ್ತರು ಆಗ್ರಹಿಸಿದ್ದಾರೆ. ಮಂಗಳೂರು, ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದ ದತ್ತಭಕ್ತರು ದತ್ತಪೀಠ ಹಿಂದೂ ಪೀಠ ವೆಂದು ಸರ್ಕಾರ ಘೋಷಿಸುವಂತೆ ಒತ್ತಾಯಿಸಿದರು.

ನಾಳೆ ನಗರದಲ್ಲಿ 50 ಸಾವಿರಕ್ಕೂ ಹೆಚ್ಚು ದತ್ತ ಭಕ್ತರಿಂದ ಬೃಹತ್ ಶೋಭಾಯಾತ್ರೆ ನಡೆಯಲಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಮೊದಲ ಬಾರಿಗೆ ದತ್ತಾತ್ರೇಯ ಪೀಠದಲ್ಲಿ ಅರ್ಚಕರಿಂದ ಪೂಜೆ

Last Updated : Dec 7, 2022, 3:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.