ಚಿಕ್ಕಮಗಳೂರು : ಕೊರೊನಾ ವೈರಸ್ ಭೀತಿ ಹಾಗೂ ಲಾಕ್ಡೌನ್ ನಡುವೆ ಆ್ಯಂಬುಲೆನ್ಸ್ ಗಳ ದುರ್ಬಳಕೆ ಹೆಚ್ಚಾಗಿ ನಡೆಯುತ್ತಿದೆ. ಲಾಕ್ಡೌನ್ ಭೀತಿಯನ್ನೇ ಆ್ಯಂಬುಲೆನ್ಸ್ ಚಾಲಕರು ದುರುಪಯೋಗ ಮಾಡಿಕೊಳ್ಳುತ್ತಿದ್ದು, ಬೆಂಗಳೂರಿನಿಂದ, ಚಿಕ್ಕಮಗಳೂರಿಗೆ 5 ಜನರನ್ನು ಕರೆದುಕೊಂಡು ಬರಲು 28 ಸಾವಿರ ಪಡೆದಿರುವ ಮಾಹಿತಿ ಲಭ್ಯವಾಗಿದೆ.
ಆ್ಯಂಬುಲೆನ್ಸ್ ಮಾಲೀಕ 5 ಜನರಿಂದ 28 ಸಾವಿರ ಪಡೆದು, ಪ್ರಯಾಣಿಕರ ಸಾಗಣೆ ಮಾಡುವ ವೇಳೆ ಪೊಲೀಸರ ಕೈಗೆ ಆ್ಯಂಬುಲೆನ್ಸ್ ಚಾಲಕ ಸಿಕ್ಕಿಬಿದ್ದಿದ್ದಾನೆ. ತರೀಕೆರೆ ತಾಲೂಕಿನ ಲಿಂಗದಹಳ್ಳಿ ಚೆಕ್ ಪೋಸ್ಟ್ ನಲ್ಲಿ ಈ ಆ್ಯಂಬುಲೆನ್ಸ್ ಸಿಕ್ಕಿ ಬಿದ್ದಿದ್ದು, ಬೆಂಗಳೂರಿನಿಂದ ಲಿಂಗದಹಳ್ಳಿ ಸಮೀಪದ ಹೊಸ ಗಂಗೂರಿಗೆ ಪ್ರಯಾಣಿಕರನ್ನು ಕರೆದುಕೊಂಡು ಪ್ರಯಾಣ ಮಾಡಲಾಗುತ್ತಿತ್ತು. KA 53.3894 ಆ್ಯಂಬುಲೆನ್ಸ್ ಪೊಲೀಸರು ವಶಕ್ಕೆ ಪಡೆದಿದ್ದು, ಲಿಂಗದಹಳ್ಳಿ ಪೊಲೀಸರು ಈ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.